Kannada Beatz
News

ಇಂದು ಮ,12-45ಕ್ಕೆ ಕನ್ನಡ ಚಿತ್ರಪ್ರೇಮಿಗಳಿಂದ ‘ಕಾಂತಾರ ಅಧ್ಯಾಯ 1’ ಕನ್ನಡ ಟ್ರೈಲರ್ ಹಾಗೂ ಸ್ಟಾರ್ ನಟರುಗಳಿಂದ ಉಳಿದ 5 ಭಾಷೆಗಳ ಟ್ರೈಲರ್ ಬಿಡುಗಡೆಯಾಯಿತು

ಹೃತಿಕ್ ರೋಷನ್, ಶಿವಕಾರ್ತಿಕೇಯನ್, ಪೃಥ್ವಿರಾಜ್ ಸುಕುಮಾರನ್, ಪ್ರಭಾಸ್ ಅವರಿಂದ, ವಿಶ್ವವೇ ಎದುರು ನೋಡುತ್ತಿರುವ ಕಾಂತಾರ ಅಧ್ಯಾಯ 1′ ಚಿತ್ರದ ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯ ಟ್ರೇಲರ್ ಬಿಡುಗಡೆಯಾಯಿತು.

ಆರಂಭದಿಂದಲೂ ಸಾಕಷ್ಟು ಕುತೂಹಲ, ಕಾತುರ ಮೂಡಿಸಿರುವ, ಹೊಂಬಾಳೆ ಫಿಲಂಸ್ ನಿರ್ಮಾಣ ಹಾಗೂ ರಿಷಬ್ ಶೆಟ್ಟಿ ಅವರ ನಟನೆ ಹಾಗೂ ನಿರ್ದೇಶನದ, ವಿಶ್ವವೇ ಎದುರು ನೋಡುತ್ತಿರುವ, ಬಹು ನಿರೀಕ್ಷಿತ “ಕಾಂತಾರ ಅಧ್ಯಾಯ 1” ಚಿತ್ರವು ಸಪ್ತ ಭಾಷೆಗಳಲ್ಲಿ ಅಕ್ಟೋಬರ್ 2 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಸೆ.22ರ ಸೋಮವಾರ ಮಧ್ಯಾಹ್ನ 12:45ಕ್ಕೆ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳ ಟ್ರೇಲರನ್ನು ಆಯಾ ಭಾಷೆಗಳ ಸ್ಟಾರ್ ನಟರುಗಳು ಬಿಡುಗಡೆ ಮಾಡಿದರು. ಹಿಂದಿ ಟ್ರೇಲರ್ ಅನ್ನು ಹೃತಿಕ್ ರೋಶನ್, ತಮಿಳಿನ ಟ್ರೇಲರ್ ಅನ್ನು ಶಿವಕಾರ್ತಿಕೇಯನ್, ಮಲಯಾಳಂ ಟ್ರೇಲರ್ ಅನ್ನು ಪೃಥ್ವಿರಾಜ್ ಸುಕುಮಾರನ್ ಹಾಗೂ ತೆಲುಗು ಭಾಷೆಯ ಟ್ರೇಲರ್ ಅನ್ನು ಪ್ರಭಾಸ್ ಅವರು ಅನಾವರಣ ಮಾಡಿದರು.
ಕನ್ನಡದ ಕಲಾಭಿಮಾಗಳಿಂದಲೇ ಕನ್ನಡದ “ಕಾಂತಾರ 1” ಚಿತ್ರದ ಟ್ರೇಲರ್ ಬಿಡುಗಡೆಯಾಗಿರುವುದು ವಿಶೇಷ.
ಚಿತ್ರದ ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿದ್ದು, ಈಗಾಗಲೇ ರಿಲೀಸಾಗಿರುವ ಚಿತ್ರದ ಮೇಕಿಂಗ್ ವಿಡಿಯೋ, ಪೋಸ್ಟರ್ ಗಳಿಗೆ ಫಿದಾ ಆಗಿರುವ ಅಭಿಮಾನಿಗಳು ಅಕ್ಟೋಬರ್ 2ರಂದು ಕಾಂತಾರ-1 ಚಿತ್ರವನ್ನು ತೆರೆ ಮೇಲೆ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ.

ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ, ಅರವಿಂದ್ ಎಸ್. ಕಶ್ಯಪ್ ಅವ ಛಾಯಾಗ್ರಹಣ ಹಾಗೂ ಪ್ರಗತಿ ಶೆಟ್ಟಿ ಅವರ ವಸ್ತ್ರ ವಿನ್ಯಾಸ “ಕಾಂತಾರ-೧ ಚಿತ್ರಕ್ಕಿದೆ.

ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಅವರುಗಳು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

‘ಕಾಂತಾರ ಅಧ್ಯಾಯ 1. ಕಲೆ, ಭಕ್ತಿ ಮತ್ತು ಶಕ್ತಿಯ ಮಹತ್ವವನ್ನು ಒಳಗೊಂಡ ಚಿತ್ರವಾಗಿದ್ದು, ಸದಭಿರುಚಿಯ ಚಿತ್ರಗಳನ್ನೇ ನಿರ್ಮಾಣ ಮಾಡುತ್ತಾ ಬಂದಿರುವ ಹೊಂಬಾಳೆ ಫಿಲಂಸ್ ನಿಂದ ಮತ್ತೊಂದು ಅದ್ಭುತ ಚಿತ್ರ ವಿಶ್ವದ ಸಿನಿಪ್ರೇಮಿಗಳಿಗೆ, ಜನರಿಗೆ ವೀಕ್ಷಿಸಲು ಸಿಗುವುದಂತೂ ಖಂಡಿತ.

Related posts

ಮನಸೂರೆಗೊಳ್ಳುತ್ತಿದೆ “ದಾರಿ ಯಾವುದಯ್ಯ ವೈಕುಂಠಕೆ” ಚಿತ್ರದ ಟ್ರೇಲರ್.

Kannada Beatz

ಎಬಿ ಪಾಸಿಟಿವ್’ ಸಿನಿಮಾದ ಮೆಲೋಡಿ ಸಾಂಗ್ ಗೆ ನಾಗೇಂದ್ರ ಪ್ರಸಾದ್ ಹಾಗೂ ಅನೀರುದ್ಧ ಶಾಸ್ತ್ರಿ ಸಾತ್

Kannada Beatz

‘ದಿ ಡೆವಿಲ್‍’ ಚಿತ್ರದ ‘ಇದ್ರೆ ನೆಮ್ದಿಯಾಗ್‍ ಇರ್ಬೇಕು’ ಹಾಡು ಬಿಡುಗಡೆ

Kannada Beatz

Leave a Comment

Share via
Copy link
Powered by Social Snap