HomeNewsಪ್ರಮೋದ್ ಈಗ 'ಬಾಂಡ್ ರವಿ'….ಯುಗಾದಿ ಹಬ್ಬಕ್ಕೆ 'ಬಾಂಡ್ ರವಿ' ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್

ಪ್ರಮೋದ್ ಈಗ ‘ಬಾಂಡ್ ರವಿ’….ಯುಗಾದಿ ಹಬ್ಬಕ್ಕೆ ‘ಬಾಂಡ್ ರವಿ’ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್

ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಭರವಸೆ ನಿರ್ದೇಶಕರು ಪಾದಾರ್ಪಣೆ ಮಾಡಿದ್ದಾರೆ. ನಿರ್ದೇಶಕರಾದ ಎಸ್ ಮಹೇಂದ್ರರ್, ಪ್ರಶಾಂತ್ ರಾಜ್ ಹಾಗೂ‌ ಕಾಂತಾ ಕನ್ನಹಳ್ಳಿ ಜೊತೆ ಅಸಿಸ್ಟೆಂಟ್,ಅಸೋಸಿಯೇಟ್, ಕೋ ಡೈರೆಕ್ಟರ್ ಆಗಿ ಕಳೆದ ಹನ್ನೊಂದು ವರ್ಷಗಳಿಂದ ನಿರ್ದೇಶನದ ಅನುಭವ ಅರಿತಿರುವ ಹಿರಿಯೂರು ಮೂಲದ ಪ್ರಜ್ವಲ್ ಎಸ್ ಪಿ ಬಾಂಡ್ ರವಿ ಎಂಬ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶನದ ಅಖಾಡಕ್ಕೆ‌ ಇಳಿದಿದ್ದಾರೆ.

ಟೈಟಲ್ ಫಸ್ಟ್ ಲುಕ್ ರಿಲೀಸ್

ಯುಗಾದಿ ಹಬ್ಬಕ್ಕೆ ಪ್ರಯುಕ್ತ ಪ್ರಜ್ವಲ್ ಎಸ್ ಪಿ ನಿರ್ದೇಶನದ ಬಾಂಡ್ ರವಿ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಿದೆ. ಪ್ರತಿಭಾನ್ವಿತ ನಾಯಕ ನಟ ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ನಾಯಕನಾಗಿ ಮಿಂಚಿದ್ದಾರೆ. ಹಣೆಯಲ್ಲಿ ರಕ್ತ, ಕೈಯಲ್ಲಿ ಬೇಡಿ ತೊಟ್ಟು ಖಡಕ್ ಲುಕ್ ನಲ್ಲಿ ಪ್ರಮೋದ್ ಮಿಂಚಿದ್ದಾರೆ.

ಅಂದಹಾಗೇ ಬಾಂಡ್ ರವಿ ಕಮರ್ಷಿಯಲ್ ಎಮೋಷನಲ್ ಥ್ರಿಲ್ಲರ್ ಜಾನರ್ ಸಿನಿಮಾವಾಗಿದ್ದು, ಲೈಫ್ ಲೈನ್ ಫಿಲ್ಮಸ್ ಬ್ಯಾನರ್ ನಡಿ ನರಸಿಂಹಮೂರ್ತಿ ಬಂಡವಾಳ ಹೂಡ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಕೊಂಡಿದ್ದಾರೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸ್ತಿದ್ದು, ಕೆಎಸ್ ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನಿಲ್&ದೇವರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ ಸಿನಿಮಾಕ್ಕಿದೆ ಜಯಂತ್ ಕಾಯ್ಕಿಣಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ

Must Read

spot_img
Share via
Copy link
Powered by Social Snap