HomeNewsನೋಡುಗರ ಗಮನ ಸೆಳೆಯುತ್ತಿದೆ "ಡೇವಿಡ್" ಚಿತ್ರದ ಹಾಡು ಹಾಗೂ ಟ್ರೇಲರ್.

ನೋಡುಗರ ಗಮನ ಸೆಳೆಯುತ್ತಿದೆ “ಡೇವಿಡ್” ಚಿತ್ರದ ಹಾಡು ಹಾಗೂ ಟ್ರೇಲರ್.

ಶ್ರೇಯಸ್ ಚಿಂಗಾ ನಾಯಕನಾಗಿ ನಟಿಸಿ, ನಿರ್ದೇಶನವನ್ನು ‌ಮಾಡಿರುವ “ಡೇವಿಡ್” ಚಿತ್ರದ ಹಾಡು ಹಾಗೂ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಸಮಾಜ ಸೇವಕರು ವಾಣಿಜ್ಯೋದ್ಯಮಿ ಹಾಗೂ ಲೇಖಕರು ಆಗಿರುವ ಶ್ರೀ ಧನರಾಜ್ ಬಾಬು ಅವರು ಹಾಡು ಹಾಗೂ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು.

ALL OK ಸಂಗೀತ ನೀಡಿರುವ ಈ ಹಾಡನ್ನು ಸಂಚಿತ್ ಹೆಗಡೆ ಹಾಡಿದ್ದಾರೆ. ರೋಹನ್ ಬರೆದಿದ್ದಾರೆ.

ನಮ್ಮ ಚಿತ್ರದ ಟ್ರೇಲರ್ ಹಾಗೂ ಹಾಡು ಬಿಡುಗಡೆ ಸಮಾರಂಭಕ್ಕೆ ಬಂದಿರುವ ತಮಗೆ ಧನ್ಯವಾದ. “ಡೇವಿಡ್” ಒಂದು ವಿಭಿನ್ನ ಪ್ರಯತ್ನ. ನಾನು ಹಾಗೂ ಭಾರ್ಗವ್ ಯೋಗಾಂಬರ್ ಜಂಟಿಯಾಗಿ ನಿರ್ದೇಶಿಸಿದ್ದೇವೆ. ನಾನು ನಾಯಕನಾಗೂ ನಟಿಸಿದ್ದೇನೆ. ಸಾರಾ ಹರೀಶ್ ಈ ಚಿತ್ರದ ನಾಯಕಿ. ಅವಿನಾಶ್, ಪ್ರತಾಪ್ ನಾರಾಯಣ್, ರಾಕೇಶ್ ಅಡಿಗ, ಕವ್ಯ ಶಾ, ಬುಲೆಟ್ ಪ್ರಕಾಶ್, ಎಸ್ ಐ.ಡಿ ಮುಂತಾದವರು ಈ ಚಿತ್ರದ ತಾರಬಳಗದಲ್ಲಿದ್ದಾರೆ. ಈ ಚಿತ್ರ 4 ಕಥೆಗಳ ಸುತ್ತ ಸುತ್ತುತ್ತದೆ ನಾಯಕನು ತನ್ನ ಸಾಮರ್ಥ್ಯಕ್ಕೆ ಮೀರಿದ ಶಕ್ತಿಗಳ ವಿರುದ್ಧ ಬಲವಂತವಾಗಿ ತೊಡಗಿಸಿಕೊಳ್ಳುತ್ತಾನೆ. ಇದೇ ಚಿತ್ರದ ಕಥಾಹಂದರ. ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಿದ್ದೇವೆ. ಆಗಸ್ಟ್ ನಲ್ಲಿ ನಮ್ಮ ಚಿತ್ರವನ್ನು ತೆರೆಗೆ ತರುತ್ತೇವೆ. ನಮ್ಮ ಚಿತ್ರದ ಮತ್ತೊಂದು ವಿಶೇಷವೆಂದರೆ ಅಂತರರಾಷ್ಟ್ರೀಯ ವಿತರಕರನ್ನು ಹೊಂದಿರುವ ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಮ್ಮ ಚಿತ್ರ ಪ್ರದರ್ಶನಗೊಂಡಿದೆ‌. ಕೇನ್ಸ್ ನಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಚಿತ್ರ ಇದಾಗಿದೆ . ಸಾಕಷ್ಟು ಸ್ನೇಹಿತರು ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ‌. ಧನರಾಜ್ ಬಾಬು ಅವರು ಈ ಚಿತ್ರವನ್ನು ಅರ್ಪಿಸುವ ಮೂಲಕ ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ‌ ಎಂದು ನಾಯಕ ಹಾಗೂ ನಿರ್ದೇಶಕ ಶ್ರೇಯಸ್ ಚಿಂಗಾ “ಡೇವಿಡ್” ಚಿತ್ರದ ಬಗ್ಗೆ ವಿವರಣೆ ನೀಡಿದರು.

ಅರ್ಜುನ್ ನಿಟ್ಟೂರ್ ಅವರು ಮುಖ್ಯ ನ್ಯಾಯಾಧೀಶರೂ ರಾಜ್ಯ ಪಾಲರೂ ಆಗಿದ್ದ ಜಸ್ಟಿಸ್ ನಿಟ್ಟೂರು ಶ್ರೀನಿವಾಸ ರಾವ್ ಅವರ ಮೊಮ್ಮಗ. ನಮ್ಮ ದೇಶದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಪ್ರಚಾರ ಮಾಡುವ ಕೆಲವೇ ಸಂಸ್ಥೆಗಳಲ್ಲಿ ಅರ್ಜುನ್ ನಿಟ್ಟೂರ್ ಅವರ ಬಸ್ಲ್ಪೋಡ್ ಕಂಪೆನಿಯು ಒಂದು. ಅರ್ಜುನ್ ನಿಟ್ಟೂರ್ ಅವರು ಫಿಲ್ಮ್ ಟೆಕ್ನಾಲಜಿ ಆಂತ್ರಪ್ರನರ್ ಆಗಿ ಇದುವರೆಗೂ ಬೇರೆ ಬೇರೆ ಭಾಷೆಗಳ ಹಲವಾರು ಚಿತ್ರಗಳನ್ನು ನೂತನ ಟೆಕ್ನಾಲಜಿ ಉಪಯೋಗಿಸಿಕೊಂಡು ಪ್ರಚಾರ ಮಾಡಿದ್ದಾರೆ .ಡೇವಿಡ್ ಸಿನಿಮಾ ಟ್ರೇಲರ್ ಅರ್ಜುನ್ ನಿಟ್ಟೂರ್ ಅವರ ನೇತೃತ್ವದಲ್ಲಿ ತಯಾರು ಮಾಡಲಾಗಿದೆ.ಅರ್ಜುನ್ ತಮ್ಮ ಸಂಸ್ಥೆಯ ಮೂಲಕ ಈ ಚಿತ್ರವನ್ನು ದೇಶ, ವಿದೇಶಗಳಿಗೆ ಪ್ರಮೋಟ್ ಮಾಡಲಿದ್ದಾರೆ.

“ಡೇವಿಡ್” ಚಿತ್ರದ ಟ್ರೇಲರ್ ಗೆ ಇಸ್ರೇಲ್ ನ ಖ್ಯಾತ ಸಂಗೀತ ನಿರ್ದೇಶಕ ಸಂಗೀತ ನೀಡಿರುವುದು ಹಾಗೂ ಚೆನ್ನೈ ನಲ್ಲಿ ಸೌಂಡಿಂಗ್ ಮಾಡಿಸಲಾಗಿದೆ ಎಂದು ಅರ್ಜುನ್ ತಿಳಿಸಿದರು.

ಇದೇ ಸಂದರ್ಭದಲ್ಲಿ ಧನರಾಜ್ ಬಾಬು ಅವರ ನಿರ್ಮಾಣದಲ್ಲಿ ಶ್ರೇಯಸ್ಸ್ ಚಿಂಗಾ ನಾಯಕರಾಗಿ ನಟಿಸುತ್ತಿರುವ “ಪ್ರೊಡಕ್ಷನ್ ನಂ ೨” ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಯಿತು.

Must Read

spot_img
Share via
Copy link
Powered by Social Snap