Kannada Beatz
News

ಹೀರೋ ಆದ ಸಿಂಪಲ್‌ ಸುನಿ ಶಿಷ್ಯ…‘ಮೋಡ ಕವಿದ ವಾತಾವರಣʼಕ್ಕೆ ಯುವ ಪ್ರತಿಭೆ ಶೀಲಮ್‌ ನಾಯಕ

ಸಿಂಪಲ್‌ ಸುನಿ ಹೊಸ ಸಿನಿಮಾ ಘೋಷಣೆ..‘ಮೋಡ ಕವಿದ ವಾತಾವರಣʼ ಮೂಲಕ ಹೀರೋ ಆದ ಶೀಲಮ್

ಕನ್ನಡ ಚಿತ್ರರಂಗಕ್ಕೆ ಹೊಸಮುಖಗಳನ್ನು ಪರಿಚಯಿಸುವುದರಲ್ಲಿ ಫಂಟರ್‌ ಎನಿಸಿಕೊಂಡಿರುವ ಸಿಂಪಲ್‌ ಸುನಿ ಇದೀಗ ಮತ್ತೊಬ್ಬ ಹೊಸ ಹೀರೋವನ್ನು ಸಿನಿಮಾಪ್ರೇಕ್ಷಕರ ಎದುರು ಹಾಜರುಪಡಿಸಿದ್ದಾರೆ. ಸುನಿ ಅವರು ಹೊಸ ಚಿತ್ರ ಮೋಡ ಕವಿದ ವಾತಾವರಣ ಸಿನಿಮಾ ಮೂಲಕ ಶೀಲಮ್‌ ಎಂಬ ಯುವ ಪ್ರತಿಭೆ ನಾಯಕನಾಗಿ ಹೆಜ್ಜೆ ಇಡುತ್ತಿದ್ದಾರೆ. ನಿರ್ದೇಶಕ ಸುನಿ ಅವರೊಂದಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ, ಸಣ್ಣ ಪುಟ್ಟ ಪಾತ್ರಗಳಲ್ಲೂ ಕಾಣಿಸಿಕೊಂಡಿರುವ ಶೀಲಮ್‌ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿಸಿದ್ದಾರೆ. ನಿನ್ನೆ ಬೆಂಗಳೂರಿನ ಕಂಠಿರವ ಸ್ಟುಡಿಯೋದಲ್ಲಿ ಕೊನೆ ದಿನ ಚಿತ್ರೀಕರಣ ಹಮ್ಮಿಕೊಳ್ಳಲಾಗಿತ್ತು.

ಚಿತ್ರೀಕರಣ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ನಿರ್ದೇಶಕ ಸಿಂಪಲ್‌ ಸುನಿ, ಒಂದು ಸರಳ ಪ್ರೇಮಕಥೆ ನನ್ನ ಲೈಫ್‌ನಲ್ಲಿ ಬೇರೆ ರೀತಿ ಸಿನಿಮಾ. ನನ್ನ ಲೈಫ್‌ಗೆ ಬೂಸ್ಟ್‌ ಕೊಡ್ತು. ಇದಾದ ಬಳಿಕ ಕೈಗೆತ್ತಿಕೊಂಡಿರುವ ಸಿನಿಮಾವೇ ‘ಮೋಡ ಕವಿದ ವಾತಾವರಣʼ. ಈ ಚಿತ್ರದ ಮೂಲಕ ಹೊಸ ಹೀರೋ ಲಾಂಚ್‌ ಆಗುತ್ತಿದ್ದಾರೆ. ಹೀರೋ ನಮ್ಮ ಮನೆ ಮಗ. ಶಿಲಮ್‌ ನನ್ನ ಬ್ರದರ್ ಎಂದು ಮಾಹಿತಿ ನೀಡಿದರು.

ನಟ ಶೀಲಮ್‌, ಗುರುಪೂರ್ಣಿಮಾ ದಿನ ಸುನಿ ಸರ್‌ ತಮ್ಮ ಶಿಷ್ಯನನ್ನು ಲಾಂಚ್‌ ಮಾಡಿದ್ದಾರೆ. ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿರುವುದು ನನ್ನ ಅದೃಷ್ಟ. ಈ ಚಿತ್ರದಲ್ಲಿ ಕೆಲಸ ಮಾಡಿರುವ ಟೆಕ್ನಿಷಿಯನ್‌ ದೊಡ್ಡ ಹೀರೋಗಳ ಜೊತೆ ಕೆಲಸ ಮಾಡಿದ್ದಾರೆ. ಒಂದೊಳ್ಳೆ ಟೀಂ ಜೊತೆ ಲಾಂಚ್‌ ಆಗುತ್ತಿರುವುದು ಖುಷಿ ಇದೆ ಎಂದರು.

ನಟಿ ಸಾತ್ವಿಕಾ ಮಾತನಾಡಿ, ಇದು ನನ್ನ ಡ್ರೀಮ್‌ ಪ್ರಾಜೆಕ್ಟ್.‌ ಸುನಿ ಸರ್‌ ಜೊತೆ ಕೆಲಸ ಮಾಡಬೇಕೆಂದು ಕೇಳಿಕೊಂಡಿದ್ದೆ. ಅವರ ಬಳಿ ಕಲಿಯುವುದು ತುಂಬಾನೇ ಇದೆ. ಈ ಜರ್ನಿಯಲ್ಲಿ ಬಹಳಷ್ಟು ಕಲಿತಿದ್ದೇನೆ. ಶೀಲಮ್‌ ಡಿಡಿಕೇಟರ್‌ ಆಕ್ಟರ್.‌ ಅವರು ಸಿನಿಮಾಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಹೇಳಿದರು.

‘ಮೋಡ ಕವಿದ ವಾತಾವರಣʼ ಸಿನಿಮಾದ ಶೂಟಿಂಗ್‌ ಕಂಪ್ಲೀಟ್‌ ಆಗಿದೆ. ರೀ-ರೆಕಾರ್ಡಿಂಗ್‌ ಕೆಲಸಗಳೆಲ್ಲ ಬಹುತೇಕ ಮುಗಿದು ಚಿತ್ರದ ರಿಲೀಸ್‌ಗೆ ತಯಾರಾಗಿದೆ. ಸೈಂಟಿಫಿಕ್‌ ಫಿಕ್ಷನ್‌ ಪ್ರೇಮಕಥಾಹಂದರವನ್ನು ಹೊಂದಿರುವ ‘ಮೋಡ ಕವಿದ ವಾತಾವರಣʼವನ್ನು ‘ಒಂದು ಸರಳ ಪ್ರೇಮಕಥೆ’ ಸಿನಿಮಾ ನಿರ್ಮಾಣ ಮಾಡಿದ್ದ ರಾಮ್‌ ಮೂವೀಸ್ ಈ ಸಿನಿಮಾ ನಿರ್ಮಾಣ ಮಾಡಿದೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ.‌ ಮೋಡ ಕವಿದ ವಾತಾವರಣ ಸಿನಿಮಾಗೆ ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದು, ಜೂಡಾ ಸ್ಯಾಂಡಿ ಹಾಗೂ ಜೇಡ್ ಸಂಗೀತ ನಿರ್ದೇಶನ ಹಾಗೂ ಆದಿತ್ಯ ಕಶ್ಯಪ್ ಸಂಕಲನ‌ ಸಿನಿಮಾಗಿದೆ.

Related posts

ಕಮಲ್ ಶ್ರೀದೇವಿ ಚಿತ್ರ ಇದೇ ವಾರ ಅಂದ್ರೆ 19ನೇ ತಾರೀಖು ರಾಜ್ಯಾದಾದ್ಯಂತ ಬಿಡುಗಡೆಯಾಗ್ತಿದೆ

Kannada Beatz

ಗಂಗಾವತಿಯಲ್ಲಿ “ಸತ್ಯಂ” ಆಡಿಯೋ ಬಿಡುಗಡೆಶ್ರೀ

Kannada Beatz

7 ಸ್ಟಾರ್ ಸುಲ್ತಾನ ಕುರುಬಾನಿ ‘ಟಗರು ಪಲ್ಯ’ ಕ್ಯಾನ್ಸಲ್..ಅಭಿಮಾನಿಗಳು ಹಾಗೂ ಚಿತ್ರತಂಡದ ಒತ್ತಾಯಕ್ಕೆ ಮಣಿದ ಮಾಲೀಕ

Kannada Beatz

Leave a Comment

Share via
Copy link
Powered by Social Snap