ಭಾವನಾತ್ಮಕ, ಸ್ಪೂರ್ತಿದಾಯಕ ಸನ್ನಿವೇಶಗಳ ಮನಮಿಡಿಯುವ ಕಥಾನಕ “ಮೇಡ್ ಇನ್ ಬೆಂಗಳೂರು” ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರ.
ಕೋಟ್ಯಾಂತರ ಜನರಿಗೆ ಆಶ್ರಯ ನೀಡಿರುವ ಬೆಂಗಳೂರಿನೊಂದಿಗೆ ಎಲ್ಲರಿಗೂ ಒಂದು ತರಹದ ಭಾವನಾತ್ಮಕ ಸಂಬಂಧವಿದೆ. ಇದನ್ನು ಮನಮುಟ್ಟುವಂತೆ ನಿರ್ದೇಶಕ ಪ್ರದೀಪ್ ಕೆ ಶಾಸ್ತ್ರಿ “ಮೇಡ್ ಇನ್ ಬೆಂಗಳೂರು” ಚಿತ್ರದಲ್ಲಿ ತೋರಿಸಿದ್ದಾರೆ.
ಬಾಲಕೃಷ್ಣ ಅವರು ನಿರ್ಮಿಸಿರುವ ಈ ಚಿತ್ರ ಕಳೆದ ಡಿಸೆಂಬರ್ 30ರಂದು ಬಿಡುಗಡೆಯಾಗಿದೆ. ಚಿತ್ರವನ್ನು ವೀಕ್ಷಿಸಿರುವ ಸಾಮಾನ್ಯ ಜನರು, ಗಣ್ಯರು ಹೀಗೆ ಎಲ್ಲಾ ವರ್ಗದ ಜನರು ಪ್ರಶಂಸೆ ನೀಡುತ್ತಿರುವ ಸಿನಿಮಾವಿದು. ಇನ್ನೂ ಈ ಚಿತ್ರದಲ್ಲಿ ಸ್ಟಾರ್ಟ್ ಅಪ್ ವಿಷಯ ಕೂಡ ಇರುವುದರಿಂದ ಯುವಜನತೆಯನ್ನು ಆಕರ್ಷಿಸುತ್ತಿದೆ. ಕನ್ನಡದಲ್ಲಿ “ಕಾಂತಾರ” ದಂತಹ ಕಂಟೆಂಟ್ ಓರಿಯಂಟೆಡ್ ಚಿತ್ರಗಳು ದಾಖಲೆ ನಿರ್ಮಿಸಿದೆ. “ಮೇಡ್ ಇನ್ ಬೆಂಗಳೂರು” ಉತ್ತಮ ಕಂಟೆಂಟ್ ಹೊಂದಿದ್ದು, ಜನರಿಂದ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಗೆ ಚಿತ್ರತಂಡ ಸಂತೋಷ ವ್ಯಕ್ತಪಡಿಸಿದೆ.
ಇನ್ನೂ ಖುಷಿಯ ವಿಚಾರವೆಂದರೆ ತೆಲುಗು ಹಾಗೂ ಮಲೆಯಾಳಂ ನಿಂದ ಈ ಚಿತ್ರದ ರಿಮೇಕ್ ರೈಟ್ಸ್ ಗೆ ಬೇಡಿಕೆ ಬಂದಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಕುಟುಂಬ ಸಮೇತ ನೋಡಬಹುದಾದ “ಮೇಡ್ ಇನ್ ಬೆಂಗಳೂರು” ಚಿತ್ರದ ಯಶಸ್ಸಿನ ಪಯಣ ಮುಂದುವರೆದಿದೆ.