ಸ್ಯಾಂಡಲ್ ವುಡ್ ಗೆ ಅನೇಕ ನಟಿಯರು ಎಂಟ್ರಿ ಕೊಡುತ್ತಿರುತ್ತಾರೆ. ಆದರೆ ಕೆಲವರು ಮಾತ್ರ ಗಟ್ಟಿಯಾಗಿ ಬೇರೂರುತ್ತಾರೆ ಮತ್ತು ಸ್ಟಾರ್ ಆಗಿ ಮೆರೆಯುತ್ತಾರೆ. ಇನ್ನು ಕೆಲವರು ಒಂದೆರಡು ಸಿನಿಮಾ ಮಾಡಿ ಮಾಯಾಗುತ್ತಾರೆ. ಇದೀಗ’ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
ಗೌರಿಶಂಕರ್ ನಟನೆಯ ರಾಜ್ ಗುರು ನಿರ್ದೇಶನದ ‘ಕೆರೆ ಬೇಟೆ’ ಸಿನಿಮಾ ಮೂಲಕ ನಾಯಕಿಯಾಗಿ ಬಿಂದು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಮತ್ತು ಮೋಶನ್ ಪೋಸ್ಟರ್ ಮೂಲಕ ಬಾರಿ ಸದ್ದು ಮಾಡಿರುವ ‘ಕೆರೆ ಬೇಟೆ’ ಸಿನಿಮಾ ರಿಲೀಸ್ ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಈ ನಡುವೆ ನಾಯಕಿ ಬಿಂದು ಅವರ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ ಸಿನಿಮಾತಂಡ.
ಅಂದಹಾಗೆ ಬಿಂದುಗೆ ಇದು ಮೊದಲ ಸಿನಿಮಾ. ಕನ್ನಡದವರೇ ಆಗಿರುವ ಬಿಂದು ಈ ಸಿನಿಮಾ ಮೂಲಕ ಹಳ್ಳಿ ಹುಡುಗಿಯಾಗಿ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಮೊದಲ ಸಿನಿಮಾದಲ್ಲೆ ವಿಭಿನ್ನ ಪಾತ್ರದಲ್ಲಿ ನಟಿಸುವ ಅವಕಾಶ ಪಡೆದಿರುವ ಬಿಂದು ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಎಕ್ಸಾಯಿಟ್ ಆಗಿದ್ದಾರೆ.
ಬೆಂಗಳೂರು ಮೂಲದ ನಟಿ ಬಿಂದು ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಸಿನಿಮಾದಲ್ಲಿ ನಟಿಸಬೇಕೆನ್ನುವುದು ಬಿಂದು ಅವರ ದೊಡ್ಡ ಕನಸಾಗಿತ್ತು. ಆ ಕನಸು ಈಗ ‘ಕೆರೆ ಬೇಟೆ’ ಸಿನಿಮಾ ಮೂಲಕ ನನಸುಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ನಟಿ ಬಿಂದು,
‘ಕಾಲೇಜು ದಿನಗಳಲ್ಲಿ
ಫ್ಯಾಷನ್ ವಾಕ್, ಕಲ್ಚರಲ್ ಆ್ಯಕ್ಟಿವಿಟಿ ಮತ್ತು
ಡ್ರಾಮ ಮಾಡುತ್ತಿದ್ದೆ, ಆಗ ನಮ್ಮ ಕಾಲೇಜ್ ಲೆಕ್ಚರರ್ಸ್ ನನ್ನ ಅಭಿನಯ ನೋಡಿ ಅಪ್ರಿಶಿಯೇಟ್ ಮಾಡುತ್ತಿದ್ದರು, ಆ ದಿನಗಲ್ಲಿ ನನಗೆ ಸಿನೆಮಾ ಬಗ್ಗೆ ಒಲವು ಮೂಡಿತು,
ಕೆಲವು ಸಿನಿಮಾಗಳ ಆಡಿಶನ್ ಗೆ ಹೋಗ್ತಾ ಇದ್ದೆ, ಅದೇ ರೀತಿ ಕೆರೆಬೇಟೆ ಸಿನಿಮಾಗು ಆಡಿಷನ್ ಕೊಟ್ಡಿದ್ದೆ, ಕೆಲ ದಿನಗಳ ನಂತರ, ಪ್ರೊಡಕ್ಷನ್ ಕಡೆಯಿಂದ ಕರೆ ಮಾಡಿ ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಿದರು. ಬಳಿಕ ಅವರೇ ನಿನಾಸಮ್ ತರಬೇತು ದಾರರಿಂದ ಅಭಿನಯ ತರಬೇತಿ ಮಾಡಿಸಿದರು. ಈ ಅವಕಾಶ ಕೊಟ್ಟ ಕೆರೆಬೇಟೆ ಚಿತ್ರ ತಂಡಕ್ಕೆ ಕೃತಜ್ಞಳಾಗಿದ್ದೇನೆ’ ಎಂದರು.
ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ನಟಿಯಾಗಿ ಬೆಳೆಯುವ ಕನಸು ಕಂಡಿರುವ ಬಿಂದು ಕೆರೆಬೇಟೆ ಸಿನಿಮಾ ಮೂಲಕ ಅಭಿಮಾನಿಗಳ ಹೃದಯ ಗೆಲ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ