Kannada Beatz
News

‘ಬೆಂಕಿ’ ಅಂಗಳದಿಂದ ಬಂತು ಬಿರುಗಾಳಿಯಂತಹ ಸಾಂಗ್… ಮೋಹಕ ತಾರೆ ರಮ್ಯಾ ರಿಲೀಸ್ ಮಾಡಿದ್ರು ಅನೀಶ್ ಡ್ಯಾನ್ಸಿಂಗ್ ನಂಬರ್

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಾಯಕ ನಟ ಅನೀಶ್ ತೇಜೇಶ್ವರ್ ನಟಿಸ್ತಿರುವ ಬಹುನಿರೀಕ್ಷಿತ ಸಿನಿಮಾ ಬೆಂಕಿ ಅಂಗಳದಿಂದ ಮೊದಲ ಗಾನಲಹರಿ ಬಿಡುಗಡೆಯಾಗಿದೆ. ಮೋಹಕ ತಾರೆ ರಮ್ಯಾ ಹಾಡು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

ಒಕೆನಾ ಇದು ಅನೀಶ್ ಡ್ಯಾನ್ಸಿಂಗ್‌ ನಂಬರ್

ಸಖತ್ ಕ್ಯಾಚಿ-ಮ್ಯಾಚಿಯಾಗಿರುವ ಒಕೆನಾ ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು, ಆನಂದ್ ರಾಜವಿಕ್ರಮ್ ಸಂಗೀತ‌ ನೀಡಿದ್ದು, ಐಶ್ವರ್ಯ ರಂಗರಾಜನ್ ಹಾಗೂ ಪಂಚಮ್ ಜೀವ ಧ್ವನಿಯಾಗಿದ್ದಾರೆ. ಕಲರ್ ಫುಲ್ ಆಗಿ ಮೂಡಿ‌ ಬಂದಿರುವ ಹಾಡಿನಲ್ಲಿ ಅನೀಶ್ ಹಾಗೂ‌ ಸಂಪದ ಜಬರ್ದಸ್ತ್ ಸ್ಟೆಪ್ಸ್ ಹಾಕಿದ್ದು, ಇದು ಅನೀಶ್ ಡ್ಯಾನ್ಸಿಂಗ್‌ ನಂಬರ್ ಗುರು ಅಂತಾ ಮೆಚ್ಚುಗೆ ಮಾತುಗಳು ವ್ಯಕ್ತವಾಗ್ತಿವೆ.

ಪಕ್ಕ ಮಾಸ್‌ ಹಾಗೂ ಕಮರ್ಷಿಯಲ್‌ ಬೆಂಕಿ ಸಿನಿಮಾವನ್ನು ವಿಂಕ್‌ವಿಷಲ್‌ ಪ್ರೊಡಕ್ಷನ್‌ ಬ್ಯಾನರ್‌ ನಡಿ ಅನೀಶ್ ತೇಜೇಶ್ವರ್ ನಿರ್ಮಾಣ ಮಾಡ್ತಿದ್ದು, ಇದು ಇವರ ಹತ್ತನೇ ಸಿನಿಮಾವಾಗಿದೆ. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎ.ಆರ್‌.ಬಾಬು ಅವರ ಪುತ್ರ ಶಾನ್‌ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ.

ಅಣ್ಣ-ತಂಗಿ ಸೆಂಟಿಮೆಂಟ್‌ ಕಥೆಯ ಜೊತೆಗೆ, ಹಳ್ಳಿ ಸೊಡಗಿನ ಕಂಪು ಚೆಲ್ಲುವ ಬೆಂಕಿ ಸಿನಿಮಾದಲ್ಲಿ ಶೃತಿ ಪಾಟೀಲ್, ಅಚ್ಯುತ್‌ ಕುಮಾರ್‌, ಸಂಪತ್‌, ಉಗ್ರಂ ಮಂಜು, ಹರಿಣಿ ಸೇರಿದಂತೆ ಅನುಭವಿ ಕಲಾ ಬಳಗವಿದ್ದು, ವೀನಸ್‌ ನಾಗರಾಜ್‌ ಮೂರ್ತಿ ಛಾಯಾಗ್ರಹಣವಿದೆ.

Related posts

ಪೃಥ್ವಿ ಅಂಬರ್ ನಟನೆಯ ‘ದೂರದರ್ಶನ’ ಅಂಗಳದಿಂದ ಬಂತು ಫಸ್ಟ್ ಪೋಸ್ಟರ್..ಮೊದಲ ನೋಟದಲ್ಲಿ ನಿರೀಕ್ಷೆ ಹೆಚ್ಚಿಸಿದ ಸುಕೇಶ್ ಅಂಡ್ ಟೀಂ*

Kannada Beatz

ಸೆಪ್ಟೆಂಬರ್ 5 ರಂದು ಶಿವ ಕಾರ್ತಿಕೇಯನ್ – ರುಕ್ಮಿಣಿ ವಸಂತ್ ನಟನೆಯ ಸೆಪ್ಟೆಂಬರ್ ‌ “ಮದರಾಸಿ” ಚಿತ್ರ ತೆರೆಗೆ

Kannada Beatz

ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ ಶಿವಾಜಿ ಸುರತ್ಕಲ್ 2

Kannada Beatz

Leave a Comment

Share via
Copy link
Powered by Social Snap