ಬಿಗ್ ಬಾಸ್ ಕನ್ನಡದ ಜನಪ್ರಿಯ ರಿಯಾಲಿಟಿ ಶೋ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ವೀಕ್ಷಿಸುವ ನೆಚ್ಚಿನ ಕಾರ್ಯಕ್ರಮ ಇದಾಗಿದ್ದು ಜನರಿಗೆ ಮನರಂಜನೆ ನೀಡುವುದರಲ್ಲಿ ಎತ್ತಿದ ಕೈ. ಇನ್ನು ಈ ಬಿಗ್ ಬಾಸ್ ವೀಕ್ಷಕರಿಗೆ ಮನರಂಜನೆಯನ್ನು ನೀಡಿದರೆ ಸ್ಪರ್ಧಿಗಳಿಗೆ ಹೊಸದೊಂದು ಜೀವನ ಮತ್ತು ಹೆಸರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ವಿವಿಧ ಅವಕಾಶಗಳನ್ನು ಕಲ್ಪಿಸಿಕೊಡುವ ವೇದಿಕೆ ಆಗಿದೆ.
ಇನ್ನು ಈ ಬಿಗ್ ಬಾಸ್ ನಲ್ಲಿ ಭಾಗವಹಿಸುವ ಸ್ಪರ್ಧಿಗಳು ಬಿಗ್ ಬಾಸ್ ಕಾರ್ಯಕ್ರಮದಿಂದ ಎಲಿಮಿನೇಟ್ ಆದ ನಂತರ ಅವರು ಇದ್ದ ಅಷ್ಟು ದಿನಗಳಿಗೆ ವಾರಕ್ಕೆ 60 ಸಾವಿರದಂತೆ ಸಂಭಾವನೆಯನ್ನು ನೀಡಲಾಗುತ್ತದೆ.
ಹಾಗೆಯೇ ಈ ವಾರ ಬಿಗ್ ಬಾಸ್ ಮನೆಯಿಂದ ಅಕ್ಷತಾ ಪಾಂಡವಪುರ ಅವರು ಹೊರಬಂದಿದ್ದು ಅವರಿಗೆ ಸುಮಾರು 7.20 ಲಕ್ಷ ರೂಪಾಯಿಗಳು ಸಂಭಾವನೆಯಾಗಿ ಸಿಕ್ಕಿದೆ ಎಂದು ಮೂಲಗಳು ಹೇಳುತ್ತಿವೆ.