ಮಯೂರ್ ಪಟೇಲ್ ಅಭಿನಯದ ರಾಜೀವ IAS ಚಿತ್ರ ಬಹಳಷ್ಟು ದಿನದಿಂದ ಚರ್ಚೆಯಲ್ಲಿದ್ದು, ಸಾಕಷ್ಟು ಸದ್ದು ಮಾಡುತ್ತಾ, ಇದೇ ಜನವರಿ 3ಕ್ಕೆ ಬಿಡುಗಡೆಯಾಗಲಿದೆ. ರೈತರ ಕಷ್ಟ, ರೈತರ ಮಹತ್ವದ ಬಗ್ಗೆ ಮಾಡಿರೋ ಈ ಸಿನಿಮಾಕ್ಕೆ ಫ್ಲೈಯಿಂಗ್ ಕಿಂಗ್ ಮಂಜು ಆಕ್ಷನ್ ಕಟ್ ಹೇಳಿದ್ದಾರೆ.
ಬಿ ಎಮ್ ರಮೇಶ್ ಮತ್ತು ಕಿರಣ್ ಬಂಡವಾಳ ಹೂಡಿರೋ ಈ ಸಿನಿಮಾದಲ್ಲಿ ದೊಡ್ಡ ಮಟ್ಟದ ತಾರಾಬಳಗವೇ ತುಂಬಿದ್ದು, ಮಯೂರ್ ಪಟೇಲ್ ಜೊತೆ ಅಕ್ಷತಾ ಶ್ರೀಧರ್ ಶಾಸ್ತ್ರೀ ನಾಯಕಿಯಾಗಿ ನಟಿಸಿದ್ದು, ಇನ್ನುಳಿದಂತೆ ಮದನ್ ಪಟೇಲ್, ಶಂಕರ್ ಅಶ್ವತ್ಥ್, ನಿಹಾರಿಕ, ವರ್ಧನ್ ಹೀಗೆ ಸಾಕಷ್ಟು ಕಲಾವಿದರು ನಟಿಸಿದ್ದು, ಭರವಸೆ ಮೂಡಿಸಿದೆ.
ಬಿ ಎಮ್ ರಮೇಶ್ ಅವರು ಕಥೆ ಬರೆದಿದ್ದು, ರೋಹಿತ್ ಸೋವರ್ ಮ್ಯೂಸಿಕ್ ಮಾಡಿದ್ದಾರೆ. ಆನಂದ್ ಇಳಯರಾಜ ಅವರ ಕ್ಯಾಮೆರಾ ಕೈಚಳ ಚಿತ್ರಕ್ಕಿದ್ದು, ಶೇಖರ್ ಸೋವರ್ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಚಿತ್ರದಲ್ಲಿ ಮತ್ತೊಂದು ವಿಶೇಷ ಅಂದ್ರೆ ವಸಿಷ್ಟ ಒಂದು ಹಾಡಿಗೆ ಧ್ವನಿಯಾಗಿರೋದು. ಹಾಗೇನೆ ಮತ್ತೆ ಸ್ಯಾಂಡಲ್ ವುಡ್ ಗೆ ಈ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡ್ತಿರೋ ಮಯೂರ್ ಪಟೇಲ್ ಅವರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ವಿಶೇಷವಾಗಿ ಶುಭಕೋರಿರೋದು ತಂಡದಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಿಸಿದೆ.
ಇದೇ ಜನವರಿ 3 ಕ್ಕೆ ಬಿಡುಗಡೆಯಾಗುತ್ತಿರುವ ಈ ತಂಡಕ್ಕೆ ನಮ್ ಕಡೆಯಿಂದ ಶುಭಹಾರೈಕೆ.