ಇಡೀ ಸಿನಿಮಾ ಪೂರ್ತಿ ಮಾದೇವ ( ವಿನೋದ್ ಪ್ರಭಾಕರ್ ) ಮಾತು ತುಂಬಾ ಕಮ್ಮಿ,ವೃತ್ತಿಯಲ್ಲಿ ಈತ ಜೈಲು ಅಪರಾಧಿಗಳಿಗೆ ನೇಣಿಗೆ ಹಾಕುವ ಹ್ಯಾಂಗ್ ಮೆನ್,
ತುಂಬಾ ರಗಡ್,ಆದ್ರೇ
ಪಾರ್ವತಿ ( ಸೋನಲ್ ) ಮಾತ್ರ ಇಡೀ ಚಿತ್ರದ ತುಂಬೆಲ್ಲ ಕಾಣುತ್ತಾಳೆ,ಎದೇಲಿ ತಂಗಾಳಿ ಎನ್ನುತ್ತಲೇ ಎಲ್ಲರನ್ನು ಕಾಡುತ್ತಾಳೆ
ರಾಬರ್ಟ್ ನ ಮಸ್ತ ಜೋಡಿ,ಅಂತಾನೆ ಫೇಮಸ್ ಆಗಿದ್ದ ವಿನೋದ್ ಪ್ರಭಾಕರ್ ಮತ್ತು ಸೋನಲ್ ಜೋಡಿ, ಮಾದೇವ ದಲ್ಲಿ ತಮ್ಮದೇ ಆದತಂಹ ವಿಶಿಷ್ಠ ಮ್ಯಾನರಿಸಂ ಜೊತೆಗೆ ಇಬ್ಬರು ಸಹ ಪೈಪೋಟಿಗೆ ಬಿದ್ದಂತೆ ನಟಿಸಿ ಸೈ ಎನಿಸಿಕೊಂಡಿದ್ದು ಬಹಳ ಗ್ರೇಟ್ ವಿಷ್ಯ ಆಗಿದೆ..

ವಿನೋದ್ ಪ್ರಭಾಕರ್ ಸಿನಿ ಕೆರಿಯರ್ ನಲ್ಲಿ ಬಹುಶ: ಮಾದೇವ ಚಿತ್ರ ಬೆಂಚ್ ಮಾರ್ಕ್ ಆಗುವುದರಲ್ಲಿ ಯಾವುದೇ ಡೌಟ್ ಇಲ್ಲ..
ಮಾದೇವ ನಾಗಿ ಸಂಪೂರ್ಣ ಚಿತ್ರದ ಕಥೆ ತುಂಬೆಲ್ಲ ತುಂಬಿ ಕೊಂಡಿರುವ ನಾಯಕ ಮಾದೇವನ ತಂದೆ ಒಬ್ಬ ಶಿಸ್ತಿನ ಪೊಲೀಸ್ ಪೇದೆ, ತಾಯಿ ಇಲ್ಲದ ಮಗನನ್ನ tumbaa ಪ್ರೀತಿ ಹಾಗು ಕಾಳಜಿಯಿಂದ ಬೆಳೆಸುತ್ತಿರುತ್ತಾನೆ,ಜೈಲಿನಲ್ಲಿ ಆದಂತಹ ಒಂದು ದುರ್ಘಟನೆ ಮಾದೇವನ ಅಪ್ಪನನ್ನ ಬಲಿ ಪಡೆಯುತ್ತದೆ,ತದನಂತರ ಮಾದೇವನ ತಂದೆಯ ಹಣ ಮತ್ತು ಒಡವೆಯ ಮೇಲೆ ಕಣ್ಣಿಟ್ಟ ಚಿಕ್ಕಪ್ಪ ಚಿಕ್ಕಮ್ಮ, ಮಾದೇವನನ್ನ ಒಂದು ಕತ್ತಲೆ ಕೋಣೆಯಲ್ಲಿ ಚೈನು ಹಾಕಿ ಕಟ್ಟಿ ಹಾಕಿರುತ್ತಾರೆ,ಅಚಾನಕ್ಕಾಗಿ ಅಲ್ಲಿಗೆ ಬಂದ ಅಚ್ಯುತ ನಿಂದ ಬಚಾವಾಗಿ ಆಚೇ ಬಂದಿರುತ್ತಾನೆ,ಆತ ಒಬ್ಬಂಟಿ ಯಾರೊಂದಿಗೂ ಸಹ ಮಾತಾಡುವುದಿಲ್ಲ..
ಇಂತಹ ಮಾದೇವನ ಮೇಲೆ, ಪಾರ್ವತಿಗೆ ಪ್ರೀತಿಯಾಗುತ್ತದೆ, ಮದುವೆಯು ಆಗುತ್ತದೆ, ಅಂದುಕೊಂಡಂತೆ ಬಾಳಲು ಪ್ರಯತ್ನ ಪಟ್ಟರು ಅದು ಸಾಧ್ಯವಾಗುವುದಿಲ್ಲ ಕಾರಣ,
ಹ್ಯಾಂಗ್ ಮೆನ್ ಆಗಿದ್ದ ಸಮಯ ಮಾದೇವನಿಂದ ಜೀವ ಕಳೆದುಕೊಂಡ ಜಿಲೇಬಿ ಅಲಿಯಾಸ್ ಕಾಕ್ರೋಚ್ ಸುಧಿಯ ತಾಯಿ,ಕಮಲಾಕ್ಷೀ ಅಲಿಯಾಸ್ ಹಿರಿಯ ನಟಿ ಶೃತಿ
ಮಾದೇವನ ಲೈಫನಲ್ಲಿ ಬಿರುಗಾಳಿ ಎಬ್ಬಿಸುತ್ತಾಳೆ..
ಚಿತ್ರದ ಮತ್ತೊಂದು ಪ್ರಮುಖ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡ ಶ್ರೀನಗರ ಕಿಟ್ಟಿ, ಯುವಕರನ್ನು ದಾರಿ ತಪ್ಪಿಸುವ, ಮಾದಕ ದ್ರವ್ಯಗಳ ಕಳ್ಳ ವ್ಯವಹಾರದ ವಿಚಾರದಲ್ಲಿ, ಮಾದೇವನಿಂದ ಒದೆ ತಿಂದಿರುತ್ತಾನೆ..
ಒಬ್ಬಂಟಿ, ಕ್ರೂರ, ಸಿಟ್ಟಿನ ಮನುಷ್ಯನಾಗಿದ್ದ ಮಾದೇವ, ತನ್ನ ಜೀವನದಲ್ಲಿ ಪಾರ್ವತಿ ಬಂದಮೇಲೇ badalaagi, ಕೆಲಸ ಮಾಡುತ್ತಾ ನೆಮ್ಮದಿಯಿಂದ ಇದ್ದಾಗ ಆಗುವಂತಹ ಒಂದು,ಘೋರ ಘಟನೆ ಮನುಷ್ಯನಾಗಿದ್ದ ಮಾದೇವನನ್ನ ಅತ್ಯಂತ ಕ್ರೂರ ಮೃಗನನ್ನಾಗಿ ಮಾಡುತ್ತದೆ, ಅದು ಯಾಕೆ ಅನ್ನೋದೇ ಚಿತ್ರದ ಮತ್ತೊಂದು ಸೀಕ್ರೆಟ್..
ಮಾದೇವನಿಗೆ ಸಂಗೀತ ಮಾಡಿದ ಪ್ರದ್ಯುತ್ತನ ಕೆಲ್ಸ ಮೆಚ್ಚುವಂತದ್ದು, ಹಾಡುಗಳೆಲ್ಲವೂ ಸಖತ್ ಆಗಿವೆ, ನವೀನ ರೆಡ್ಡಿ ನಿರ್ದೇಶನ ಕ್ಲಾಸ್, ಇಂತದ್ದೊಂದು ಅದ್ಭುತ ಚಿತ್ರ ಕೊಟ್ಟ ನಿರ್ಮಾಪಕ ಆರ್ ಕೇಶವ್ ( ದೇವಸಂದ್ರ ) ಇವರಿಗೆ ಒಳ್ಳೇ ಹೆಸರು ಗ್ಯಾರಂಟಿ,ಇನ್ನು ಕೊನೆಯದಾಗಿ ಹೇಳುವುದಾದರೆ ನಾಯಕ ವಿನೋದ್ ಪ್ರಭಾಕರ್ ನಟನೆಗೆ ಹ್ಯಾಟ್ಸಾಫ್ ಹಾಗೇ ಸೋನಲ್ ನಟನೆಗೆ ಸಿಕ್ಕಾಪಟ್ಟೆ ಮೆಚ್ಚುಗೆ ಸಿಗುವುದರಲ್ಲಿ ಡೌಟ್ ಇಲ್ಲ,
ಶೃತಿ ನಟನೆಗೆ ಫುಲ್ ಮಾರ್ಕ್ಸ್, ಕಾಕ್ರೋಚ್ ಸುಧಿ ಬೇರೆ ಚಿತ್ರಗಳಿಗಿಂತಲೂ ಇಲ್ಲಿ ಚೆನ್ನಾಗ್ ನಟಿಸಿದ್ದಾರೆ..
