HomeNewsಗಾಳಿಪಟ2 ತಂಡದಿಂದ ನಿಮಗೊಂದು ಗೋಲ್ಡನ್ ಆಫರ್.! "ವಿಕ್ರಾಂತ್ ರೋಣ" ಚಿತ್ರದ 'ರಾ ರಾ ರಕ್ಕಮ್ಮ' ಹಾಡಿನಂತೆಯೇ...

ಗಾಳಿಪಟ2 ತಂಡದಿಂದ ನಿಮಗೊಂದು ಗೋಲ್ಡನ್ ಆಫರ್.! “ವಿಕ್ರಾಂತ್ ರೋಣ” ಚಿತ್ರದ ‘ರಾ ರಾ ರಕ್ಕಮ್ಮ’ ಹಾಡಿನಂತೆಯೇ ಸೂಪರ್ ಹಿಟ್ “ದೇವ್ಲೆ ದೇವ್ಲೆ”

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ಟರ ಜೋಡಿ ಅಂದ್ರೆ ಹಂಗೇನೇ… ಮುಂಗಾರು ಮಳೆಯಿಂದ ಶುರುವಾದ ಈ ಜೋಡಿಯ ಅಬ್ಬರ ಇದೀಗ ಗಾಳಿಪಟ 2ವರೆಗೂ ಬಂದು ನಿಂತಿದೆ.

2006ರಲ್ಲಿ ತೆರೆಕಂಡು ಚಂದನವನಕ್ಕೆ ಗೆಲುವಿನ ವರ್ಷಧಾರೆಯನ್ನೇ ಸುರಿಸಿದ್ದ “ಮುಂಗಾರು ಮಳೆ”ಯ ಗಣಿ-ಭಟ್ರು ಜೋಡಿ ತದನಂತರವು ಗಾಳಿಪಟ ಎಂಬ ಎವರ್ಗ್ರೀನ್ ಸಿನೆಮಾದ ಮೂಲಕ ಗೆಲುವಿನ ಪತಾಕೆಯನ್ನು ಹಾರಿಸಿದ್ದರು. ಎರಡು ಬೃಹತ್ ಗೆಲುವುಗಳ ನಂತರ ಗಣೇಶ್ ಮತ್ತು ಯೋಗರಾಜ್ ಭಟ್ಟರು ಮತ್ತದೇ ಗೆಲುವುವಿಗಾಗಿ ಮತ್ತೆ ಒಂದಾಗಿದ್ದು 2017ರ “ಮುಗುಳುನಗೆ” ಚಿತ್ರದ ಮೂಲಕ. ಹಾಡುಗಳು ಸೂಪರ್ ಹಿಟ್ ಆಗಿದ್ದರೂ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೇನು ಸದ್ದು ಮಾಡಲಿಲ್ಲ.

ಇದೀಗ ಈ ಜೋಡಿಯ ಮತ್ತೊಂದು ಸಿನಿಮಾ ಗಾಳಿಪಟ 2 ಇದೇ ಆಗಸ್ಟ್ 12ರಿಂದ ವಿಶ್ವದಾದ್ಯಂತ ಹಾರಾಡಲು ಸಜ್ಜಾಗಿದೆ. ಸೆಟ್ಟೇರಿದಾಗಿನಿಂದ ಒಂದಿಲ್ಲೊಂದು ವಿಷಯ ಮತ್ತು Update ಮೂಲಕ ಸೌಂಡ್ ಮಾಡುತ್ತಿರುವ ಗಾಳಿಪಟ 2 ಸಿನೆಮಾದಲ್ಲಿನ ಹಾಡುಗಳು ಈಗಾಗಲೇ ಭರ್ಜರಿ ಹಿಟ್ ಆಗಿದ್ದು, ಸದ್ಯ ಬಿಡುಗಡೆಯಾಗಿರುವ ಮೂರು ಹಾಡುಗಳೂ ಕೇಳುಗರ ನೆಚ್ಚಿನ ಸಾಲನ್ನು ಸೇರಿದೆ.

“Exam Song”, “ನಾನಾಡದ ಮಾತೆಲ್ಲವ” ಹಾಡುಗಳು ಸೂಪರ್ ಹಿಟ್ ಆದ ನಂತರ ಇತ್ತೀಚೆಗೆ ಬಿಡುಗಡೆಯಾದ ವಿಶಿಷ್ಟ ಪದಪ್ರಯೋಗದ “ದೇವ್ಲೆ ದೇವ್ಲೆ” ಹಾಡಿನ ಹುಕ್ ಸ್ಟೆಪ್ ಎಲ್ಲೆಡೆ ವೈರಲ್ ಆಗಿದ್ದು, ಅದಕ್ಕಾಗಿ ಚಿತ್ರತಂಡವು ಸಿನಿ ಪ್ರೇಮಿಗಳಿಗೆ ವಿಶೇಷ ಆಫರ್ ನೀಡಿದೆ.

“ದೇವ್ಲೆ ದೇವ್ಲೆ” ಹಾಡಿಗೆ ನೀವು ರೀಲ್ಸ್ ಮಾಡಿ ಚಿತ್ರತಂಡಕ್ಕೆ ಕಳುಹಿಸಿದರೆ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಸ್ನೇಹಿತರೊಡನೆ ಗಾಳಿಪಟ 2 ಚಿತ್ರತಂಡದ ಜೊತೆಗೆ ಚಿತ್ರವನ್ನು ವೀಕ್ಷಿಸುವ ಸುವರ್ಣಾವಕಾಶವನ್ನು ಚಿತ್ರತಂಡವು ನೀಡಿದೆ. ಅದೃಷ್ಟ ಪರೀಕ್ಷಿಸಿಕೊಳ್ಳಲು ಬಯಸುವವರು ಇಂದೇ ನಿಮ್ಮ Reels ಅನ್ನು ಚಿತ್ರತಂಡಕ್ಕೆ ಕಳುಹಿಸಿ

Must Read

spot_img
Share via
Copy link
Powered by Social Snap