HomeNewsರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದರು "ರಾಣ" ಟೀಸರ್.

ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದರು “ರಾಣ” ಟೀಸರ್.


ರಿಯಲ್ ಸ್ಟಾರ್ ಉಪೇಂದ್ರ ಅವರು ಶ್ರೇಯಸ್ಸ್ ಕೆ ಮಂಜು ಅಭಿನಯದ “ರಾಣ” ಚಿತ್ರದ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಿದರು.

ಶ್ರೇಯಸ್ಸ್ ಹೆಸರಿನಲ್ಲೇ ಶ್ರೇಯಸ್ಸು ಇದೆ. ಅವನ ಮಾತು ಕೇಳಿ ಸಂತೋಷವಾಯಿತು. ತಂದೆಯನ್ನು ಮೀರಿಸಿದ ಮಗ ಶ್ರೇಯಸ್ಸ್. ಅವನಿಗೆ ಹಾಗೂ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಉಪೇಂದ್ರ ಹರಸಿದರು.

ಕಂಪ್ಲಿ ಶಾಸಕರಾದ J.N ಗಣೇಶ್ ಅವರು ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್ ಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಟೀಸರ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.

ಚಿತ್ರೀಕರಣ ಬಹುತೇಕ ಮುಗಿದಿದೆ. ಕೋವಿಡ್ ನಿಯಮಾವಳಿಗಳು ಜಾರಿಯಿರುವುದರಿಂದ ಕೆಲವು ಜಾಗಗಳಲ್ಲಿ ಚಿತ್ರೀಕರಣ ನಡೆಸಲು ಅನುಮತಿ ಸಿಕ್ಕಿದ್ದು ತಡವಾಯಿತು. ಇಲ್ಲದಿದ್ದರೆ, ನಮ್ಮ ಚಿತ್ರ ಈ ವೇಳೆಗೆ ಸಿದ್ದವಿರುತ್ತಿತ್ತು. ಚಿತ್ರ ಉತ್ತಮವಾಗಿ ಬರಲು ಸಹಕರಿಸುತ್ತಿರುವ ಚಿತ್ರತಂಡದ ಸದಸ್ಯರಿಗೆ ನನ್ನ ಧನ್ಯವಾದ ಎಂದರು ನಿರ್ದೇಶಕ ನಂದಕಿಶೋರ್‌ .

ಚಿತ್ರದ ಹಾಡುಗಳು ಚೆನ್ನಾಗಿದೆ. ಹಾಡುಗಳ ವಿಡಿಯೋ ಯಾವಾಗ ಬರುವುದೋ ಎಂದು ಕಾತುರದಿಂದ ಕಾಯುತ್ತಿದ್ದೇನೆ.. ಚಿತ್ರತಂಡಕ್ಕೆ ಹಾಗೂ ಆಡಿಯೋ ಹಕ್ಕು ಪಡೆದಿರುವ ಆನಂದ್ ಆಡಿಯೋ ಸಂಸ್ಥೆಗೆ ಧನ್ಯವಾದ ತಿಳಿಸಿದರು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ.

ನಾನು ಚಿಕ್ಕ ವಯಸ್ಸಿನಿಂದಲೂ ಉಪೇಂದ್ರ ಅವರ ಹುಚ್ಚು ಅಭಿಮಾನಿ. ನಾನು ಅವರಿಂದ ಕಲತಿರುವುದು ಸಾಕಷ್ಟು. ಚಿತ್ರರಂಗಕ್ಕೆ ಹೊಸದಾಗಿ ಬರುತ್ತಿರುವ ನೂತನ ಪ್ರತಿಭೆಗಳಿಗೆ ಅವರು ನೀಡುವ ಪ್ರೋತ್ಸಾಹಕ್ಕೆ ಚಿರ ಋಣಿ. ಶಿವರಾಜಕುಮಾರ್ ಅವರು ಸಹ ನನಗೆ ಈ ಚಿತ್ರದಲ್ಲಿ ಲಾಂಗ್ ಹಿಡಿಯುವುದನ್ನು ಹೇಳಿಕೊಟ್ಟಿದ್ದಾರೆ. ನಾನು ಏನಾದರೂ ಉತ್ತಮವಾಗಿ ನಟಿಸಿದ್ದೇನೆಂದರೆ ಅದಕ್ಕೆ ಕಾರಣ ನಿರ್ದೇಶಕ ನಂದಕಿಶೋರ್ ಹಾಗೂ ಛಾಯಾಗ್ರಹಕ ಛಾಯಾಗ್ರಹಕ ಶೇಖರ್ ಚಂದ್ರ. ಹಿರಿಯ ಕಲಾವಿದರಿಗೆ, ನಿರ್ಮಾಪಕರಿಗೆ, ನನ್ನ ಅಪ್ಪ ಕೆ.ಮಂಜು ಅವರಿಗೆ ಹಾಗೂ ಇಡೀ ತಂಡಕ್ಕೆ ನಾಯಕ ಶ್ರೇಯಸ್ಸ್ ವಿಶೇಷ ಧನ್ಯವಾದ ತಿಳಿಸಿದರು.

ನಾನು ಚಿತ್ರ ನಿರ್ಮಾಣ ಮಾಡಲು ಪ್ರಮುಖ ಕಾರಣ ಕೆ.ಮಂಜು. ಅವರಿಗೆ ನಾನು ಆಭಾರಿ. ಚಿತ್ರ ಉತ್ತಮವಾಗಿ ಮೂಡಿ ಬರಲು ಇಡೀ ತಂಡ ಸಾಕಷ್ಟು ಶ್ರಮಿಸುತ್ತಿದೆ. ನಿಮ್ನೆಲ್ಲರ ಹಾರೈಕೆ ನಮಗಿರಲಿ ಎಂದರು ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್.

ನಿರ್ಮಾಪಕ ಪುರುಷೋತ್ತಮ್ ನನಗೆ ಒಳ್ಳೆಯ ಸ್ನೇಹಿತರು. ಈ ಚಿತ್ರವನ್ನು ನನ್ನದೇ ನಿರ್ಮಾಣದ ಚಿತ್ರದ ತರಹ ನಿಂತು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದೇನೆ. ಉಪೇಂದ್ರ‌ ಅವರು ಮುಹೂರ್ತ ದಿನದಂದು ಬಂದು ಶುಭ ಹಾರೈಸಿದ್ದರು. ಟೀಸರ್ ಸಹ
ಅವರಿಂದಲೇ ಬಿಡುಗಡೆ ಮಾಡಿಸಬೇಕು ಎನ್ನುವ ಆಸೆಯಿತ್ತು. ಬಿಡುಗಡೆ ಮಾಡಿ ಕೊಟ್ಟಿದ್ದಾರೆ. ಉಪೇಂದ್ರ ಅವರಿಗೆ ತುಂಬು ಹೃದಯದ ಧನ್ಯವಾದ. ನನ್ನ ಮಗ ಶ್ರೇಯಸ್ಸ್, ನಿರ್ದೇಶಕ ನಂದಕಿಶೋರ್ ಸೇರಿದಂತೆ ಇಡೀ ಚಿತ್ರತಂಡದ ಸದಸ್ಯರಿಗೆ ಒಳ್ಳೆಯದಾಗಲಿ ಎಂದರು ನಿರ್ಮಾಪಕ ಕೆ.ಮಂಜು.
ನಾಯಕಿಯರಾದ ರೀಷ್ಮಾ ನಾಣಯ್ಯ, ರಜನಿ ಭಾರದ್ವಾಜ್, ಛಾಯಾಗ್ರಹಕ ಶೇಖರ್ ಚಂದ್ರ, ಆನಂದ್ ಆಡಿಯೋ ಶ್ಯಾಮ್ ಅವರು ಚಿತ್ರದ ಬಗ್ಗೆ ಮಾತನಾಡಿದ್ದರು. ನಿರ್ಮಾಪಕರಾದ ರಮೇಶ್ ರೆಡ್ಡಿ ಅವರು ಸೇರಿದಂತೆ ಅನೇಕ ಗಣ್ಯರು ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಈ ಚಿತ್ರದಲ್ಲಿ ಶ್ರೇಯಸ್ಸ್ ಗೆ ನಾಯಕಿಯರಾಗಿ‌ ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ.

ಕೆ ಮಂಜು ಅರ್ಪಿಸುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನವಿದೆ. ವಿಶ್ವ ಕಲಾ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿರುವ “ರಾಣ” ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ‌.

Must Read

spot_img

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805
Share via
Copy link
Powered by Social Snap