Kannada Beatz
News

“ಲವ್ ಬರ್ಡ್ಸ್”
ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್ ಬಿಡುಗಡೆ ಮಾಡಿದರು “ಗಿರ್ಕಿ” ಚಿತ್ರದ ಲವ್ ಸಾಂಗ್

ಎದಿತ್ ಫಿಲಂ ಫ್ಯಾಕ್ಟರಿ ಮತ್ತು ವಾಸುಕಿ ಮೂವೀಸ್
ಸಹಯೋಗದೊಂದಿಗೆ ತರಂಗ ವಿಶ್ವ ನಿರ್ಮಿಸಿರುವ “ಗಿರ್ಕಿ” ಚಿತ್ರವನ್ನು ಯೋಗರಾಜ್ ಭಟ್ ಅವರ ಶಿಷ್ಯ
ವೀರೇಶ್ ಪಿ.ಎಂ ನಿರ್ದೇಶಿಸಿದ್ದಾರೆ‌.
ವೀರೇಶ್ ಅವರಿಗೆ ಇದು ಮೊದಲ ಚಿತ್ರ.

ಈ ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಅವರು ಬರೆದಿರುವ “ಕದಿಯಲೇನು” ಎಂಬ ಹಾಡನ್ನು ಕನ್ನಡ ಚಿತ್ರರಂಗದ ತಾರಾ ಜೋಡಿ, “ಲವ್ ಬರ್ಡ್ಸ್” ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. A2 music ಮೂಲಕ ಹಾಡು ಬಿಡುಗಡೆಯಾಗಿದೆ. ತೀರ್ಥಹಳ್ಳಿಯ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿರುವ ಈ ಹಾಡಿಗೆ ಮೋಹನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿನ್ಮಯ್ ಶ್ರೀಪಾದ ಹಾಡಿದ್ದಾರೆ. ವಿಲೋಕ್ ರಾಜ್ ಹಾಗೂ ದಿವ್ಯ ಉರುಡುಗಅಭಿನಯಿಸಿದ್ದಾರೆ. ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ.

ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಛಾಯಾಗ್ರಾಹಕ ನವೀನ್ ಕುಮಾರ್ ಛಲ್ಲ ಅವರ ಛಾಯಾಗ್ರಹಣಕ್ಕೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿದೆ. ಮೋಹನ್ ಅವರ ನೃತ್ಯ ನಿರ್ದೇಶನ ಕೂಡ ನೋಡುಗರ ಗಮನ ಸೆಳೆಯುತ್ತಿದೆ. ವೀರ್ ಸಮರ್ಥ್ ಅವರ ಸುಮಧುರ ಸಂಗೀತ ಕೇಳುಗರ ಮನಗೆದ್ದಿದೆ.

ಈ ಹಿಂದೆ ಯೋಗರಾಜ್ ಭಟ್ ಅವರು ಬರೆದಿರುವ ಎಣ್ಣೆ ಸಾಂಗ್ ಕೂಡ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಈಗ ಚಿತ್ರದ ಲವ್ ಸಾಂಗ್ ಬಿಡುಗಡೆಯಾಗಿದ್ದು, ಜುಲೈ 8 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ವಾಸುಕಿ ಭುವನ್ ಅವರ ಸಹ ನಿರ್ಮಾಣವಿದೆ. ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ವೀರೇಶ್.ಪಿ.ಎಂ ಹಾಡುಗಳನ್ನು ಬರೆದಿದ್ದಾರೆ. ಮಧು ತುಂಬಕೆರೆ ಅವರ ಸಂಕಲನವಿರುವ ಈ ಚಿತ್ರಕ್ಕೆ
ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಹಾಗೂ ರಾಮು, ಮೋಹನ್ ಅವರ ನೃತ್ಯ ನಿರ್ದೇಶನವಿದೆ.

ಹಾಸ್ಯ ಕಲಾವಿದರಾಗಿ ಮನೆಮಾತಾಗಿರುವ ತರಂಗ ವಿಶ್ವ ಹಾಗೂ ವಿಲೋಕ್ ರಾಜ್ ನಾಯಕರಾಗಿ ನಟಿಸಿದ್ದು, ದಿವ್ಯ ಉರುಡುಗ ಹಾಗೂ ರಾಶಿ ಮಹದೇವ್ ನಾಯಕಿಯಾಗಿ ನಟಿಸಿದ್ದಾರೆ.

ಈ ಚಿತ್ರದ ಮೂಲಕ ವಿಲೋಕ್ ರಾಜ್ ನಾಯಕರಾಗಿ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಹಾಗೂ ತುಣುಕನ್ನು ವೀಕ್ಷಿಸಿರುವ ಸಿನಿರಸಿಕರು ವಿಲೋಕ್ ರಾಜ್ ಅವರ ಅಭಿನಯವನ್ನು ಶ್ಲಾಘಿಸಿದ್ದಾರೆ.

Related posts

“ಆ ಒಂದು ಕನಸು” ಡಬ್ಬಿಂಗ್ ಕೆಲಸವನ್ನು ಮುಂದುವರೆಸಿದ ಚಿತ್ರತಂಡ.

administrator

ಮಾತಿನಮನೆಯಲ್ಲಿ “ಲಂಕಾಸುರ”.

Kannada Beatz

‘ದಿಲ್ಮಾರ್’ಗೆ ಪ್ರೀ-ರಿಲೀಸ್ ಇವೆಂಟ್ ಗೆ ಶಿವಣ್ಣ ಮೆರುಗು..ರಾಮ್-ಚಂದ್ರಮೌಳಿ ಚಿತ್ರಕ್ಕೆ ದೊಡ್ಮನೆ‌ ದೊರೆ ಹಾರೈಕೆ

Kannada Beatz

Leave a Comment

Share via
Copy link
Powered by Social Snap