HomeNewsಸೆಟ್ಟೇರಿತು ಚಿನ್ನಾರಿ ಮುತ್ತನ ಮತ್ತೊಂದು ಹೊಸ ಸಿನಿಮಾ…FIR 6 to 6 ಚಿತ್ರಕ್ಕೆ ಪ್ರಿಯಾಂಕಾ ಉಪೇಂದ್ರ...

ಸೆಟ್ಟೇರಿತು ಚಿನ್ನಾರಿ ಮುತ್ತನ ಮತ್ತೊಂದು ಹೊಸ ಸಿನಿಮಾ…FIR 6 to 6 ಚಿತ್ರಕ್ಕೆ ಪ್ರಿಯಾಂಕಾ ಉಪೇಂದ್ರ ಕ್ಲ್ಯಾಪ್

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಾಯಕ ನಟ ವಿಜಯ್ ರಾಘವೇಂದ್ರ ಮತ್ತೊಮ್ಮೆ ಹೊಸ ತಂಡದ ಜೊತೆ ಕೈ ಜೋಡಿಸಿದ್ದಾರೆ. ಈ ಹಿಂದೆ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ 24/7 ಹಾಗೂ ವಿರಾಮದ ನಂತರ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ರಮಣ್ ರಾಜ್ ಕೆ ಈ ಬಾರಿಗೆ ವಿಜಯ್ ರಾಘವೇಂದ್ರಗೆ ಆಕ್ಷನ್ ಕಟ್ ಹೇಳಿದ್ದಾರೆ. FIR 6 to 6 ಎಂಬ ಕ್ಯಾಚಿ ಟೈಟಲ್ ನಡಿ ಸಿನಿಮಾ ಮೂಡಿ ಬರ್ತಿದ್ದು, ಇವತ್ತು ಬೆಂಗಳೂರಿನ ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಸರಳವಾಗಿ ಸಿನಿಮಾದ ಮುಹೂರ್ತ ನೆರವೇರಿತು. ಉಪ್ಪಿ ಶ್ರೀಮತಿ ಪ್ರಿಯಾಂಕಾ ಉಪೇಂದ್ರ ಸಿನಿಮಾಗೆ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ FIR 6 to 6 ಸಿನಿಮಾದಲ್ಲಿ ವಿಜಯ್ ರಾಘವೇಂದ್ರಗೆ ಜೋಡಿಯಾಗಿ ಅಕ್ಷಿತಾ ಬೋಪಯ್ಯ ನಟಿಸ್ತಿದ್ದು, ಉಳಿದಂತೆ ಯಶ್ ಶೆಟ್ಟಿ, ಬಾಲರಾಜ್ ವಾಡಿ, ಎಸ್ ಕೆ ನಾಗೇಂದ್ರ ಅರಸ್, ಶ್ರೀ ರಾಜು ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.

ಯಶ್ ಫಿಲ್ಮಂ ಪ್ರೊಡಕ್ಷನ್ ಬ್ಯಾನರ್ ನಡಿ ಭಾಗ್ಯ ಆರ್ ಸಿನಿಮಾಗೆ ಬಂಡವಾಳ ಹೂಡಿದ್ದು, ಎಸ್.ಕೆ.ನಾಗೇಂದ್ರ ಅರಸ್ ಸಂಕಲನ, ಸತೀಶ್ ಬಾಬು ಸಂಗೀತ ನಿರ್ದೇಶನ ಹಾಗೂ ಓಂ.ಜಿ ಛಾಯಾಗ್ರಹಣ FIR 6 to 6 ಸಿನಿಮಾಕ್ಕಿದೆ. ವಿಶೇಷವಾಗಿ ಓಂ ಜಿ ಈ ಸಿನಿಮಾಗೆ ಐದು ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಣ ಮಾಡುತ್ತಿದ್ದಾರೆ. ಇಂದಿನಿಂದಲೇ ಶೂಟಿಂಗ್ ಶುರುವಾಗಿದ್ದು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಭರದಿಂದ ಸಾಗ್ತಿದೆ.

Must Read

spot_img
Share via
Copy link
Powered by Social Snap