HomeNewsಸಿನಿಲೋಕಕ್ಕೆ ಸಚಿನ್ ಚೆಲುವರಾಯಸ್ವಾಮಿ ರೀ-ಎಂಟ್ರಿ… ಬೆಂಗಳೂರು ಬಾಯ್ಸ್ ಸಿನಿಮಾ ಮೂಲಕ ಅದ್ದೂರಿ ಕಂಬ್ಯಾಕ್

ಸಿನಿಲೋಕಕ್ಕೆ ಸಚಿನ್ ಚೆಲುವರಾಯಸ್ವಾಮಿ ರೀ-ಎಂಟ್ರಿ… ಬೆಂಗಳೂರು ಬಾಯ್ಸ್ ಸಿನಿಮಾ ಮೂಲಕ ಅದ್ದೂರಿ ಕಂಬ್ಯಾಕ್

ಹೋಗುಮೆ ಹೋಗುಮೆ ಎಲ್ಲರ ಒಂದಪ್ಪ ಕದ್ದು ಹೋಗುಮೆ….ಇದು ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿಂಗಿಂಗ್…ವಿ.ನಾಗೇಂದ್ರ ಪ್ರಸಾದ್ ಅಂದ ಚೆಂದದ ಪದಗಳನ್ನು ಪೊಣಿಸಿ ಬರೆದ ಅದ್ಭುತ ಸಾಹಿತ್ಯದ ಈ ಗಾನಲಹರಿಗೆ ಧ್ವನಿಯಾದವರು ನವೀನ್ ಸಜ್ಜು. ಇದೇ ಹಾಡಿನಲ್ಲಿ ಲವರ್ ಬಾಯ್ ಲುಕ್ ನಲ್ಲಿ, ಅದ್ಭುತ ನಟನೆ ಮೂಲಕ ಗಮನಸೆಳೆದವರು ಸಚಿನ್ ಚೆಲುವರಾಯಸ್ವಾಮಿ.

ಮಾಜಿ ಸಚಿವ ಚೆಲುವರಾಯಸ್ವಾಮಿ ಸುಪುತ್ರ ಸಚಿನ್, ಕಳೆದ ಐದು ವರ್ಷದ ಹಿಂದೆ ಹ್ಯಾಪಿ ಬರ್ತ್​​ಡೇ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾದಲ್ಲಿಯೇ ಭರವಸೆ ಮೂಡಿಸಿದ್ದ ಸಚಿನ್ ಒಂದಷ್ಟು ವರ್ಷಗಳ ಕಾಲ ಸಿನಿಮಾ ಲೋಕದಿಂದ ದೂರ ಸರಿದಿದ್ದರು. ಇದೀಗ ಬೆಂಗಳೂರು ಬಾಯ್ಸ್ ಸಿನಿಮಾ ಮೂಲಕ ಸಚಿನ್ ಮತ್ತೆ ಅದ್ಧೂರಿಯಾಗಿ ಕಂಬ್ಯಾಕ್ ಆಗಿದ್ದಾರೆ.

ಹೊಸ ಉತ್ಸಾಹ, ಹುಮ್ಮಸ್ಸಿನೊಂದಿಗೆ ಸಚಿನ್, ಫೀಲ್ಡ್​​​ಗೆ​​​​​​​​​​​​ ಇಳಿದಿದ್ದು, ಈ ಬಾರಿ ಭರ್ಜರಿ ತಯಾರಿ ಮಾಡಿಕೊಂಡು ಎಂಟ್ರಿ‌ ಕೊಟ್ಟಿದ್ದಾರೆ. ಮಾಸ್ ಎಲಿಮೆಂಟ್ಸ್​​​​​​ ಕಥೆ ಆಧರಿಸಿರುವ ‘ಬೆಂಗಳೂರು ಬಾಯ್ಸ್​​​​​​’ ಸಿನಿಮಾಗಾಗಿ, ಆ್ಯಕ್ಟಿಂಗ್, ಡ್ಯಾನ್ಸಿಂಗ್ ಜೊತೆ ಫಿಟ್ನೆಸ್ ಕಡೆಗೂ ಹೆಚ್ಚಿನ ಗಮನ ಹರಿಸಿದ್ದಾರೆ.

ಮಲ್ಟಿಸ್ಟಾರ್ ಚಿತ್ರವಾಗಿರುವ ಬೆಂಗಳೂರು ಬಾಯ್ಸ್ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಗುಟ್ಟುಬಿಟ್ಟು ಕೊಡದ ಸಚಿನ್, ಇದೊಂದು ರೊಮ್ಯಾಂಟಿಕ್‌ ಕಾಮಿಡಿ ಮನರಂಜನೆಯ ಚಿತ್ರವಾಗಿದ್ದು, ಕಾಲೇಜು, ಎಮೋಷನ್‌, ಪ್ರೇಮ ಕತೆ ಹೀಗೆ ಎಲ್ಲ ಅಂಶಗಳೂ ಸಿನಿಮಾದಲ್ಲಿವೆ ಎನ್ನುತ್ತಾರೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಟೀಸರ್ ಸಿನಿಮಾ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ.

ವಿಕ್ರಮ್ ಕೆ ವೈ ಸಿನಿಮಾದ ಸಿನಿಮಾಗೆ ಬಂಡವಾಳ ಹೂಡಿದ್ದು, ಪ್ರಶಾಂತ್ ರಾವ್ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ‘ಅಂಬಿ ನಿಂಗೆ ವಯಸ್ಸಾಯ್ತೋ’ ಖ್ಯಾತಿಯ ಗುರುದತ್ ಗಾಣಿಗ ಕ್ರಿಯೇಟಿವ್ ಡೈರೆಕ್ಟರ್ ಆಗಿ ಬೆಂಗಳೂರು ಬಾಯ್ಸ್ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಈ ಸಿನಿಮಾದ ಜೊತೆಯಲ್ಲಿ ಸಚಿನ್ ಭತ್ತಳಿಕೆಗೆ ಮತ್ತೊಂದು ಸಿನಿಮಾ ಸೇರ್ಪಡೆಗೊಂಡಿದ್ದು, ಸದ್ಯದಲ್ಲಿಯೇ ಆ ಹೊಸ ಪ್ರಾಜೆಕ್ಟ್ ಬಗ್ಗೆ ಅವರೇ‌ ಮಾಹಿತಿ ನೀಡಲಿದ್ದಾರೆ.

Must Read

spot_img
Share via
Copy link
Powered by Social Snap