Kannada Beatz
Sandalwood

ರೆಕಾರ್ಡ್ ಬ್ರೇಕ್ ಆಯ್ತಾ? ಯಜಮಾನ ಮೊದಲ ದಿನ ಗಳಿಸಿದ್ದು ಎಷ್ಟು ಗೊತ್ತಾ? ಈ ಸುದ್ದಿ ನೋಡಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಯಜಮಾನ ನಿನ್ನೆ ದೇಶಾದ್ಯಂತ ತೆರೆ ಕಂಡಿದೆ. ಕನ್ನಡ ಚಿತ್ರಗಳ ಪಾಲಿಗೆ ಬಹುದೊಡ್ಡ ಮಟ್ಟದ ಬಿಡುಗಡೆ ಯಜಮಾನ ಚಿತ್ರಕ್ಕೆ ಸಿಕ್ಕಿತ್ತು ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬರೋಬ್ಬರಿ ಒಂದೂವರೆ ವರ್ಷಗಳ ನಂತರ ಡಿ ಬಾಸ್ ತೆರೆಯ ಮೇಲೆ ಕಾಣಿಸಿಕೊಂಡಿದ್ದು ಅವರನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು.

ತಾರಕ್ ಚಿತ್ರದ ನಂತರ ಯಜಮಾನ ಚಿತ್ರದಲ್ಲಿ ಚಾಲೆಂಜಿಂಗ್ ದರ್ಶನ್ ಅವರು ಅಭಿನಯಿಸಿದ್ದು ಒಂದೂವರೆ ವರ್ಷಗಳ ಗ್ಯಾಪ್ ನಂತರ ಮತ್ತೊಮ್ಮೆ ಬಂದಿದ್ದಾರೆ. ದರ್ಶನ್ ಅಭಿನಯದ ಈ ಹಿಂದಿನ ಕೆಲ ಚಿತ್ರಗಳು ಹೇಳಿಕೊಳ್ಳುವಷ್ಟು ಯಶಸ್ಸನ್ನು ಸಾಧಿಸಿದೆ ಇದ್ದವು ಆದರೆ ಇದೀಗ ಯಜಮಾನ ಚಿತ್ರ ಆ ಎಲ್ಲಾ ನಿರಾಸೆಗೆ ತಣ್ಣೀರನ್ನು ಹಾಕಿದ್ದು ಎಲ್ಲ ಕಡೆ ಬ್ಲಾಕ್ ಬಸ್ಟರ್ ರಿವ್ಯೂ ಅನ್ನು ಪಡೆದುಕೊಂಡು ಭರ್ಜರಿ ಓಪನಿಂಗ್ ಕಂಡಿದೆ.

ಹೌದು ಚಿತ್ರ ನೋಡಿದ ಪ್ರೇಕ್ಷಕ ಯಜಮಾನನಿಗೆ ಫುಲ್ ಫಿದಾ ಆಗಿದ್ದು ಚಿತ್ರ ಬ್ಲಾಕ್ ಬಸ್ಟರ್ ಎನ್ನುತ್ತಿದ್ದಾನೆ. ಯಜಮಾನ ಬಿಡುಗಡೆಗೊಂಡ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನವನ್ನು ನಿನ್ನೆ ಕಂಡಿದ್ದು ಮೊದಲ ದಿನ ಅಂದಾಜು 10 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಈ ಮೂಲಕ ದರ್ಶನ್ ಅಭಿನಯದ ಯಜಮಾನ ಚಿತ್ರ ದಿ ವಿಲನ್ ದಾಖಲೆಯನ್ನು ಮುರಿದು ಹಾಕಿದ್ದು ಮೊದಲ ದಿನ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪೈಕಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಇನ್ನು ಮೊದಲನೇ ಸ್ಥಾನದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಇದ್ದು ಈ ಚಿತ್ರ ಮೊದಲನೇ ದಿನ 13 ಕೋಟಿ ರೂಪಾಯಿಯನ್ನು ಕಲೆಕ್ಟ್ ಮಾಡಿತ್ತು.

Related posts

ನಟ ಸಾರ್ವಭೌಮ ದಲ್ಲಿ ಹಿಂದೆಂದೂ ಕಂಡಿರದ ಅಪ್ಪು..!

administrator

ಕಿಚ್ಚ-ದಚ್ಚು ಕಡೆಯಿಂದ ನಾಳೆ ಅವರ ಅಭಿಮಾನಿಗಳಿಗೆ ಸಂಕ್ರಾಂತಿ ಗಿಫ್ಟ್..!

administrator

200 ರ ಗಡಿ ದಾಟಿದ ಕೆಜಿಎಫ್..!

administrator

Leave a Comment

Share via
Copy link
Powered by Social Snap