ಮತಾಂತರ ವಿಷಯಾಧಾರಿತ ಸಿನಿಮಾ The Conversion ಬೆಳ್ಳಿತೆರೆಗೆ ಬರೋದಿಕ್ಕೆ ಸಜ್ಜಾಗಿದೆ. ಮೇ 6ರಂದು ಸಿನಿಮಾ ತೆರೆಗೆ ಬರ್ತಿದ್ದು, ಈ ಹಿನ್ನೆಲೆ ಚಿತ್ರತಂಡ ವಿವಿಧ ರಾಜ್ಯಗಳಲ್ಲಿ ಪ್ರೀಮಿಯರ್ ಶೋ ಹಮ್ಮಿಕೊಂಡಿತ್ತು.
ಇತ್ತೀಚೆಗಷ್ಟೇ ಅಹಮದಬಾದ್ ನಲ್ಲಿ ಪ್ರೀಮಿಯರ್ ಶೋ ನಡೆಸಿದ್ದ ಚಿತ್ರತಂಡ ಮೊನ್ನೆ ಮೊನ್ನೆಯಷ್ಟೇ ಬೆಂಗಳೂರಿನ ಗರುಡ ಮಾಲ್ ನಲ್ಲಿಯೂ ಪ್ರೀಮಿಯರ್ ಶೋ ಆಯೋಜಿಸಿತ್ತು. ಈ ವಿಶೇಷ ಶೋಗೆ ಹಿಂದು ಸಂಘಟನೆಯ ಮುಖ್ಯಸ್ಥರು, ಪ್ರಶಾಂತ್ ಸಂಬರ್ಗಿ ಸೇರಿದಂತೆ ಹಲವರು ಭಾಗವಹಿಸಿ ಸಿನಿಮಾ ವೀಕ್ಷಣೆ ಮಾಡಿದರು.
ವಿನೋದ್ ತಿವಾರಿ ನಿರ್ದೇಶನದಲ್ಲಿ ಮೂಡಿ ಬಂದಿರುವ the conversion ಸಿನಿಮಾದಲ್ಲಿ ಪ್ರತೀಕ್ ಶುಕ್ಲಾ ಮತ್ತು ರವಿ ಭಾಟೀಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಅನಾಮಿಕ ಚೌಹಾಣ್, ರಾಜ್ ಪಾಟೇಲ್, ರಾಜ್ ನಸ್ಟ್ರೋಮ್ ಹಾಗೂ ವಿಫುಲ್ ಪಟೇಲ್ ಚಿತ್ರಕ್ಕೆ ಹಣ ಹಾಕಿದ್ದು, ಬರೋ ಮೇ 6 ರಿಂದ ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡ್ತಿದೆ.