ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ವುಡ್ ಚಿತ್ರ ಮತ್ತು ಸ್ಟಾರ್ ನಟರ ಅಭಿಮಾನಿಗಳ ಕ್ರೇಜ್ ಕೇವಲ ಥಿಯೇಟರ್ಗಳಿಗೆ ಸೀಮಿತವಾಗದೆ ಸಾಮಾಜಿಕ ಜಾಲ ತಾಣಗಳಲ್ಲಿಯೂ ಸಹ ಜೋರಾಗಿದೆ. ಹೌದು ಸ್ಯಾಂಡಲ್ ವುಡ್ ನಟರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕ್ರೇಜ್ ಅನ್ನು ಹೆಚ್ಚಿಸುತ್ತಿದ್ದಾರೆ.
ಇನ್ನು ಕಳೆದ ತಿಂಗಳಷ್ಟೇ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್ ಎಲ್ಲ ದಾಖಲೆಗಳನ್ನು ಕೊಡಿ ಮಾಡಿ ಹೊಸ ದಾಖಲೆಗಳನ್ನು ನಿರ್ಮಿಸಿದೆ. ಅದರಲ್ಲಿಯೂ ಕೆಜಿಎಫ್ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಬಿಡುಗಡೆಯಾದಾಗ ಯೂಟ್ಯೂಬ್ ನಲ್ಲಿ ಮೊದಲ ಹತ್ತು ನಿಮಿಷಗಳಿಗೆ 1 ಲಕ್ಷ ವ್ಯೂಸ್ ಗಳನ್ನು ಪಡೆದುಕೊಂಡು ಸ್ಯಾಂಡಲ್ ವುಡ್ ನಲ್ಲಿ ದೊಡ್ಡದೊಂದು ಹೊಸ ದಾಖಲೆಯನ್ನು ನಿರ್ಮಿಸಿತ್ತು.
ಇದೀಗ ಆ ದಾಖಲೆಗೆ ಆದಷ್ಟು ಬೇಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಳ್ಳು ನೀರು ಬಿಟ್ಟಿದ್ದಾರೆ. ಹೌದು ಇಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಾಲೆಂಜಿಂಗ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಯಜಮಾನ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಯಜಮಾನ ಚಿತ್ರದ ಶಿವನಂದಿ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು ಯೂಟ್ಯೂಬ್ನಲ್ಲಿ ಧೂಳ್ ಎಬ್ಬಿಸುತ್ತಿದೆ.
ಶಿವನಂದಿ ಹಾಡು ಬಿಡುಗಡೆಯಾದ ಕೇವಲ ಎಂಟೇ ನಿಮಿಷಕ್ಕೆ ಒಂದು ಲಕ್ಷ ವೀಕ್ಷಣೆ ಗಳನ್ನು ಪಡೆದುಕೊಳ್ಳುವುದರ ಮೂಲಕ ಈ ಹಿಂದೆ ಕೆಜಿಎಫ್ ಹತ್ತು ನಿಮಿಷಗಳಲ್ಲಿ ಒಂದು ಲಕ್ಷ ವೀಕ್ಷಣೆಯನ್ನು ಪಡೆದುಕೊಂಡು ನಿರ್ಮಿಸಿದ್ದ ರೆಕಾರ್ಡ್ ಅನ್ನು ಮುರಿದು ಹಾಕಿದೆ.
ಅಷ್ಟೇ ಅಲ್ಲದೆ ಶಿವನಂದಿ ಹಾಡು..
20 ನಿಮಿಷಕ್ಕೆ 2 ಲಕ್ಷ
27 ನಿಮಿಷಕ್ಕೆ 3 ಲಕ್ಷ
40 ನಿಮಿಷಕ್ಕೆ 4 ಲಕ್ಷ
1 ಗಂಟೆಗೆ 5 ಲಕ್ಷ ವೀಕ್ಷಣೆ ಗಳನ್ನು ಪಡೆದುಕೊಂಡು ಸ್ಯಾಂಡಲ್ ವುಡ್ ನಲ್ಲಿ ಹೊಸದೊಂದು ರೆಕಾರ್ಡ್ ಸೃಷ್ಟಿ ಮಾಡುತ್ತಿದೆ.