Kannada Beatz
News

ಸೂಪರ್ ಸ್ಟಾರ್ ವಿದ್ಯಾಳಾಗಿ ‘ವಿದ್ಯಾಪತಿ’ ಬ್ಯೂಟಿ ಮಲೈಕಾ ಎಂಟ್ರಿ

‘ವಿದ್ಯಾಪತಿ’ಗೆ ಜೋಡಿ ಸೂಪರ್ ಸ್ಟಾರ್ ವಿದ್ಯಾ…ಮಲೈಕಾ ವಸೂಪಲ್ ಬರ್ತಡೇಗೆ ಫಸ್ಟ್ ಗ್ಲಿಂಪ್ಸ್ ರಿಲೀಸ್

ಮಲೈಕಾ ಬರ್ತಡೇಗೆ ‘ವಿದ್ಯಾಪತಿ’ ಫಸ್ಟ್ ಝಲಕ್ ರಿಲೀಸ್…ಸೂಪರ್ ಸ್ಟಾರ್ ವಿದ್ಯಾ ನಾಗಭೂಷಣ್ ಗೆ ಜೋಡಿ

‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಎಡವಟ್ಟು ರಾಣಿ ಲೀಲಾ ಆಗಿ ನಟಿಸಿ ಸೈ ಎನಿಸಿಕೊಂಡ ಬೆಡಗಿ ಮಲೈಕಾ ವಸುಪಾಲ್ ಉಪಾಧ್ಯಕ್ಷ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಬಲಗಾಲಿಟ್ಟಿದ್ದು ಗೊತ್ತೇ ಇದೆ. ಚಿಕ್ಕಣ್ಣನಿಗೆ ಜೋಡಿಯಾಗಿ ಮಿಂಚಿದ್ದ ಬ್ಯೂಟಿ ಈಗ ವಿದ್ಯಾಪತಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇಂದು ಮಲೈಕಾ ವಸುಪಾಲ್ ಜನ್ಮದಿನ. ಅವರ ಹುಟ್ಟುಹಬ್ಬದ ವಿಶೇಷವಾಗಿ ವಿದ್ಯಾಪತಿ ಬಳಗದಿಂದ ಸ್ಪೆಷಲ್ ಗಿಫ್ಟ್ ಸಿಕ್ಕಿದೆ.

ವಿದ್ಯಾಪತಿ ಸಿನಿಮಾದಲ್ಲಿ ಮಲೈಕಾ ಅವರ ಮೊದಲ ಝಲಕ್ ಅನಾವರಣ ಮಾಡಲಾಗಿದೆ. ಸಿನಿಮಾದಲ್ಲಿನ ಸಿನಿಮಾ ನಾಯಕಿಯಾಗಿ ಮಲೈಕಾ ಅಭಿನಯಿಸುತ್ತಿದ್ದಾರೆ. ಅಂದರೆ ಸೂಪರ್ ಸ್ಟಾರ್ ವಿದ್ಯಾ ಪಾತ್ರದಲ್ಲಿ ಉಪಾಧ್ಯಕ್ಷ ಸುಂದರಿ ಬಣ್ಣ ಹಚ್ಚಿದ್ದಾರೆ. ಕರಾಟೆ ಗೆಟಪ್ ತೊಟ್ಟಿರುವ ನಾಯಕ ನಾಗಭೂಷಣ್ ಗೆ ಮಲೈಕಾ ವಸುಪಾಲ್ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ. ನಾಗಭೂಷಣ್ ಎದುರು ಗರುಡ ರಾಮ್ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಕರಾಟೆ ಮಾಸ್ಟರ್ ಅವತಾರದಲ್ಲಿ ರಂಗಾಯಣ ರಘು ನಟಿಸುತ್ತಿರುವುದು ಚಿತ್ರದ ಮತ್ತೊಂದು ವಿಶೇಷ.

ಆಕ್ಷನ್, ಕಾಮಿಡಿ ಕತೆ ಹೊಂದಿರುವ ಈ ಚಿತ್ರವನ್ನು ಇಶಾಂ ಹಾಗೂ ಹಸೀಂ ಖಾನ್ ನಿರ್ದೇಶನ ಮಾಡುತ್ತಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಕೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆಕ್ಷನ್ ಚಿತ್ರಕ್ಕಿದೆ. ಡಾಲಿ ಪಿಕ್ಚರ್ಸ್ ಅವರ ಬಹುನಿರೀಕ್ಷಿತ ಸಿನಿಮಾವಾಗಿರುವ ವಿದ್ಯಾಪತಿ ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರಲಿದೆ.

Related posts

ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ARM’ ಸಿನಿಮಾ

Kannada Beatz

“ತುರ್ತು ನಿರ್ಗಮನ” ಚಿತ್ರದಿಂದ ಮತ್ತೆ ಎಂಟ್ರಿ “ಸುನಿಲ್ ರಾವ್”

Kannada Beatz

ರಣ ಚಿತ್ರದ ಟ್ರೈಲರ್ ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.🔥🔥

Kannada Beatz

Leave a Comment

Share via
Copy link
Powered by Social Snap