ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಇವರದ್ದೇ ಹಾವಳಿ. ಹಳೇ ಕನ್ನಡದ ಹಾಡಿಗಳಿಗೆ ಹೊಸ ಹೆಜ್ಜೆಗಳ ಮೂಲಕ ಜೀವ ತುಂಬುತ್ತಿದ್ದಾರೆ. ಇವ್ರ ನೃತ್ಯಕ್ಕೆ ಮನಸೋತವರಿಲ್ಲ. ಇದೀಗ ಈ ತಂಡದಿಂದ ಸೌಂದರ್ಯ ರಾಕ್ಷಸಿ ಎಂಬ ಸಾಂಗ್ ರಿಲೀಸ್ ಆಗಿದೆ. ಈ ಬಗ್ಗೆ ಒಂದು ಕಲರ್‌ಫುಲ್ ಸ್ಟೋರಿ ಇಲ್ಲಿದೆ ನೋಡಿ.
ಸ್ನೇಹಕ್ಕೆ ಸ್ನೇಹವೇ ಸರಿಸಾಟಿ ಎನ್ನುವಹಾಗೆ ನಾಲ್ಕು ಜನ ಸ್ನೇಹಿತರು ತೋಂಭತ್ತರ ದಶಕದ ಹಾಡುಗಳಿಗೆ ಹೆಜ್ಜೆಹಾಕಿ, ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ. ಈಗ ಇದೇ ನಿಟ್ಟಿನಲ್ಲಿ ಇವರ ಮತ್ತೊಂದು ಹೊಸ ಪ್ರಯತ್ನ ಈ ಕನ್ನಡ ಸಾಂಗ್, ಸೌಂದರ್ಯ ರಾಕ್ಷಸಿ.
ಸೌಂದರ್ಯ ರಾಕ್ಷಸಿ, ಹಾಡಿನ ಶೀರ್ಶಿಕೆ ಸೂಚಿಸುವಹಾಗೆ ಇದು ಹೆಣ್ಣಿನ ವರ್ಣನೆ ಮತ್ತು ಬಣ್ಣನೆಯ ಪ್ರಾಮುಖ್ಯತೆಯುಳ್ಳ ಒಂದು ಸುಮಧುರ ಹಾಡು.
ಈ ಹಾಡಿನಲ್ಲಿ ಒಂದು ಕಥೆಯನ್ನು ಹೇಳಲು ಹೊರಟಿದ್ದಾರೆ ಈ ಯುವಕರು. ಈಗಿನ ಪ್ರೀತಿಗೂ 90ರ ದಶಕದ ಪ್ರೀತಿಗೂ ಇರುವ ವ್ಯತ್ಯಾಸವನ್ನೂ ಹಾಡಿನಲ್ಲಿ ಪ್ರಮುಖವಾಗಿ ಕತೆಯ ಎಳೆಯನ್ನಾಗಿ ಬಳಸಿಕೊಂಡಿದ್ದಾರೆ. ಈ ಹಾಡಿಗೆ ಶಮೀರ್ ಮುಡಿಪು ಅವರ ಸಂಗೀತವಿದ್ದು,
ಯೋಗೆಶ್ ಅವರು ಲೀರಿಕ್ಸ್ ಬರೆದಿದ್ದು, ಶಮೀರ್ ಮತ್ತು ಮಲ್ಲಿಕಾ ಸುಮಧುವಾಗಿ ಹಾಡಿದ್ದು ರಚಿನ್ ಶೆಟ್ಟಿ ಹಾಗೂ ಚಾಣಕ್ಯ ಅವರ ಛಾಯಾಗ್ರಹಣವಿದೆ. ಸಂದೀಪ್ ದೇವಾಡಿಗ, ಮನೋಹರ್, ಪೂಜಾ, ಅನುಪ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಕನ್ನಡ ರಾಜ್ಯೋತ್ಸವದಂದು ಸೌಂಡ್ ಸೀಸನ್ ಯುಟ್ಯೂಬ್ ಚಾನೆಲ್ ನಲ್ಲಿ ಸಾಂಗ್ ರೀಲಿಸ್ ಆಗಿದ್ದು ಯುಟ್ಯೂಬ್ ನಲ್ಲಿ ಸಕತ್ ವ್ಯೂಸ್ ಪಡೆದು ಮುನ್ನೆಡೆಯುತ್ತಿದೆ.