Kannada Beatz
News

ಆಗಸ್ಟ್ 29ಕ್ಕೆ ರಿಪ್ಪನ್ ಸ್ವಾಮಿ ತೆರೆಗೆ : ಅತಿ ಶೀಘ್ರದಲ್ಲಿಯೇ ಬರಲಿದೆ ಟೀಸರ್, ಟ್ರೇಲರ್..!

ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರು ಇತ್ತೀಚೆಗೆ ಒಪ್ಪಿಕೊಳ್ಳುತ್ತಿರುವ ಸಿನಿಮಾಗಳು ಬಹಳ ವಿಭಿನ್ನವಾಗಿವೆ. ಒಂದೊಂದು ಪಾತ್ರಗಳು ಕೂಡ ಬೇರೆಯದ್ದೇ ರೀತಿ ಇರುತ್ತವೆ. ಅಂತಹ ಸಿನಿಮಾಗಳನ್ನೇ ವಿಜಯ್ ರಾಘವೇಂದ್ರ ಅವರು ಒಪ್ಪಿಕೊಂಡು ಮಾಡ್ತಾ ಇದ್ದಾರೆ.

ಆ ಸಾಲಿಗೆ ಸೇರಿರುವುದು ರಿಪ್ಪನ್ ಸ್ವಾಮಿ ಸಿನಿಮಾ. ಈ ಮೊದಲು ಮಾಲ್ಗುಡಿ ಡೇಸ್ ಸಿನಿಮಾ ನಿರ್ದೇಶನ ಮಾಡಿದ್ದ ಯುವ ನಿರ್ದೇಶಕ ಕಿಶೋರ್ ಮೂಡಬಿದ್ರೆ ರಿಪ್ಪನ್ ಸ್ವಾಮಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾದ ಟೀಸರ್ ಮತ್ತು ಟ್ರೇಲರ್ ಶೀಘ್ರದಲ್ಲಿಯೇ ರಿಲೀಸ್ ಆಗುತ್ತೆ. ಸಿನಿಮಾ ಆಗಸ್ಟ್ 29ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಉಳಿದಂತೆ ಸಿನಿಮಾದಲ್ಲಿ ಸಾಂಗ್ ಕೂಡ ಹೈಲೇಟ್ ಆಗಿದ್ದು, 2 ಹಾಡುಗಳು ಇದಾವೆ.

ವಿಜಯ್ ರಾಘವೇಂದ್ರ ಸಿನಿ ಜೀವನದಲ್ಲಿಯೇ ಇದು ಬೆಸ್ಟ್ ಸಿನಿಮಾ ಅಂದ್ರೆ ತಪ್ಪಾಗುವುದಿಲ್ಲ. ಯಾಕಂದ್ರೆ ಕಥೆ, ಪಾತ್ರ ಅಷ್ಟು ಗಟ್ಟಿಯಾಗಿದೆ. ಶ್ರಮವೂ ಅಷ್ಟೇ ಜಾಸ್ತಿ ಇದೆ. ಈಗಾಗಲೇ ಪೋಸ್ಟರ್ ಗಳಿಂದಾನೇ ಎಲ್ಲರ ಗಮನ ಸೆಳೆದಿದೆ. ಚಿನ್ನಾರಿ‌ ಮುತ್ತನನ್ನ ರಿಪ್ಪನ್ ಸ್ವಾಮಿಯಲ್ಲಿ ನೋಡಿ ಫ್ಯಾನ್ಸ್ ಕೂಡ ಕಾಯ್ತಾ ಇದ್ದಾರೆ. ಆ ಕಾಯುವಿಜೆಗೆ ಇನ್ನು ಸ್ವಲ್ಪ ದಿನವಷ್ಟೇ. ಆಗಸ್ಟ್ 29ಕ್ಕೆ ರಿಪ್ಪನ್ ಸ್ವಾಮಿ‌ ರಿಲೀಸ್ ಆಗ್ತಾ ಇದೆ.

ಈ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಅವರು ರಾ ಲುಕ್ ನಲ್ಲಿ ಕಾಣಿಸಕೊಂಡಿದ್ದಾರೆ. ವಿಜಯ್ ರಾಘವೇಂದ್ರ ಜೋಡಿಯಾಗಿ ಶಿವಮೊಗ್ಗ ಮೂಲದ ಕನ್ನಡ, ತಮಿಳು, ತೆಲುಗು ಸಿನಿಮಾದಲ್ಲಿ ನಟಿಸಿರುವ ಅಶ್ವಿನಿ ಚಂದ್ರಶೇಖರ್ ನಟಿಸಿದ್ದಾರೆ. ಉಳಿದಂತೆ ಪ್ರಕಾಶ್ ತುಮ್ಮಿ ನಾಡು , ವಜ್ರದೀರ್ ಜೈನ್, ಯಮುನಾ ಶ್ರೀನಿಧಿ, ಮೋಹನ್ ಶೇಣಿ, ಕೃಷ್ಣಮೂರ್ತಿ ಕವತ್ತಾರ್, ಪ್ರಭಾಕರ್ ಕುಂದಾರ್, ರಂಜನ್ ಶೆಟ್ಟಿ, ಸಂತೋಷ್ ಶೆಟ್ಟಿ ಮುಂತಾದವರು ಇದ್ದಾರೆ.

ಪಂಚಾಂನನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರು ಕೈಜೋಡಿಸಿ ನಿರ್ಮಾಣ ಮಾಡಿದ್ದಾರೆ. ಪಂಚಾನನ ಫಿಲಂಸ್ ನ ಮೊದಲನೇ ಸಿನಿಮಾ ಇದಾಗಿದೆ. ಕೊಪ್ಪ, ಕಳಸ, ಬಾಳೆಹೊನ್ನೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಸಂಗೀತವನ್ನು ನೀಡಿದ್ದಾರೆ. ರಂಗನಾಥ್ ಸಿ ಎಂ ರವರು ಕ್ಯಾಮರಾ ಹಿಡಿದಿದ್ದಾರೆ. ಶಶಾಂಕ್ ನಾರಯಣ್ ಸಂಕಲನ ಮಾಡಿದ್ದಾರೆ. ಆಗಸ್ಟ್ 29ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

Related posts

ಮಂಡ್ಯಹೈದ ಟೀಸರ್
ಟೈಟಲ್ ಸಾಂಗ್ ಲಾಂಚ್

Kannada Beatz

ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ARM’ ಸಿನಿಮಾ

Kannada Beatz

‘ತೂತು ಮಡಿಕೆ’ ಟೈಟಲ್ ಟ್ರ್ಯಾಕ್ ರಿಲೀಸ್….ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸ್ತಿದೆ ಹಾಡು!

Kannada Beatz

Leave a Comment

Share via
Copy link
Powered by Social Snap