Kannada Beatz
News

ಸದ್ಯದಲ್ಲೇ ಚಿರಂಜೀವಿ ಸರ್ಜಾ ಅಭಿನಯದ “ರಾಜಮಾರ್ತಾಂಡ” ಚಿತ್ರ ಬಿಡುಗಡೆ

ಯುಗಾದಿಯಂದು ಪೋಸ್ಟರ್ ಬಿಡುಗಡೆ ಮಾಡಿ ಶುಭಕೋರಿದ ಅರ್ಜುನ್ ಗುರೂಜಿ.

ಬಹುಬೇಗ ನಮ್ಮನೆಲ್ಲಾ ಅಗಲಿದ ನಟ ಚಿರಂಜೀವಿ ಸರ್ಜಾ ಅಭಿನಯದ ” ರಾಜಮಾರ್ತಾಂಡ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.
ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.

ಯುಗಾದಿ ಹಬ್ಬದ ಶುಭದಿನದಂದು ಈ ಚಿತ್ರದ ಪೋಸ್ಟರನ್ನು ಅರ್ಜುನ್ ಗುರೂಜಿ ಮೈಸೂರಿನ ಡಿ ಆರ್ ಸಿಯಲ್ಲಿ ಬಿಡುಗಡೆ ಮಾಡಿದರು. ಡಿ.ಸಿ.ಪಿ ಪ್ರಕಾಶ್ ಗೌಡ್ರು ಹಾಗೂ ಡಿ ಆರ್ ಸಿಯ ಎಂ.ಡಿ ಶ್ಯಾಮಲ ಅವರು ಈ ಸಂದರ್ಭದಲ್ಲಿ ‌ಉಪಸ್ಥಿತರಿದ್ದರು.

ಚಿರಂಜೀವಿ ಸರ್ಜಾ ಅವರ ಸಾವಿನ ಮುಂಚೆಯೇ ಚಿತ್ರೀಕರಣ ಪೂರ್ತಿಯಾಗಿತ್ತು. ಹಾಗಾಗಿ ಅವರು ಚಿತ್ರೀಕರಣ ಮುಗಿಸಿದ್ದ ಕೊನೆಯ ಚಿತ್ರ ಅನ್ನಬಹುದು.‌

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಧ್ವನಿ ನೀಡಿರುವುದು ಸಹ ಕೇಳಬಹುದು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚಿರಂಜೀವಿ ಸರ್ಜಾ ಅವರ ಪಾತ್ರಕ್ಕೆ ಡಬ್ಬಿಂಗ್ ಮಾಡಲಿದ್ದಾರೆ.

ಗೀತರಚನೆಕಾರರಾಗಿ ಜನಪ್ರಿಯರಾಗಿರುವ ಕೆ.ರಾಮನಾರಾಯಣ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಪ್ರಣವ್ ಗೌಡ.ಎನ್, ನಿವೇದಿತಾ ಹಾಗೂ ಶಿವಕುಮಾರ್ ನಿರ್ಮಿಸಿದ್ದಾರೆ.

ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಧರ್ಮವಿಶ್ ಹಿನ್ನೆಲೆ ಸಂಗೀತ, ಕೆ.ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯು ಡಿ ವಿ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ ಈ ಚತ್ರಕ್ಕಿದೆ.

ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯರಾಗಿ ದೀಪ್ತಿ‌ ಸಾತಿ, ಮೇಘಶ್ರೀ, ತ್ರಿವೇಣಿ (ಟಗರು) ಅಭಿನಯಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Related posts

ಏಪ್ರಿಲ್‌ ಒಂದರಂದು ವಿಭಿನ್ನ ಕಥೆಯ “ತ್ರಿಕೋನ” ಬಿಡುಗಡೆ.

Kannada Beatz

”ಕಡಲೂರ ಕಣ್ಮಣಿ” ತೆರೆಗೆ ಬರಲು ಸಿದ್ದ .

Kannada Beatz

ಗಣೇಶನ ಹಬ್ಬಕ್ಕೆ ಬಂತು ಶೈನ್ ಶೆಟ್ಟಿ ಅಭಿನಯದ “ಜಸ್ಟ್ ಮ್ಯಾರಿಡ್” ಹಾಡು

Kannada Beatz

Leave a Comment

Share via
Copy link
Powered by Social Snap