Kannada Beatz
Celebrities

ಅರ್ಜುನ್ ಸರ್ಜಾ ಅಭಿನಯದ “ಒಪ್ಪಂದ” ಈ ವಾರ ಬಿಡುಗಡೆ

ಖ್ಯಾತ ನಟ ಅರ್ಜುನ್ ಸರ್ಜಾ ಅಭಿನಯದ “ಒಪ್ಪಂದ” ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ರಾಧಿಕಾ ಕುಮಾರಸ್ವಾಮಿ, ಜೆ.ಡಿ.ಚಕ್ರವರ್ತಿ, ಫೈನಲ್ ಖಾನ್, ಸಮೀರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಸಂಜಯ್ ಗೊಡಾವತ್ ಅರ್ಪಿಸುವ
ಎಸ್ ಎಫ್ ಎಂಟರ್ ಟೈನರ್ ಲಾಂಛನದಲ್ಲಿ ಫರ್ಹಿನ್ ಅವರು ನಿರ್ಮಿಸಿರುವ ಈ ಚಿತ್ರವನ್ನು ಎಸ್ ಎಸ್ ಸಮೀರ್ ನಿರ್ದೇಶಿಸಿದ್ದಾರೆ.

ಬಾಹರ್ ಫಿಲಂಸ್ ಮೂಲಕ ವಿತರಕ ಭಾಷಾ ಅವರು ಈ ಚಿತ್ರವನ್ನು ರಾಜ್ಯಾದ್ಯಂತ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

ಸುಭಾಶ್ ಆನಂದ್ ಅವರ ಸುಮಧುರ ಸಂಗೀತ, ಅಮೀರ್ ಲಾಲ್ ಛಾಯಾಗ್ರಹಣ, ಪ್ರಭು ಸಂಕಲನ, ರಘು ಕುಲಕರ್ಣಿ ಕಲಾ ನಿರ್ದೇಶನ, ಅಮ್ಮ ರಾಜಶೇಖರ್ ನೃತ್ಯ ನಿರ್ದೇಶನ ಹಾಗೂ ಕಿಕಾಸ್ ಕಾಳಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Related posts

‘ಇಂದಿರಾ’ ಮೊದಲ ಹಾಡು ರಿಲೀಸ್… ಪ್ರೇಕ್ಷಕರ ಗಮನ ಸೆಳೆಯುತ್ತಿದೆ ‘ಸ್ಟೆಪ್ಸ್ ಟು ಡೆಸ್ಟಿನಿ’ ಟ್ರ್ಯಾಕ್

Kannada Beatz

ಇದು ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರ

Kannada Beatz

ಫ್ಯಾಮಿಲಿ ಪ್ಯಾಕ್ ಚಿತ್ರ ನಿರ್ದೇಶಕ ಅರ್ಜುನ್ ಕುಮಾರ್​ಗೆ ಮೆಚ್ಚುಗೆಯ ಮಹಾಪೂರ

Kannada Beatz

Leave a Comment

Share via
Copy link
Powered by Social Snap