ನಿರ್ದೇಶಕ ಸಿಂಪಲ್ ಸುನಿ ಅವರು ಚಮಕ್ ಅಂತಹ ಸೂಪರ್ ಹಿಟ್ ಚಿತ್ರ ನೀಡಿದ ನಂತರ ಕೈಗೆತ್ತಿಕೊಂಡ ಚಿತ್ರವೇ ಬಜಾರ್. ಇನ್ನು ಈ ಬಜಾರ್ ಚಿತ್ರದ ಮೂಲಕ ಸಿಂಪಲ್ ಸುನಿ ಅವರು ಕನ್ನಡಕ್ಕೆ ಹೊಸ ಮಾಸ್ ಹೀರೊ ಅನ್ನು ಪರಿಚಯಿಸಿದ್ದಾರೆ. ಹೌದು ಪಕ್ಕಾ ಮಾಸ್ ಎಲಿಮೆಂಟ್ ಮತ್ತು ಫಿಸಿಕ್ ಇರೋ ಧನ್ವೀರ್ ಅವರನ್ನು ಕನ್ನಡ ಇಂಡಸ್ಟ್ರಿಗೆ ಪರಿಚಯಿಸಿದ್ದಾರೆ ನಿರ್ದೇಶಕ ಸುನಿ ಅವರು.
ಧನ್ವೀರ್ ಅವರಿಗೆ ಇದು ಮೊದಲನೇ ಸಿನಿಮಾ. ಮೊದಲ ಸಿನಿಮಾದಲ್ಲಿಯೇ ಸಖತ್ ಮಾಸ್ ಆಗಿ ಅವರು ಕಾಣಿಸಿಕೊಂಡಿದ್ದು ಅಭಿಮಾನಿಗಳ ಮನಸ್ಸನ್ನು ಗೆಲ್ಲುವುದರಲ್ಲಿ ತುಂಬಾ ಯಶಸ್ವಿಯಾಗಿದ್ದಾರೆ. ಫೈಟಿಂಗ್ ಸೀನ್ಗಳಲ್ಲಿ ಇವರ ಆಕ್ಟಿಂಗ್ ಮತ್ತು ಬಾಡಿ ಲಾಂಗ್ವೇಜ್ ಮಾತ್ರ ಸೂಪರ್. ಸೀಟಿನಲ್ಲಿ ಕೂತ ಪ್ರೇಕ್ಷಕ ಶಿಳ್ಳೆ ಹೊಡೆಯುವ ಮಟ್ಟಿಗೆ ನಟನೆ ಮತ್ತು ಫೈಟ್ ಮಾಡುವ ಲಕ್ಷಣವನ್ನು ಹೊಂದಿದ್ದಾರೆ ಧನ್ವೀರ್..
ಇನ್ನು ನಾಯಕಿ ಅದಿತಿ ಪ್ರಭುದೇವ ಅವರು ಸಹ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಪ್ರೇಕ್ಷಕರಿಂದ ಉತ್ತಮ ಪ್ರಶಂಸೆಯನ್ನು ಪಡೆದುಕೊಂಡಿದ್ದಾರೆ. ಕಲ್ಕಿ ಎಂಬ ಅನಾಥ ಹುಡುಗನ ಪಾತ್ರದಲ್ಲಿ ನಟ ಧನ್ವೀರ್ ಅವರು ಕಾಣಿಸಿಕೊಂಡಿದ್ದು ಪಾರಿವಾಳ ರೇಸ್ ನಲ್ಲಿ ಚಾಂಪಿಯನ್ ಆಗಬೇಕು ಎಂಬ ಕನಸನ್ನು ಇಟ್ಟುಕೊಂಡಿರುತ್ತಾನೆ. ಕುದುರೆ ಓಡಿಸುವವರನ್ನು ಜಾಕಿ ಎಂದು ಕರೆಯಲಾಗುತ್ತದೆ ಹಾಗೆಯೇ ಪಾರಿವಾಳವನ್ನು ಹಾರಿಸುವ ವ್ಯಕ್ತಿಗೆ ಶೋಕ್ದಾರ್ ಎಂದು ಕರೆಯಲಾಗುತ್ತದೆ. ಅದೇ ಶೋಕ್ದಾರ್ ಪಾತ್ರದಲ್ಲಿ ಇಲ್ಲಿ ಧನ್ವೀರ್ ಅವರು ಕಾಣಿಸಿಕೊಂಡಿದ್ದು ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ.
ಕನ್ನಡ ಚಲನಚಿತ್ರರಂಗದಲ್ಲಿ ಇದುವರೆಗೆ ಮುಟ್ಟದೆ ಇರುವ ಸಬ್ಜೆಕ್ಟ್ ಅನ್ನು ಸಿಂಪಲ್ ಸುನಿ ಅವರು ಮಾಡಿದ್ದಾರೆ. ಹೌದು ಕನ್ನಡ ಸಿನಿಮಾ ರಂಗದಲ್ಲಿ ಇದುವರೆಗೂ ಸಹ ಪಾರಿವಾಳ ರೇಸ್ ಕುರಿತಾದ ಚಿತ್ರ ಬಂದೇ ಇಲ್ಲ ಇದೇ ಮೊದಲ ಬಾರಿಗೆ ಸಿಂಪಲ್ ಸುನಿ ಅವರು ಈ ರೀತಿಯ ಕ್ಷೇತ್ರವನ್ನು ನಿರ್ದೇಶಿಸಿದ್ದಾರೆ. ಪಾರಿವಾಳ ರೇಸ್ ನಲ್ಲಿ ಚಾಂಪಿಯನ್ ಆಗುವ ಕನಸನ್ನು ಹೊತ್ತ ಆ ಅನಾಥ ಯುವಕ ಇದೇ ವೃತ್ತಿಯಲ್ಲಿನ ಇನ್ನೊಬ್ಬ ಬಾಸ್ ಕೈಕೆಳಗೆ ಕೆಲಸ ಮಾಡುತ್ತಾನೆ. ಹಾಗೆಯೇ ಈ ಕೆಲಸ ಮತ್ತು ಆತನ ಚಾಂಪಿಯನ್ ಆಗಬೇಕೆಂಬ ಕನಸಿನ ನಡುವೆ ನಾಯಕಿಯ ಎಂಟ್ರಿಯೂ ಆಗಿ ಲವ್ ಕೂಡ ಆಗುತ್ತದೆ. ಆ ಲವ್ ಕೆಲ ಕಾರಣಗಳಿಂದ ಬ್ರೇಕ್ ಅಪ್ ಹಂತವನ್ನು ಕೂಡ ತಲುಪುತ್ತದೆ
ತನ್ನ ಬಾಸ್ ಕೈಕೆಳಗೆ ಕೆಲಸ ಮಾಡುತ್ತಾ ತಾನೇ ಪಾರಿವಾಳ ರೇಸ್ ನಲ್ಲಿ ಚಾಂಪಿಯನ್ ಆಗಬೇಕು ಎಂಬ ನಾಯಕನ ಆಸೆ ಈಡೇರುತ್ತಾ ಮತ್ತು ಹಾಳಾದ ಆ ಹೀರೋನ ಲವ್ ಸರಿಯಾಗುತ್ತಾ ಎಂಬುದನ್ನು ನೀವು ಚಿತ್ರಮಂದಿರಕ್ಕೆ ತೆರಳಿ ವೀಕ್ಷಿಸಬೇಕು. ಒಟ್ಟಾರೆಯಾಗಿ ಹೇಳಬೇಕೆಂದರೆ ಬಜಾರ್ ಸಿನಿಮಾ ಹೊಸ ರೀತಿಯ ಕತೆಯನ್ನು ಹೊಂದಿರುವಂತಹ ಚಿತ್ರವಾಗಿದ್ದು ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತದೆ. ತಪ್ಪದೇ ನಿಮ್ಮ ಹತ್ತಿರದ ಚಿತ್ರಮಂದಿರಗಳಿಗೆ ತೆರಳಿ ವೀಕ್ಷಿಸಿ..