Kannada Beatz
News

‘ದೂರದರ್ಶನ’ ನಿರ್ದೇಶಕರ ಹೊಸ ಸಾಹಸ…’ಪೀಟರ್’ಗೆ ಸಾಥ್ ಕೊಟ್ಟ ವಿಜಯ್ ಸೇತುಪತಿ-ಡಾಲಿ ಧನಂಜಯ್

‘ಪೀಟರ್’ ಜೊತೆ ಬಂದ ಸುಕೇಶ್ ಶೆಟ್ಟಿ…ದೂರದರ್ಶನ ನಿರ್ದೇಶಕರ ಹೊಸ ಚಿತ್ರಕ್ಕೆ ಡಾಲಿ-ವಿಜಯ್ ಸೇತುಪತಿ ಸಾಥ್

ದೂರದರ್ಶನ ಸಿನಿಮಾ ಮೂಲಕ ಗಟ್ಟಿ ಕಥೆ ಹೇಳಿದ್ದ ನಿರ್ದೇಶಕ ಸುಕೇಶ್ ಶೆಟ್ಟಿ ಎರಡನೇ ಪ್ರಯತ್ನಗೆ ಸಜ್ಜಾಗಿದ್ದಾರೆ. ಈ ಬಾರಿ ಮತ್ತೊಂದು ಫ್ರೆಶ್ ಕಥಾಹಂದರವನ್ನು ಪ್ರೇಕ್ಷಕರಿಗೆ ಹರವಿಡಲು ಹೊರಟಿದ್ದಾರೆ. ಅದರ ಮೊದಲ ಭಾಗವೆಂಬಂತೆ ಚಿತ್ರದ ಟೈಟಲ್ ರಿವೀಲ್ ಮಾಡಲಾಗಿದೆ. ಭಾರತೀಯ ಚಿತ್ರರಂಗದ ದಿಗ್ಗಜ ನಟರಿಬ್ಬರು ಸುಕೇಶ್ ಹೊಸ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದಾರೆ.

ಸುಕೇಶ್ ಶೆಟ್ಟಿ ‘ಪೀಟರ್’ ಎಂಬ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಪೀಟರ್ ಟೈಟಲ್ ನ್ನು ಕನ್ನಡ ಚಿತ್ರರಂಗದ ನಟರಾಕ್ಷಸ ಡಾಲಿ ಧನಂಜಯ್ ಹಾಗೂ ತಮಿಳಿನ ಸೂಪರ್ ಸ್ಟಾರ್ ವಿಜಯ್ ಸೇತುಪತಿ ರಿಲೀಸ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಪೀಟರ್ ಟೈಟಲ್ ಪೋಸ್ಟರ್ ಬಹಳ ಆಕರ್ಷಕವಾಗಿದೆ. ರಾಯಲ್ ಚಂಡೆ ಹುಡುಗರು , ಜೆಸ್ಸಿ ವಾಪಸ್ ಬಂದಿದ್ದಾಳೆ ಎಂಬ ಬರಹಗಳ ಜೊತೆಯಲ್ಲಿ ಯಮಹ ಬೈಕ್ , ಹಳೆಯ ಕಬ್ಬಿಣದ ಚೇರ್ ಪೋಸ್ಟರ್ ನಲ್ಲಿ ಹೈಲೆಟ್ಸ್.

‘ಪೀಟರ್’ ಸಿನಿಮಾ ಸೆನ್ಸಿಟಿವ್ ಕ್ರೈಮ್ ಡ್ರಾಮಾ ಕಂಟೆಂಟ್ ಹೊಂದಿದ್ದು, ಅದರಲ್ಲಿಯೂ ಮುಖ್ಯವಾಗಿ ಚೆಂಡೆ ಮೇಳದ ಕಥಾವಸ್ತುವನ್ನು ಚಿತ್ರ ಒಳಗೊಂಡಿದೆ. ಕೇರಳದಲ್ಲಿ 300 ವರ್ಷಗಳಿಗೂ ಅಧಿಕ ಕಾಲದ ಇತಿಹಾಸ ಹೊಂದಿರುವ ಚೆಂಡೆ ಮೇಳವನ್ನು ಪೀಟರ್ ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತಿದೆ. . ಯಕ್ಷಗಾನ, ಭೂತಕೋಲ, ದೇವರ ನರ್ತನದಲ್ಲಿ ಬಳಸುವ ಜಾನಪದೀಯ ವಾದ್ಯವಾಗಿರುವ ಚೆಂಡೆ ಮೇಳನ್ನು ಥಿಯೇಟರ್ ನಲ್ಲಿ ಎಕ್ಸ್ ಪಿರಿಯನ್ಸ್ ಮಾಡುವುದೇ ಚೆಂದ. ಅದನ್ನು ಪೀಟರ್ ಸಿನಿಮಾದಲ್ಲಿ ನಿರ್ದೇಶಕ ಸುಕೇಶ್ ಹೇಗೆ ಅಳವಡಿಸಲಿದ್ದಾರೆ ಎಂಬ ಕುತೂಹಲವಿದೆ.

ಚಿತ್ರದಲ್ಲಿ ರಾಜೇಶ್ ಧ್ರುವ, ರವೀಕ್ಷಾ ಶೆಟ್ಟಿ, ಜಾಹ್ನವಿ ರಾಯಲ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ ತಾರಾಬಳಗದಲ್ಲಿದ್ದಾರೆ. ಸದ್ದಿಲ್ಲದೇ ಚಿತ್ರತಂಡ ಈಗಾಗಲೇ 29 ದಿನಗಳ ಶೂಟಿಂಗ್ ಮುಗಿಸಿದೆ‌. ಮಡಿಕೇರಿಯ ಭಾಗಮಂಡಲದ ಸುಂದರ ಜಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅದ್ಧೂರಿ ಸೆಟ್ ಹಾಕಿ‌ ಮಳೆಗಾಲದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಮುಂದಿನ ಉಳಿದ ಚಿತ್ರೀಕರಣಕ್ಕೆ ನಾಯಕ ಮತ್ತು ಇನ್ನೆರಡು ಪಾತ್ರಧಾರಿಗಳು ದೇಹದ ತೂಕ ಕಡಿಮೆ ಮಾಡಿಕೊಳ್ಳೋ ತಯಾರಿಯಲ್ಲಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ಸೌಂಡ್ ಇಂಜಿನಿಯರ್ ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ವೃದ್ಧಿ ಸ್ಟುಡಿಯೊಸ್ ಬ್ಯಾನರ್ ನಡಿ ಪೀಟರ್ ಸಿನಿಮಾ ನಿರ್ಮಿಸಿದ್ದಾರೆ. ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ನವೀನ್ ಶೆಟ್ಟಿ ಸಂಕಲನ, ದೇವರಾಜ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಲವ್, ಆಕ್ಷನ್, ಎಮೋಷನ್, ಸೆಂಟಿಮೆಂಟ್ ಎಲ್ಲರದ‌ ಮಿಶ್ರಣ ಪೀಟರ್ ಸಿನಿಮಾದ ಮಗದಷ್ಟು ಅಪ್ ಡೇಟ್ ನ್ನು ಚಿತ್ರತಂಡ‌ ಶೀಘ್ರದಲ್ಲೇ ನೀಡಲಿದೆ.

Related posts

ಸೆಟ್ಟೇರಿತು ಪವನ್ ಒಡೆಯರ್ ಹಿಂದಿ ಸಿನಿಮಾ- ಚಿತ್ರಕ್ಕೆ ‘ನೋಟರಿ’ ಟೈಟಲ್

Kannada Beatz

ಜೇಮ್ಸ್’ ಜತೆ ‘ಬೈರಾಗಿ’ ಟೀಸರ್

Kannada Beatz

‘ಖಾಸಗಿ ಪುಟ’ದಲ್ಲಿ ಅನಾವರಣವಾಯ್ತು ಮನಮುಟ್ಟುವ ಪ್ರೇಮಕಥೆ…ಹೊಸಬರ ಹೊಸ ಪ್ರಯತ್ನದ ‘ಖಾಸಗಿ ಪುಟಗಳು’ ಫಸ್ಟ್ ಲುಕ್ ರಿಲೀಸ್!

administrator

Leave a Comment

Share via
Copy link
Powered by Social Snap