HomeNewsಅಪ್ಪು ಜೊತೆಗಿನ ಸುಮಧುರ ಕ್ಷಣಗಳನ್ನು ಬಿಚ್ಚಿಟ್ಟ ಜನಾರ್ದನ ರೆಡ್ಡಿ ಸುಪುತ್ರ…ಅಪ್ಪು ಆಶೀರ್ವಾದದೊಂದಿಗೆ ಕಿರೀಟಿ ಬಣ್ಣದ ಲೋಕಕ್ಕೆ...

ಅಪ್ಪು ಜೊತೆಗಿನ ಸುಮಧುರ ಕ್ಷಣಗಳನ್ನು ಬಿಚ್ಚಿಟ್ಟ ಜನಾರ್ದನ ರೆಡ್ಡಿ ಸುಪುತ್ರ…ಅಪ್ಪು ಆಶೀರ್ವಾದದೊಂದಿಗೆ ಕಿರೀಟಿ ಬಣ್ಣದ ಲೋಕಕ್ಕೆ ಪಾದಾರ್ಪಣೆ

ಅಪ್ಪು ಅಂದ್ರೆ ಅಪ್ಪುಗೆ, ಪ್ರೀತಿ, ಸ್ನೇಹ.. ಆತ್ಮೀಯತೆ.. ಸ್ಟಾರ್ ಅನ್ನುವ ಹಮ್ಮು ಬಿಮ್ಮು ಇಲ್ಲದೇ ಎಲ್ಲರೊಳಗೆ ಒಬ್ಬರಾಗಿ ಬರೆಯುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಲ್ಲರೊಟ್ಟಿಗೆ ಒಡನಾಟ ಹೊಂದಿದ್ದವರು. ಅದೇ ರೀತಿ ಮಾಜಿ ಸಚಿವ ಜನಾರ್ದನ ರೆಡ್ಡಿ ಕುಟುಂಬಕ್ಕೂ ಅಪ್ಪುಗೆ ಕುಟುಂಬಕ್ಕೂ ಒಂದೊಳ್ಳೆ ಅವಿನಾಭಾವ ಸಂಬಂಧವಿತ್ತು. ಈಗ ಅಪ್ಪು ಆಶೀರ್ವಾದೊಂದಿಗೆ ಕಿರೀಟಿ ಬಣ್ಣದ ಲೋಕಕ್ಕೆ ಅಡಿ ಇಡಲು ಸಜ್ಜಾಗಿದ್ದಾರೆ. ಒಂದಷ್ಟು ತಯಾರಿ ಮಾಡಿಕೊಂಡು ದೊಡ್ಡ ತಾರಾಬಳಗ, ತಾಂತ್ರಿಕ ಬಳಗದೊಂದಿಗೆ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡ್ತಿರುವ ಕಿರೀಟಿ ಅಪ್ಪು ಜೊತೆಗಿನ ಸುಮಧುರ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

ಅಪ್ಪು ಸರಳತೆ ಕೊಂಡಾಡಿದ ಕಿರೀಟಿ!

ಅಪ್ಪು ಅಂದ್ರೆ ಕಿರೀಟಿಗೆ ಅಚ್ಚುಮೆಚ್ಚು..ಪ್ರೀತಿಯ ಹುಚ್ಚು. ಬಾಲ್ಯದಲ್ಲೊಮ್ಮೆ ಕಿರೀಟಿ ಅಪ್ಪು ಭೇಟಿಯಾದ ಕ್ಷಣ ಹಾಗೂ ಜಾಕಿ ರಿಲೀಸ್ ಸಂದರ್ಭದಲ್ಲಿ ಭೇಟಿಯಾದ ಎರಡು ಘಟನೆಗಳನ್ನು ನೆನಪಿಸಿಕೊಂಡು ಒಂದು ಭಾವನಾತ್ಮಕ ಪೋಸ್ಟ್ ವೊಂದನ್ನು ಮಾಡಿದ್ದಾರೆ. ಅಪ್ಪು ಸರಳತೆ.. ವಿನಯತೆ, ನಮತ್ರೆ.. ಆತ್ಮೀಯತೆ ಎಲ್ಲವನ್ನು ಅದ್ಭುತ ಬರವಣೆಗೆ ಮೂಲಕ ಕಿರೀಟಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕಿರೀಟಿ ಪೋಸ್ಟ್

ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸ 10 ವರ್ಷಗಳದ್ದು . ಆದರೂ ಆ ನೆನಪುಗಳು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. 2010ರಲ್ಲಿ ಜಾಕಿ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ನಾನು ಅಪ್ಪು ಸರ್ ಅವರನ್ನು ಮೊದಲ ಸಲ ಭೇಟಿಯಾದೆ. ಅವರ ಡ್ಯಾನ್ಸ್, ಆ್ಯಕ್ಷನ್, ಸ್ಕ್ರೀನ್ ಪ್ರೆಸೆನ್ಸ್ ನೋಡಿ ಅಚ್ಚರಿಗೊಂಡಿದ್ದೆ. ಆದರೆ, ಅವರು ಆಫ್ ಸ್ಕ್ರೀನ್ ನಲ್ಲಿದ್ದ ರೀತಿ ಮನಸಿಗೆ ಹತ್ತಿರವಾಯಿತು. ನಾವು ಥಿಯೇಟರ್‌ನಿಂದ ನನ್ನ ಮನೆಗೆ ಹೋಗುತ್ತಿದ್ದಾಗ, ಮಳೆ ಬೀಳುತ್ತಿತ್ತು ಮತ್ತು ಪುನೀತ್ ಸರ್ ಅವರೆ ನಬ್ಬರಿಗೂ ಕೊಡೆ ಹಿಡಿದರು. ನೃತ್ಯದ ಬಗ್ಗೆ ಮತ್ತು ಅವರ ಆಕ್ಷನ್ ಬಗ್ಗೆ ನನ್ನೊಂದಿಗೆ ಮಾತನಾಡುತ್ತಿದ್ದರು. ಚಿಕ್ಕ ಹುಡುಗನಿಗೆ ಕೊಡೆ ಹಿಡಿದ ಸೂಪರ್‌ಸ್ಟಾರ್. ನಮ್ಮ ಕನಸಿನಲ್ಲಿಯೂ ಊಹಿಸಲಾಗದ ಸಂಗತಿ. ಅದು ಪುನೀತ್ ಸರ್ ಅವರಿಂದ ಮಾತ್ರ ಸಾಧ್ಯ. ಆ ದಿನ ನಾನು ಸರಳತೆಯ ಮೌಲ್ಯವನ್ನು ಅರಿತೆ. ಇದು ಅಪ್ಪು ಸರ್ ಅವರಿಂದ ನಾನು ಅತ್ಯಮೂಲ್ಯವಾದ ಪಾಠ.

ಜಗತ್ತಿಗೆ ನನ್ನನ್ನು ಪರಿಚಯಿಸಿಕೊಳ್ಳಲು ಕೇವಲ ಒಂದು ದಿನ ಬಾಕಿ. ಇದೆಲ್ಲಾ ಶುರುವಾಗಿದ್ದು ಪುನೀತ್ ರಾಜ್‌ಕುಮಾರ್ ಸರ್ ಅವರಿಂದ. ಸ್ಫೂರ್ತಿ, ಮಾದರಿ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಜೀವನದ ಮಾರ್ಗದರ್ಶಿ ಅವರು. “ನಿಮ್ಮ ಮಾತುಗಳನ್ನು ಎಂದಿಗೂ ಮರೆಯುವುದಿಲ್ಲ ಸರ್”. ನನ್ನ ಮೇಲಿನ ನಿಮ್ಮ ನಂಬಿಕೆಯೆ ರಕ್ಷಾಕವಚ. ನಾನು ಅದನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ. ನೀವು ಮತ್ತು ನಮ್ಮ ಜನತೆ ಯಾವಾಗಲೂ ಹೆಮ್ಮೆಪಡುವಂತೆ ಮಾಡಲು ಸದಾ ಶ್ರಮಿಸುತ್ತೇನೆ.

ಇಂತಿ,ಕಿರೀಟಿ

ಕಿರೀಟಿ ಹೀಗೆ ಅಪ್ಪು ಒಟ್ಟಿಗಿನ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದು, ತಮ್ಮ ಮುಂದಿನ ಸಿನಿಮಾ ಹಾದಿಗೆ ಜೊತೆಯಾಗಿ ಇರಬೇಕೆಂದು ಕೇಳಿಕೊಂಡಿದ್ದಾರೆ. ಅಪ್ಪು ಆರ್ಶೀವಾದದೊಂದಿಗೆ ಹೊಸ ಸಿನಿಮಾಗೆ ಕಿರೀಟಿ ಮುನ್ನುಡಿ ಬರೆಯುತ್ತಿದ್ದು, ನಾಳೆ ಅದ್ಧೂರಿಯಾಗಿ ಕಿರೀಟಿ ಬೊಚ್ಚಲ ಚಿತ್ರ ಸೆಟ್ಟೇರುತ್ತಿದೆ. ರಾಜಮೌಳಿಯ ಬಲದೊಂದಿಗೆ ರವಿಚಂದ್ರನ್ ನಂತಹ ದಿಗ್ಗಜ ತಾರೆಯರ ಸಾಥ್ ನೊಂದಿಗೆ ಕಿರೀಟಿ ಮೊದಲ ಸಿನಿಮಾ ಮುಹೂರ್ತ ನೆರವೇರಲಿದೆ.

Must Read

spot_img
Share via
Copy link
Powered by Social Snap