Kannada Beatz
News

ಸೆಂಟ್ರಲ್ ಜೈಲಿನಲ್ಲಿರುವ ಖೈದಿಯೊಬ್ಬರಿಂದ ತತ್ವ ಪದ ಹಾಡಿಸಿದ ಪ್ರೇಮಕವಿ ಕೆ. ಕಲ್ಯಾಣ್

ಬೆಂಗಳೂರಿನ ಪರಪ್ಪನ ಅಗ್ರಹಾರದ ಶಿಕ್ಷಾಬಂಧಿಯಾಗಿರುವ ಅರುಣ್ ಆಚಾರ್ ಎಂಬ ವ್ಯಕ್ತಿಯ ಗಾಯನ ಪ್ರತಿಭೆಯನ್ನು ಗುರುತಿಸಿದ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ವರಿಷ್ಠಾಧಿಕಾರಿಗಳು, ಆ ಬಂಧಿತ ಪ್ರತಿಭೆಗೆ ಪ್ರೋತ್ಸಾಹವನ್ನು ನೀಡಲು ಖ್ಯಾತ ಚಲನಚಿತ್ರ ಗೀತರಚನೆಕಾರ ಹಾಗೂ ಸಂಗೀತ ನಿರ್ದೇಶಕರಾದ ಕೆ.ಕಲ್ಯಾಣ್ ಅವರಲ್ಲಿ ಮನವಿ ಮಾಡಿಕೊಂಡಿದ್ದು, ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ಅಲ್ಲಿದ್ದ ಖೈದಿಗಳ ಪ್ರತಿಭೆಗಳನ್ನು ಪರೀಕ್ಷಿಸಿ ಪರಾಮರ್ಶಿಸಿದ ಕೆ. ಕಲ್ಯಾಣ್ ಅವರು,

ಆ ಬಂಧಿತರಲ್ಲಿ ಉತ್ತಮ ಎನಿಸಿದ ಗಾಯಕರೊಬ್ಬರಿಗೆ ಸೂಕ್ತ ತರಬೇತಿಯನ್ನು ಕೊಟ್ಟು ನಗರದ ಪ್ರತಿಷ್ಠಿತ ರೆಕಾರ್ಡಿಂಗ್ ಸ್ಟುಡಿಯೋ ಒಂದರಲ್ಲಿ ಕೆಲವು ತಾಸುಗಳ ಕಾಲ ಹಾಡಿಸಿದ್ದಾರೆ. ಕೆ. ಕಲ್ಯಾಣ್ ರವರೇ ಗೀತರಚನೆ ಹಾಗೂ ಸಂಗೀತ ನಿರ್ದೇಶನವನ್ನು ಮಾಡಿದ್ದು, ಈ ತತ್ವಗೀತೆ ಅಥವಾ ಭಾವಗೀತೆಗೆ ಬಂಧಿತ ವ್ಯಕ್ತಿ ಅರಣ್ ಆಚಾರ್ ಭಾವ ತುಂಬಿ ಹಾಡಿದ್ದಾರೆ. ಈ ಎಲ್ಲಾ ಪ್ರಕ್ರಿಯೆಗಳಿಗೂ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಎಲ್ಲಾ ಪ್ರಮುಖ ವರಿಷ್ಠಾಧಿಕಾರಿಗಳು ಮತ್ತು ರಾಜ್ಯ ಗೃಹ ಇಲಾಖೆ ಸಂಪೂರ್ಣವಾಗಿ ಸಹಕಾರವಿತ್ತಿದ್ದಾರೆ.

ಹಾಗು ಒಂದು ಬಂಧಿತ ನೈಜ ಪ್ರತಿಭೆಯನ್ನು ಸಾಮಾಜಿಕ ಮುನ್ನೆಲೆಗೆ ತರಬೇಕೆಂಬ ಕೆ.ಕಲ್ಯಾಣ್ ರವರ ಮಾನವೀಯ ಕಳಕಳಿಯನ್ನು, ಮತ್ತು ಪರಪ್ಪನ ಅಗ್ರಹಾರದ ಮುಖ್ಯ ಅಧೀಕ್ಷಕರಾದ ಶ್ರೀ ಕೆ ಸುರೇಶ್ ರವರ ಈ ಪ್ರಯತ್ನಕ್ಕೆ ಇಲಾಖೆಯ ವರಿಷ್ಠರೆಲ್ಲರೂ ಶ್ಲಾಘಿಸಿ ಅಭಿನಂದಿಸಿದ್ದಾರೆ.

ಈ ಹಾಡಿನ ಮೇಕಿಂಗ್ ವಿಡಿಯೋವನ್ನು ಕರ್ನಾಟಕ ಘನ ಸರ್ಕಾರದ ಮಾನ್ಯ ಗೃಹ ಮಂತ್ರಿಗಳಾದ ಶ್ರೀ ಜಿ. ಪರಮೇಶ್ವರ್ ಅವರು “Premakavi K Kalyan youtube Channel” ನಲ್ಲಿ ಬಿಡುಗಡೆ ಮಾಡಿದ್ದಾರೆ.

Related posts

“ಕೊರಗಜ್ಜ” ಚಿತ್ರ ದಲ್ಲಿ ಬರುವ “ಗುಳಿಗ”ದೈವಕ್ಕೆ ನಿರ್ದೇಶಕರಿಂದ ಕ್ಷೇತ್ರ ನಿರ್ಮಾಣ, ಅದ್ದೂರಿಯ ಕೋಲ ಸೇವೆ

Kannada Beatz

ಕೋಮಲ್ ಕುಮಾರ್ ಅಭಿನಯದ “ಯಲಾಕುನ್ನಿ” ಮೇರಾ ನಾಮ್ ವಜ್ರಮುನಿ..! ಚಿತ್ರ ಆರಂಭ.
ವಜ್ರಮುನಿ ಮೊಮ್ಮಗ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ..!

Kannada Beatz

‘S/O ಮುತ್ತಣ್ಣ’ನಿಗೆ ಸಾಥ್ ಕೊಟ್ಟ S/O ಮುತ್ತುರಾಜ…ಪ್ರಣಂ ದೇವರಾಜ್ ಹೊಸ ಸಿನಿಮಾಗೆ ಶಿವಣ್ಣ ಬೆಂಬಲ

Kannada Beatz

Leave a Comment

Share via
Copy link
Powered by Social Snap