HomeSandalwoodನಟ ಸಾರ್ವಭೌಮ : ಒಂದು ಶೋನ ಎಲ್ಲಾ ಟಿಕೆಟ್ಸ್ ಗಳನ್ನು ಖರೀದಿಸಿದ ಅಭಿಮಾನಿ..!

ನಟ ಸಾರ್ವಭೌಮ : ಒಂದು ಶೋನ ಎಲ್ಲಾ ಟಿಕೆಟ್ಸ್ ಗಳನ್ನು ಖರೀದಿಸಿದ ಅಭಿಮಾನಿ..!

ನಟಸಾರ್ವಭೌಮ ಚಿತ್ರ ಇದೇ ತಿಂಗಳ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು ಈಗಾಗಲೇ ಕ್ರೇಜ್ ಹುಟ್ಟಿಸಿದೆ. ಟೀಸರ್ ಮತ್ತು ಕಾಡು ಹಾಗೂ ಟ್ರೈಲರ್ ನಿಂದ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದ ನಟ ಸಾರ್ವಭೌಮ ಮುಂದಿನ ವಾರ ತೆರೆಗೆ ಅಪ್ಪಳಿಸಲಿದೆ.

ಇನ್ನು ರಣವಿಕ್ರಮ ನಂತರ ಎರಡನೇ ಬಾರಿಗೆ ಪುನೀತ್ ಅವರಿಗೆ ಆ್ಯಕ್ಷನ್ ಕಟ್ ಹೇಳಿರುವ ಪವನ್ ಒಡೆಯರ್ ಅವರು ಚಿತ್ರದ ಬಗ್ಗೆ ತುಂಬಾ ಹೋಪ್ ಇಟ್ಟುಕೊಂಡಿದ್ದು ಅಪ್ಪು ಅಭಿಮಾನಿಗಳಿಗೆ ಕೊಂಚವೂ ಬೇಸರವಾಗದೆ ಇರುವ ರೀತಿ ಚಿತ್ರ ಮಾಡಲಾಗಿದೆ ಎಂದು ಹೇಳಿದ್ದಾರೆ. ನಟ ಸಾರ್ವಭೌಮ ಚಿತ್ರತಂಡ ಚಿತ್ರದ ಮೇಲೆ ಸಖತ್ ಹೋಪ್ ಇಟ್ಟುಕೊಂಡಿದ್ದು ಬ್ಲಾಕ್ ಬಸ್ಟರ್ ಪಕ್ಕಾ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನು ಇಂದು ಬೆಳಿಗ್ಗೆಯಷ್ಟೇ ಬೆಂಗಳೂರಿನ ಕೆಲ ಸಿಂಗಲ್ ಸ್ಕ್ರೀನ್ಗಳಲ್ಲಿ ಬುಕ್ ಮೈಶೋ ಆ್ಯಪ್ ಮುಖಾಂತರ ಮುಂಗಡ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು ಅಭಿಮಾನಿಗಳು ಕಾತುರದಿಂದ ಟಿಕೆಟ್ ಗಳನ್ನು ಖರೀದಿಸಲು ಮುಂದಾಗಿದ್ದಾರೆ. ಇನ್ನು ಊರ್ವಶಿ ಚಿತ್ರಮಂದಿರದಲ್ಲಿ ಮೊದಲನೇ ದಿನ ಆರು ಶೋಗಳನ್ನು ಆಯೋಜಿಸಲಾಗಿದ್ದು ಬೆಳಗ್ಗಿನ ಜಾವ 4 ಗಂಟೆಗೆ ಇದೇ ಮೊದಲ ಬಾರಿಗೆ ಊರ್ವಶಿ ಚಿತ್ರಮಂದಿರದ ಇತಿಹಾಸದಲ್ಲಿ ಶೋವೊಂದನ್ನು ಏರ್ಪಡಿಸಲಾಗಿದೆ.

pc : Creative Guyz

ಪೂರ್ವ ಶ್ರೀ ಚಿತ್ರಮಂದಿರದಲ್ಲಿ ಏರ್ಪಡಿಸಲಾಗಿರುವ ಬೆಳಗಿನ ಜಾವ 4 ಗಂಟೆಯ ಫ್ಯಾನ್ ಶೋನ ಟಿಕೆಟ್ಸ್ ಎಲ್ಲವೂ ಈಗಾಗಲೇ ಸೋಲ್ಡ್ ಔಟ್ ಆಗಿವೆ. ಹೌದು ಫ್ಯಾನ್ಸ್ ಶೋನ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದ್ದು ಬುಕ್ಕಿಂಗ್ ಓಪನ್ ಆದ ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ. ಇದರಲ್ಲಿ ವಿಶೇಷವೇನೆಂದರೆ ಎಲ್ಲಾ ಟಿಕೆಟ್ ಗಳನ್ನು ಅಭಿಮಾನಿಯೊಬ್ಬರು ಖರೀದಿಸಿದ್ದಾರೆ ಎಂಬ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಹೌದು ಅಭಿಮಾನಿಯೊಬ್ಬರು ಊರ್ವಶಿ ಚಿತ್ರಮಂದಿರದ ಎಲ್ಲಾ ಟಿಕೆಟ್ ಗಳನ್ನು ಖರೀದಿಸಿದ್ದಾರೆ ಎಂಬ ಸುದ್ದಿ ಇದ್ದು ಕ್ರೆಸ್ ಮಿತಿ ಮೀರಿ ಹೆಚ್ಚುತ್ತಿದೆ.

Must Read

spot_img
Share via
Copy link
Powered by Social Snap