ಸಿನಿಮಾ ಮಾಂತ್ರಿಕ ಎಸ್ ಎಸ್ ರಾಜಮೌಳಿ..ಜೂನಿಯರ್ ಎನ್ ಟಿಆರ್ ಹಾಗೂ ಮೆಗಾ ಪವರ್ ಸ್ಟಾರ್ ರಾಮ್ ಚರಣ್..ಈ ತ್ರಿವಳಿ ಕಾಂಬೋದ ಬಹುನಿರೀಕ್ಷಿತ ಸಿನಿಮಾ RRR. ಈಗಾಗ್ಲೇ ಟೀಸರ್..ಮೇಕಿಂಗ್ ಹಾಗೂ ಸಾಂಗ್ಸ್ ಹೀಗೆ ಪ್ರತಿ ಹಂತದಲ್ಲೂ ಕುತೂಹಲದ ಕಾರ್ಮೋಡದಂತಿರುವ RRR ಸಿನಿಮಾದ ಟ್ರೇಲರ್ ಗೆ ಕೌಂಟ್ ಡೌನ್ ಶುರುವಾಗಿದೆ. ಡಿಸೆಂಬರ್ 9 ಅಂದ್ರೆ ನಾಳೆ ತ್ರಿಬಲ್ ಸಿನಿಮಾದ ಟ್ರೇಲರ್ ಅನಾವರಣಗೊಳ್ತಿದೆ. ವಿಶೇಷ ಅಂದ್ರೆ RRR ಸಿನಿಮಾದ ಟ್ರೇಲರ್ ಯೂಟ್ಯೂಬ್ ಗೂ ಮೊದಲೇ ಥಿಯೇಟರ್ ಅಂಗಳದಲ್ಲಿ ಸೌಂಡ್ ಮಾಡ್ತಿದೆ.
30 ಥಿಯೇಟರ್ ಗಳಲ್ಲಿ RRR ಟ್ರೇಲರ್ ಅನಾವರಣ!
ಭಾರತೀಯ ಬಹುನಿರೀಕ್ಷಿತ ಸಿನಿಮಾಪಟ್ಟಿಯಲ್ಲಿ ಉತ್ತುಂಗದಲ್ಲಿರುವ RRR ಸಿನಿಮಾದ ಟ್ರೇಲರ್ ನಾಳೆ ರಿಲೀಸ್ ಆಗ್ತಿದೆ. ಕರ್ನಾಟಕದ 30 ಥಿಯೇಟರ್ ಗಳಲ್ಲಿ RRR ಸಿನಿಮಾದ ಕನ್ನಡ ಟ್ರೇಲರ್ ಬಿಡುಗಡೆಯಾಗ್ತಿದೆ. ಕೋಟಿ ಕೋಟಿ ಹಣ ಕೊಟ್ಟು RRR ಸಿನಿಮಾದ ವಿತರಣೆ ಹಕ್ಕು ಪಡೆದಿರುವ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ KVN, ರಾಜ್ಯದ 30 ಥಿಯೇಟರ್ ಗಳಲ್ಲಿ ಕನ್ನಡ ಅವತರಣಿಕೆಯ ಟ್ರೇಲರ್ ಬಿಡುಗಡೆ ಮಾಡುತ್ತಿದೆ.
ಯೂಟ್ಯೂಬ್ ಗೂ ಮೊದಲೇ ಸಿನಿಮಾದ ಟ್ರೇಲರ್ ಬೆಳ್ಳಿಪರದೆಯ ಮೇಲೆ ರಾರಾಜಿಸಲಿದ್ದು, ಚಿತ್ರಾಭಿಮಾನಿಗಳು ಈ ಸಂತಸದಲ್ಲಿ ಭಾಗಿಯಾಗಿ RRR ಸಿನಿಮಾದ ಟ್ರೇಲರ್ ನ್ನು ಕಣ್ತುಂಬಿಕೊಳ್ಳಬಹುದು. ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ RRR ಸಿನಿಮಾದಲ್ಲಿ ಜೂನಿಯರ್ ಎನ್ ಟಿಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. ಕನ್ನಡ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ತ್ರಿಬಲ್ ಆರ್ ಸಿನಿಮಾವನ್ನು ರಾಜ್ಯಾದ್ಯಂತ ಪ್ರೇಕ್ಷಕರಿಗೆ ಅರ್ಪಿಸಲಿದೆ. ಜನವರಿ 7ರಂದು ಪಂಚ ಭಾಷೆಯಲ್ಲಿ RRR ಸಿನಿಮಾ ಬೆಳ್ಳಿಪರದೆಗೆ ಲಗ್ಗೆ ಇಡಲಿದೆ.