“ಬಿಚ್ಚುಗತ್ತಿ“ ಸಿನಿಮಾ ಮೂಲಕ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ರಾಜವರ್ಧನ್ ಸದ್ಯ ‘ಪ್ರಣಯಂ’ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಈ ಸಿನಿಮಾ ಬೆನ್ನಲ್ಲೇ ರಾಜವರ್ಧನ್ ಮತ್ತೊಂದು ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ರಾಜವರ್ಧನ್ ಮೂರನೇ ಸಿನಿಮಾ ಹಿಂದಿನ ಎರಡು ಸಿನಿಮಾಗಳಿಗಿಂತಲೂ ಕೊಂಚ ವಿಭಿನ್ನವಾಗಿರಲಿದೆ. ರಾ ಪ್ಯಾಟರ್ನ್ ಸಿನಿಮಾ ಇದಾಗಿರುತ್ತದೆ. ಈ ಚಿತ್ರದಲ್ಲಿ ಖಡಕ್ ಲುಕ್ಕಿನಲ್ಲಿ ರಾಜವರ್ಧನ್ ಮಿಂಚಲಿದ್ದು, ಈ ಚಿತ್ರಕ್ಕೆ ಹಿರಣ್ಯ ಎಂಬ ಟೈಟಲ್ ಇಡಲಾಗಿದೆ.
ಹಿರಣ್ಯ ಶೀರ್ಷಿಕೆ ಮೊದಲು
ಧನಂಜಯ್ ಬಳಿ ಇತ್ತು.
ಗೆಳೆಯನಿಗೆ ಒಳ್ಳೆಯದಾಗಲಿ ಎನ್ನುವ ಒಂದೇ ಕಾರಣಕ್ಕೆ ಟೈಟಲನ್ನು ಬಿಟ್ಟುಕೊಟ್ಟಿದ್ದಾರೆ.
ಶಾರ್ಟ್ ಮೂವಿಗಳನ್ನು ಮಾಡಿರುವ ಅನುಭವ ಇರುವ ಪ್ರವೀಣ್ ಅವ್ಯೂಕ್ತ್ ಹಿರಣ್ಯ ಚಿತ್ರದ ಮೂಲಕ ಪೂರ್ಣ ಪ್ರಮಾಣದಲ್ಲಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ವೇದಾಸ್ ಇನ್ಪಿನಿಟಿ ಪಿಚ್ಚರ್ ನಡಿ ವಿಘ್ನೇಶ್ವರ.ಯು ಹಾಗೂ ವಿಜಯ್ ಕುಮಾರ್ ಬಿ.ವಿ ಸಿನಿಮಾಗೆ ಬಂಡವಾಳ ಹೂಡಿದ್ದು, ಯೋಗೇಶ್ವರನ್ ಆರ್ ಕ್ಯಾಮೆರಾ ಕೈಚಳಕ, ಜೂಡಾ ಸ್ಯಾಂಡಿ ಮ್ಯೂಸಿಕ್ ಸಿನಿಮಾದಲ್ಲಿರಲಿದೆ.