Kannada Beatz
News

ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ

ಫೀನಿಕ್ಸ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಡಿ ಶ್ರೀನಿವಾಸ್ ಮಂಡ್ಯ ನಿರ್ದೇಶಿಸುತ್ತಿರುವ ‘ರೋಲೆಕ್ಸ್ ಕೋಮಲ್’ ಚಿತ್ರತಂಡ ಇಂದು ಮುಹೂರ್ತ ಆಚರಿಸಿಕೊಂಡಿದೆ. ಸೆನ್ಸೇಶನಲ್ ಸ್ಟಾರ್ ಕೋಮಲ್, ಸೋನಾಲ್ ಮೊಂಟೆರೋ ಮುಖ್ಯ ಭೂಮಿಕೆಯ ಈ ಚಿತ್ರದ ಚಿತ್ರೀಕರಣ ನಾಳೆಯಿಂದ ಆರಂಭವಾಗಲಿದೆ.

ನಿರ್ದೇಶಕ ಶ್ರೀನಿವಾಸ್ ಮಂಡ್ಯ ಮಾತನಾಡಿ ನಾಳೆಯಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು ಸುತ್ತಾಮುತ್ತ ಚಿತ್ರೀಕರಣ ನಡೆಯಲಿದೆ. ಕೋಮಲ್ ಸರ್ ಈ ಹಿಂದಿನ ತಮ್ಮ ಸಿನಿಮಾಗಳಿಗಿಂತ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪಾತ್ರ ವಿಭಿನ್ನವಾಗಿದೆ. ವಿಭಿನ್ನವಾಗಿ ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ರಂಗಾಯಣ ರಘು, ಶೋಭರಾಜ್, ಅಪೂರ್ವ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ನಟ ಕೋಮಲ್ ಮಾತನಾಡಿ ನಾಳೆಯಿಂದ ಚಿತ್ರೀಕರಣ ಆರಂಭವಾಗುತ್ತೆ. ರೋಲೆಕ್ಸ್ ಅನ್ನೋದು ಒಂದು ಬ್ರ್ಯಾಂಡ್ ಆ ಬ್ರ್ಯಾಂಡ್ ಹೇಗೆ ಕ್ರಿಯೇಟ್ ಆಗುತ್ತೆ ಅನ್ನೋದೇ ಈ ಚಿತ್ರದ ಎಳೆ. ತುಂಬಾ ಎಂಟಟೈನ್ಮೆಂಟ್ ಆಗಿದೆ ಸಿನಿಮಾ. ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್ ಇದೆ. ಗರಗಸ ನಂತರ ಈ ತರದೊಂದು ಪ್ರಯೋಗ ಮಾಡುತ್ತಿದ್ದೇನೆ. ಪರ್ಫಾಮೆನ್ಸ್ ಗೆ ಸಾಕಷ್ಟು ಅವಕಾಶ ಇದೆ. ಹಾಡುಗಳು ಈಗಾಗಲೇ ರೆಕಾರ್ಡ್ ಆಗಿದೆ. ಆಲ್ಬಂ ಹಿಟ್ ಆಗೋ ಎಲ್ಲಾ ಸೂಚನೆ ಕೂಡ ಇದೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸೋನಾಲ್ ಮೊಂಟೆರೋ ಮಾತನಾಡಿ ಇಡೀ ಸಿನಿಮಾದಲ್ಲಿ ನಾನು ಕೋಮಲ್ ಸರ್ ಕ್ಯಾರಿ ಆಗ್ತೀವಿ. ನಾಳೆಯಿಂದ ಚಿತ್ರೀಕರಣ ಆರಂಭವಾಗುತ್ತೆ. ನನ್ನ ಭಾಗದ ಚಿತ್ರೀಕರಣ 25ದಿನ ನಡೆಯಲಿದೆ. ಸದ್ಯ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತದೆ. ಶುಗರ್ ಫ್ಯಾಕ್ಟರಿ ಬಿಡುಗಡೆಗೆ ರೆಡಿಯಾಗಿದೆ. ಮಿ. ನಟ್ವರ್ ಲಾಲ್, ಬುದ್ದಿವಂತ 2, ಗರಡಿ, ಮಹಾದೇವ, ತಲ್ವರ್ ಪೇಟೆ, ಸರೋಜಿನಿ ನಾಯ್ಡು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ ಎಂದು ತಿಳಿಸಿದ್ರು.

ನಿರ್ಮಾಪಕ ಅನಿಲ್ ಕುಮಾರ್ ಮಾತನಾಡಿ ಫೀನಿಕ್ಸ್ ಎಂಟರ್ಟೈನ್ಮೆಂಟ್ಸ್ ನಲ್ಲಿ ಮೂಡಿ ಬರ್ತಿರುವ ಮೊದಲ ಕನ್ನಡ ಸಿನಿಮಾ. ಚಿತ್ರದ ಕಥೆ ನನಗೆ ತುಂಬಾ ಇಷ್ಟ ಆಯ್ತು. ಕೋಮಲ್ ಸರ್ ಕೂಡ ಕಥೆ ಕೇಳಿ ಒಕೆ ಮಾಡಿದ್ದು ತುಂಬಾ ಖುಷಿ ಆಯ್ತು. ಈ ಸಬ್ಜೆಕ್ಟ್ ಮೇಲೆ ಕೋಮಲ್ ಸರ್ ಕೂಡ ಬಹಳ ನಂಬಿಕೆ ಇಟ್ಟಿದ್ದಾರೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬರಲಿದೆ. ಸೆಪ್ಟೆಂಬರ್ ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ. ರಾಕೇಶ್ ಸಿ ತಿಲಕ್ ಕ್ಯಾಮೆರಾ ವರ್ಕ್, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ, ಅರವಿಂದ್ ರಾಜ್ ಸಂಕಲನ ಚಿತ್ರಕ್ಕಿದೆ ಎಂದು ತಿಳಿಸಿದ್ರು.

Related posts

ವಿನಯ್ ಪ್ರೇಮಕಥೆಯ ಮತ್ತೊಂದು ಹಾಡು ಬಿಡುಗಡೆ…ಕೇಳಿ ಸೂಫಿ ಶೈಲಿ ಸರಳ ಗೀತೆ…

Kannada Beatz

ಮತ್ತೊಂದು ಗರಿ! ಲಹರಿಯಿಂದ ಹೊರಬಂದ ರಿಕಿ ಕೇಜ್‌ ಆಲ್ಬಂ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್‌ಗೆ ನಾಮನಿರ್ದೇಶನ!!

administrator

“ಡೋಸ್” ಕೊಡಲು ಸಿದ್ದರಾದ ಉತ್ಸಾಹಿ ಯುವಕರು.

Kannada Beatz

Leave a Comment

Share via
Copy link
Powered by Social Snap