Kannada Beatz
News

ಬೆಳಕಿನ ಹಬ್ಬಕ್ಕೆ ಬಂತು
“ಮಾಫಿಯಾ” ಚಿತ್ರದ ನೂತನ ಪೋಸ್ಟರ್

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ “ಮಾಫಿಯಾ” ಚಿತ್ರದ ನೂತನ ಪೋಸ್ಟರ್ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗಿದೆ. ವಿಭಿನ್ನ ಪೋಸ್ಟರ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ನಿರ್ಮಿಸುತ್ತಿದ್ದಾರೆ.
ಲೋಹಿತ್ ಹೆಚ್ ನಿರ್ದೇಶನದ ಈ ಚಿತ್ರದ ಸಾಹಸ ಸನ್ನಿವೇಶಗಳು ಸಾಹಸಪ್ರಿಯರಿಗೆ ಹೆಚ್ಚು ಪ್ರಿಯವಾಗಲಿದೆ.

ನಾಯಕ ಪ್ರಜ್ವಲ್ ದೇವರಾಜ್ ಅಭಿನಯದ 35ನೇ ಚಿತ್ರ “ಮಾಫಿಯಾ”. ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಗೆಟಪ್ ನಲ್ಲಿ ಪ್ರಜ್ವಲ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಸಹ ಮಾಡಿಕೊಂಡಿದ್ದಾರೆ.

ಈಗಾಗಲೇ ಈ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾರ್ಗ ಬಾಕಿಯಿದೆ. ದೀಪಾವಳಿ ನಂತರ ಬೆಂಗಳೂರಿನಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ‌.

“ಮಾಫಿಯಾ”ಗಾಗಿ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ದೂರಿ ಸೆಟ್ ಸಹ ನಿರ್ಮಾಣ ಮಾಡಲಾಗಿತ್ತು.

ಎಸ್ ಪಾಂಡಿಕುಮಾರ್ ಛಾಯಾಗ್ರಹಣ ಹಾಗೂ ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ, ದೇವರಾಜ್ , ಸಾಧುಕೋಕಿಲ, ಶೈನ್ ಶೆಟ್ಟಿ, ವಿಜಯ್ ಚೆಂಡೂರ್, ವಾಸುಕಿ ವೈಭವ್ ಮುಂತಾದವರಿದ್ದಾರೆ.

Related posts

ಜೀವನದಲ್ಲಿ ಒಂದು ಕಡೆ ದುಡ್ಡು. ಇನ್ನೊಂದು ಕಡೆ ನಗು ಎಂಬ ನಾಯಕ-ನಾಯಕಿಯ ಹಾವು ಏಣಿ ಆಟದಲ್ಲಿ ಗೆಲ್ಲುವುದೇ ‘ಅಪ್ಪ ಅಮ್ಮ’ನ ಪ್ರೀತಿ

administrator

ಎಂ.ಎಸ್ ಅಕ್ಷರ್ – ರೀಷ್ಮಾ ನಾಣಯ್ಯ ಅಭಿನಯದಲ್ಲಿ ಬಂತು “ಛೀ ಕಳ್ಳ” ಆಲ್ಬಂ ಸಾಂಗ್.

Kannada Beatz

ಶಿವರಾತ್ರಿಗೆ ‘ರಾಕ್ಷಸ’ನಾಗಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದರ್ಶನ

Kannada Beatz

Leave a Comment

Share via
Copy link
Powered by Social Snap