HomeNewsನವೆಂಬರ್ 14 ರಂದು "ಸ್ಪೂಕಿ ಕಾಲೇಜ್" ಚಿತ್ರದ "ಮೆಲ್ಲುಸಿರೆ ಸವಿಗಾನ" ಹಾಡು ಬಿಡುಗಡೆ.

ನವೆಂಬರ್ 14 ರಂದು “ಸ್ಪೂಕಿ ಕಾಲೇಜ್” ಚಿತ್ರದ “ಮೆಲ್ಲುಸಿರೆ ಸವಿಗಾನ” ಹಾಡು ಬಿಡುಗಡೆ.

ಕ್ರಿಯಾಶೀಲ ನಿರ್ದೇಶಕ ಭರತ್ ಜಿ ನಿರ್ದೇಶಿಸಿರುವ “ಸ್ಪೂಕಿ ಕಾಲೇಜ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ತೆರೆಗೆ ಬರಲು ಅಣಿಯಾಗುತ್ತಿದೆ. ಧಾರವಾಡದ ಶತಕಕ್ಕೂ ಮೀರಿದ ಇತಿಹಾಸವಿರುವ ಪುರಾತನ ಕಾಲೇಜಿನಲ್ಲಿ ಈ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ. ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ದಾಂಡೇಲಿ ಅಭಯಾರಣ್ಯದಲ್ಲಿ ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ನಡೆದಿದೆ.

ಟೀಸರ್ ಮೂಲಕ ಈಗಾಗಲೇ ಜನಮನ ಗೆದ್ದಿರುವ “ಸ್ಪೂಕಿ ಕಾಲೇಜ್” ಚಿತ್ರದಲ್ಲಿ ಡಾ||ರಾಜಕುಮಾರ್ ಅಭಿನಯದ “ವೀರಕೇಸರಿ” ಚಿತ್ರದ ಜನಪ್ರಿಯ “ಮೆಲ್ಲುಸಿರೆ ಸವಿಗಾನ” ಹಾಡನ್ನು ಬಳಸಿಕೊಳ್ಳಲಾಗಿದೆ.‌ ಈ ಹಾಡಿಗೆ ರೀಷ್ಮಾ ನಾಣಯ್ಯ ಹೆಜ್ಜೆ ಹಾಕಿದ್ದಾರೆ. ಈ ಹಾಡು ಇದೇ ನವೆಂಬರ್ 14ರಂದು ಬಿಡುಗಡೆಯಾಗಲಿದೆ.

ಭೂಷಣ್ ಅವರ ನೃತ್ಯ ನಿರ್ದೇಶನದಲ್ಲಿ, 250 ಕ್ಕೂ ಅಧಿಕ ತಂತ್ರಜ್ಞರ ಪಾಲ್ಗೊಳ್ಳುವಿಕೆಯಲ್ಲಿ, ಅದ್ಭುತವಾದ ಸೆಟ್ ನಲ್ಲಿ ಈ ಹಾಡು ಚಿತ್ರೀಕರಣವಾಗಿದೆ.

“ರಂಗಿತರಂಗ” , “ಅವನೇ ಶ್ರೀಮನ್ನಾರಾಯಣ” ಚಿತ್ರಗಳ ನಿರ್ಮಾಪಕ ಹೆಚ್.ಕೆ.ಪ್ರಕಾಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಕಥೆ, ಚಿತ್ರಕಥೆ ಹಾಗು ಸಂಭಾಷಣೆಯನ್ನು ನಿರ್ದೇಶಕ
ಭರತ್ ಅವರೆ ಬರೆದಿದ್ದಾರೆ.

ಮನೋಹರ್ ಜೋಶಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಶ್ರೀಕಾಂತ್ (ಕೆ ಜಿ ಎಫ್) ಅವರ ಸಂಕಲನ ಈ ಚಿತ್ರಕ್ಕಿದೆ.

“ಪ್ರೀಮಿಯರ್ ಪದ್ಮಿನಿ” ಖ್ಯಾತಿಯ ವಿವೇಕ್ ಸಿಂಹ “ಸ್ಪೂಕಿ ಕಾಲೇಜ್” ನ ನಾಯಕ. “ದಿಯಾ” ಮೂಲಕ ಹೆಸರಾಗಿರುವ ಖುಷಿ ರವಿ ನಾಯಕಿ. ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಎಸ್.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಹಾಗೂ “ಕಾಮಿಡಿ ಕಿಲಾಡಿಗಳು” ಶೋನ‌ ಜನಪ್ರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ರೀಷ್ಮಾ ನಾಣಯ್ಯ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.

Must Read

spot_img
Share via
Copy link
Powered by Social Snap