Kannada Beatz
News

ಸಸ್ಪೆನ್ಸ್ ಥ್ರಿಲ್ಲರ್‌ ನ ‘ಪರಿಮಳ ಡಿಸೋಜಾ’ ಟ್ರೇಲರ್ ಬಿಡುಗಡೆ

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ ‘ಪರಿಮಳ ಡಿಸೋಜಾ’.
ಯುವ ಪ್ರತಿಭೆ ವಿನೋದ್ ಶೇಷಾದ್ರಿ ನಟಿಸಿ, ‘ವಿಲೇಜ್ ರೋಡ್ ಫಿಲಂಸ್’ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇದೇ ಸೆಪ್ಟೆಂಬರ್ 15ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮಾ ಹರೀಶ್, ನಿರ್ಮಾಪಕ ಎಂ.ಎನ್ ಸುರೇಶ್ ಹಾಗೂ ನಟಿ ಭವ್ಯ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ ಕಮ್ ನಟ ವಿನೋದ್ ಶೇಷಾದ್ರಿ, ‘ಈ ಚಿತ್ರ ನಿರ್ಮಾಣ ಮಾಡುವ ಜೊತೆಗೆ ಪೊಲೀಸ್ ಪಾತ್ರ ಕೂಡ ಮಾಡಿದ್ದೇನೆ. ಜೊತೆಗೆ ಚಿತ್ರದ ಒಂದು ಗೀತೆಗೆ ಸಾಹಿತ್ಯ ಕೂಡ ಬರೆದಿದ್ದೇನೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಒಳಗೊಂಡ ಆ್ಯಕ್ಷನ್, ಸೆಂಟಿಮೆಂಟ್, ಫ್ಯಾಮಿಲಿ ಮನರಂಜನೆ ಇರುವ ಕೌಟುಂಬಿಕ ಚಿತ್ರ. ಚಿತ್ರದಲ್ಲಿ ಒಟ್ಟು 107 ಕಲಾವಿದರು ನಟಿಸಿದ್ದಾರೆ’ ಎಂದು ಹೇಳಿದರು.

ನಂತರ ಚಿತ್ರದ ನಿರ್ದೇಶಕ ಡಾ||ಗಿರಿಧರ್ ಹೆಚ್ ಟಿ. ಮಾತನಾಡಿ ‘ಇದೊಂದು ಸಾಂಸಾರಿಕ ಕಥೆ ಒಳಗೊಂಡ ಸಿನಿಮಾ. ಹಿಂದೂ ಕುಟುಂಬದ ಮನೆಗೆ ಕ್ರಿಶ್ಚಿಯನ್ ಹುಡುಗಿ ಸೊಸೆಯಾಗಿ ಬರುತ್ತಾರೆ. ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗ ಒಂದು ಘಟನೆ ನಡೆಯುತ್ತದೆ ಆ ಘಟನೆ ಏನು? ಅದರಿಂದ ಏನೆಲ್ಲಾ ಆಗುತ್ತದೆ ಎಂಬುದೇ ಈ ಚಿತ್ರದ ಕಥಾವಸ್ತು. ಇದರಲ್ಲಿ ಹೀರೋ ಅಂತ ಯಾರು ಇಲ್ಲ ಕಥೆಯೇ ನಾಯಕ ಎಂದರು.

‘ಇದೊಂದು ಥ್ರಿಲ್ಲರ್, ಸಸ್ಪೆನ್ಸ್ ಸಿನಿಮಾ. ಸೆಪ್ಟೆಂಬರ್ 15ರಂದು ಸಿನಿಮಾ ರಿಲೀಸ್ ಆಗಲಿದೆ. ಅದ್ಭುತವಾಗಿ ಸಿನಿಮಾ ಮೂಡಿ ಬಂದಿದೆ’ ಎಂದು ಹೇಳಿದರು ನಟಿ ಭವ್ಯ.

ಇದೇ ಸಂದರ್ಭದಲ್ಲಿ ಕಲಾವಿದರಾದ ಕೋಮಲ ಬನವಾಸೆ, ಸುನೀಲ್ ಮೋಹಿತ್, ರೋಹಿಣಿ ಜಗನ್ನಾಥ, ಚಂದನಾ ಶ್ರೀನಿವಾಸ, ಶಿವಕುಮಾರ ಆರಾಧ್ಯ ಹಾಗೂ ಸಂಕಲನಕಾರ ಸಂಜೀವ ರೆಡ್ಡಿ, ಗಾಯಕಿ ಶೃತಿ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

Related posts

IIFA 2025 ಬಾಲಿವುಡ್ ನ ಅತೀ ದೊಡ್ಡ ಪ್ರಶಸ್ತಿ ಸಮಾರಂಭದ ಗ್ರೀನ್ ಕಾರ್ಪೆಟ್ ನಲ್ಲಿ ಮಿಂಚಿದ ಕನ್ನಡದ ನಟಿ ಹಾಗೂ ಸೂಪರ್ ಮಾಡೆಲ್ ಸಂಹಿತಾ ವಿನ್ಯಾ

Kannada Beatz

The Script Room ಯೂಟ್ಯೂಬ್ ನಲ್ಲಿ ‘ಇರುವೆ’ ಕಿರುಚಿತ್ರ ಬಿಡುಗಡೆ..ಇದು ರಾಜೇಶ್ ರಾಮಸ್ವಾಮಿ ಹೊಸ ಪ್ರಯತ್ನ

Kannada Beatz

‘S/O ಮುತ್ತಣ್ಣ’ನಿಗೆ ಸಾಥ್ ಕೊಟ್ಟ S/O ಮುತ್ತುರಾಜ…ಪ್ರಣಂ ದೇವರಾಜ್ ಹೊಸ ಸಿನಿಮಾಗೆ ಶಿವಣ್ಣ ಬೆಂಬಲ

Kannada Beatz

Leave a Comment

Share via
Copy link
Powered by Social Snap