Kannada Beatz
News

ಆದಿತ್ಯ ವಿನೋದ್ ಬರೆದ ಕೆಂದಾವರೆ ಪುಸ್ತಕಕ್ಕೆ ಸಿನಿಮಾ ಟಚ್

ಸಿನಿಮಾವಾಗುತ್ತಿದೆ ಆದಿತ್ಯ ವಿನೋದ್ ‘ಕೆಂದಾವರೆ’ ಕಾದಂಬರಿ…ಯಾರು ನಿರ್ದೇಶಕರು?

ಆದಿತ್ಯ ವಿನೋದ್ ಬರೆದ ಕೆಂದಾವರೆ ಪುಸ್ತಕ ಬಿಡುಗಡೆ ಮಾಡಿದ ನಾಗಲಕ್ಷ್ಮಿ ಚೌದರಿ…ಸಿನಿಮಾ ರೂಪ ತಾಳುತ್ತಿದೆ ಕೆಂದಾವರೆ

ಬರಹಗಾರ, ಸಂಗೀತಗಾರ ಹಾಗೂ ನಟ ಆದಿತ್ಯ ವಿನೋದ್ ಅವರು ಬರೆದ ಪುಸ್ತಕವೀಗ ಸಿನಿಮಾ ರೂಪ ತಾಳುತ್ತಿದೆ. ಕಡಲ ತೀರ ಭಾರ್ಗವ ಸಿನಿಮಾ ನಿರ್ದೇಶಿಸಿದ್ದ ಪನ್ನಗ ಸೋಮಶೇಖರ್ ಕಾದಂಬರಿ ಆಧಾರಿತವಾದ ಕೆಂದಾವರೆ ಪುಸ್ತಕಕ್ಕೆ ಸಿನಿಮಾ ಟಚ್ ಕೊಡಲಿದ್ದಾರೆ.

ಮಹಿಳಾ ಆಯೋಗದ ಅಧ್ಯಕ್ಷೆಯಿಂದ ಪುಸ್ತಕ ಬಿಡುಗಡೆ

ಇತ್ತೀಚೆಗೆ ಕೆಂದಾವರೆ ಪುಸ್ತಕವನ್ನು ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಅನಾವರಣ ಮಾಡಿದರು. ನಿರುತ ಪಬ್ಲಿಕೇಷನ್ ಪುಸ್ತಕ ಪ್ರಕಟಿಸಿದೆ. ಆದಿತ್ಯ ವಿನೋದ್ ಅವರು ಬರೆದ ಈ ಪುಸ್ತಕ ಮಕ್ಕಳ ಕಳ್ಳತನದ ಸುತ್ತ ಸಾಗುವ ಕಥೆಯನ್ನು ಒಳಗೊಂಡಿದೆ.

ತಾರಾ ಬಳಗದ ಯಾರೆಲ್ಲಾ ಇದ್ದಾರೆ?

ಕೆಂದಾವರೆ ಪುಸ್ತಕದ ಟೈಟಲ್ ನ್ನೇ ಸಿನಿಮಾಗೆ ಇಡಲಾಗಿದೆ. ಪನ್ನಗ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಆದಿತ್ಯ ವಿನೋದ್ ನಟಿಸುತ್ತಿದ್ದು, ನಾಯಕಿಯಾಗಿ ದಿಯಾ ಸಾಥ್ ಕೊಡುತ್ತಿದ್ದಾರೆ. ಉಳಿದಂತೆ ಅಕ್ಷತಾ ಶ್ರೀಧರ್ ಶಾಸ್ತ್ರೀ, ಪ್ರಕಾಶ್ ತುಮ್ಮಿನಾಡು, ಶ್ರವಣ್ ಜಗದೀಶ್, ಪುನೀತ್ ಓಂಕಾರ್, ವಿಶ್ವಾಸ್ ಕೃಷ್ಣ ತಾರಾಬಳಗದಲ್ಲಿದ್ದಾರೆ.

ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವುದರ ಜೊತೆಗೆ ಆದಿತ್ಯ ವಿನೋದ್ ಸಂಗೀತ ನಿರ್ದೇಶನದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದು, ಅರುಣ್ ಕುಮಾರ್ ಕ್ಯಾಮೆರಾ ಹಿಡಿಯಲಿದ್ದಾರೆ. ಈಗಾಗಲೇ 50%ರಷ್ಟು ಶೂಟಿಂಗ್ ಮುಕ್ತಾಯಗೊಂಡಿದೆ. ಹುಬ್ಬಳ್ಳಿ, ಧಾರವಾಡ, ಸವದತ್ತಿ, ಸಾಗರ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿಯೇ ಕೆಂದಾವರೆ ಸಿನಿಮಾ ಪ್ರೇಕ್ಷಕರ ಎದುರು ಬರಲಿದೆ. ಅಪ್ರಮೇಯ ಪ್ರೊಡಕ್ಷನ್ ಬ್ಯಾನರ್ ನಡಿ ಈ ಚಿತ್ರ ತಯಾರಾಗುತ್ತಿದೆ.

Related posts

ದೀ ಎಂಡ್” ಚಿತ್ರದಲ್ಲಿ ಹನುಮಾನ್ ಚಾಲೀಸ

Kannada Beatz

ಕೆಟಿಎಂ’ ಸಿನಿಮಾದ ಮೆಲೋಡಿ ಸಾಂಗ್ ರಿಲೀಸ್..ಸೋಜಿಗ ಎಂದು ಗುನುಗಿದ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ

Kannada Beatz

ಉಗ್ರಾವತಾರ ಸಾಂಗ್ ಹಿಟ್

Kannada Beatz

Leave a Comment

Share via
Copy link