ಚಂದನವನದ ಲವಲವಿಕೆ ಹೀರೋ ಅನೀಶ್ ತೇಜ್ವರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅನೀಶ್ ಜನುಮದಿನದ ಪ್ರಯುಕ್ತ ಅವರು ನಟಿಸಿ, ನಿರ್ಮಾಣ ಮಾಡಿರುವ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಿದೆ.
ಅನೀಶ್ ಹತ್ತನೇ ಸಿನಿಮಾ ‘ಬೆಂಕಿ’

ನಮ್ ಏರಿಯಾಲಿ ಒಂದಿನ, ಪೊಲೀಸ್ ಕ್ವಾಟ್ರಸ್, ಅಕಿರ, ವಾಸು ನನ್ ಪಕ್ಕ ಕಮರ್ಷಿಯಲ್, ರಾಮಾರ್ಜುನ ಹೀಗೆ ಪ್ರತಿ ಸಿನಿಮಾದಲ್ಲೂ ವಿಭಿನ್ನ ಕಥಾಹಂದರದ ಮೂಲಕ ಗಮನಸೆಳೆದಿರುವ ಅನೀಶ್ ಈಗ, ಬೆಂಕಿ ಸಿನಿಮಾ ಮೂಲಕ ಪ್ರತ್ಯಕ್ಷರಾಗಿದೆ. ಗಡ್ಡ ಮೀಸೆ ಬಿಟ್ಟು ಖಡಕ್ ಲುಕ್ ನಲ್ಲಿ ಅನೀಶ್ ಮಿಂಚಿದ್ದಾರೆ. ಬೆಂಕಿ ಎಂಬ ಕ್ಯಾಚಿ ಟೈಟಲ್ ಇಟ್ಟು.. ಬೆಂಕಿಯಂತಹ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎ.ಆರ್. ಬಾಬು ಅವರ ಪುತ್ರ, ಶಾನ್ ಎಂಬವರು ಬೆಂಕಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾ. ಈಗಾಗಲೇ ಸಿನಿಮಾದ ಶೇ. 80ರಷ್ಟು ಶೂಟಿಂಗ್ ಕಂಪ್ಲೀಟ್ ಆಗಿದ್ದು, ಹಾಡು ಮತ್ತು ಒಂದಷ್ಟು ಟಾಕಿ ಭಾಗದ ಶೂಟಿಂಗ್ ಮಾತ್ರ ಬಾಕಿ ಇದೆ.

ಅನೀಶ್ ಗೆ ಜೋಡಿಯಾಗಿ ರೈಡರ್ ಸಿನಿಮಾ ಖ್ಯಾತಿಯ ಸಂಪದ ನಟಿಸಿದ್ದು, ಶೃತಿ ಪಾಟೀಲ್, ಅಚ್ಯುತ್ ಕುಮಾರ್, ಸಂಪತ್, ಉಗ್ರಂ ಮಂಜು, ಹರಿಣಿ ಸೇರಿದಂತೆ ಅನುಭವಿ ಕಲಾ ಬಳಗ ಸಿನಿಮಾದಲ್ಲಿದ್ದೂ, ಕೌಶಿಕ್ ಹರ್ಷ ಸಂಗೀತ ಸಂಯೋಜನೆ, ವೀನಸ್ ನಾಗರಾಜ್ ಮೂರ್ತಿ ಕ್ಯಾಮೆರಾ ವರ್ಕ್ ಸಿನಿಮಾದಲ್ಲಿದೆ.
ಅಣ್ಣ ತಂಗಿ ಸೆಂಟಿಮೆಂಟ್ ಕಥೆ ಜೊತೆಗೆ ಹಳ್ಳಿ ಸೊಡಗಿನ ಕಂಪು ಚೆಲ್ಲುವ ಬೆಂಕಿ ಸಿನಿಮಾದ ಫಸ್ಟ್ ಲುಕ್ ಮಾಸ್ ಲುಕ್ ನಲ್ಲಿ ಮೂಡಿ ಬಂದಿದ್ದು, ಅನೀಶ್ ಸಿನಿಮಾ ಬದುಕಿನ ಹತ್ತನೇ ಸಿನಿಮಾವಾಗಿರುವ ಬೆಂಕಿ ಚಿತ್ರಕ್ಕೆ ಅನೀಶ್ ತಮ್ಮದೇ ವಿಂಕ್ ವಿಷಲ್ ಪ್ರೊಡಕ್ಷನ್ ನಡಿ ಬಂಡವಾಳ ಹೂಡಿದ್ದಾರೆ.

- ಸಸ್ಪೆನ್ಸ್ ಥ್ರಿಲ್ಲರ್ “ಹತ್ಯ” ತೆರೆಗೆ ಬರಲು ಸಿದ್ದ …
- ಯುವ ಪ್ರತಿಭೆ ರೋಹಿತ್ ಕಣ್ಣಲೀಗ ಸಿನಿಮಾ ಕನಸು.. ‘ರಕ್ತಾಕ್ಷ’ ಸಿನಿಮಾ ಮೂಲಕ ಹೀರೋ ಆದ ಮಾಡೆಲಿಂಗ್ ಸ್ಟಾರ್
- ವೆಬ್ ಸಿರೀಸ್ ಲೋಕಕ್ಕೆ ವಿಕ್ರಮ್ ರವಿಚಂದ್ರನ್ ಹಾಗೂ ಅದಿತಿ ಪ್ರಭುದೇವ ಎಂಟ್ರಿ… ಇಂದಿನಿಂದ ಜಿಯೋ ಸಿನಿಮಾದಲ್ಲಿ ‘ಲವ್ ಯೂ ಅಭಿ’
- ಪವಿತ್ರಾ ಲೋಕೇಶ್-ನರೇಶ್ ಪ್ರೇಮ್ ಕಹಾನಿ ಶುರುವಾಗಿದ್ದೇಗೆ…? ’ಮತ್ತೆ ಮದುವೆ’ ಟ್ರೇಲರ್ ರಿಲೀಸ್.
- “ಕೊರಗಜ್ಜ” ಚಿತ್ರ ದಲ್ಲಿ ಬರುವ “ಗುಳಿಗ”ದೈವಕ್ಕೆ ನಿರ್ದೇಶಕರಿಂದ ಕ್ಷೇತ್ರ ನಿರ್ಮಾಣ, ಅದ್ದೂರಿಯ ಕೋಲ ಸೇವೆ
- ಡೇರ್ ಡೆವಿಲ್ ಮುಸ್ತಫಾ’ ರಿಲೀಸ್ ಗೆ ಡೇಟ್ ಫಿಕ್ಸ್….ಡಾಲಿ ಸಾಥ್ ಕೊಟ್ಟಿರುವ ಸಿನಿಮಾ ಮೇ 19ಕ್ಕೆ ರಿಲೀಸ್
- ಕ್ರೇಜಿಸ್ಟಾರ್ ಸುಪುತ್ರನ ಎರಡನೇ ಕನಸಿಗೆ ಶೀರ್ಷಿಕೆ ಫಿಕ್ಸ್..’ಮುಧೋಳ್’ ಜೊತೆ ಬಂದ ವಿಕ್ರಮ್ ರವಿಚಂದ್ರನ್..
ವಿಕ್ರಮ್ ರವಿಚಂದ್ರನ್ ಎರಡನೇ ಸಿನಿಮಾಗೆ ‘ಮುಧೋಳ್’ ಶೀರ್ಷಿಕೆ ಫಿಕ್ಸ್..ಗ್ಯಾಂಗ್ ಸ್ಟರ್ ಅವತಾರದಲ್ಲಿ ಕ್ರೇಜಿಸ್ಟಾರ್ ಪುತ್ರ - ’ರಾಘು’ ಟ್ರೇಲರ್ ರಿಲೀಸ್…ಸೋಲೋ ಆಕ್ಟರ್ ಆಗಿ ಬಂದ ಚಿನ್ನಾರಿ ಮುತ್ತನಿಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಸಾಥ್
- ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ’ಯೂಟರ್ನ್’ ಬೆಡಗಿ…ವೆಂಕಟೇಶ್ ದಗ್ಗುಭಾಟಿ ನಟನೆಯ ‘ಸೈಂಧವ್’ಗೆ ಶ್ರದ್ದಾ ಶ್ರೀನಾಥ್ ನಾಯಕಿ
- ಹೊರಬಿತ್ತು ಬಹುನಿರೀಕ್ಷಿತ, ಸಿನಿಮಾ ಅಭಿಮಾನಿಗಳು ಸೇರಿ ಆಡುವಂತಹ, ‘ಫ್ಯಾನ್ಸ್ ಕ್ರಿಕೆಟ್ ಲೀಗ್’ ಈ ಸಾಲಿನ ದಿನಾಂಕಗಳು
