ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ – ಸೋನಾಲ್ ಮಾಂಟೆರೊ ನಾಯಕ, ನಾಯಕಿಯಾಗಿ ನಟಿಸಿರುವ, ಜಯತೀರ್ಥ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ “ಬನಾರಸ್”.
ಮಕರ ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ ” ಬನಾರಸ್ ” ಚಿತ್ರತಂಡ ನೂತನ ಪೋಸ್ಟರ್ ವೊಂದನ್ನು ಅನಾವರಣಗೊಳಿಸುವ ಮೂಲಕ ಸಿನಿರಸಿಕರಿಗೆ ಮಕರ ಸಂಕ್ರಮಣದ ಶುಭಾಶಯ ಹೇಳಿದೆ.
ಬಹು ನಿರೀಕ್ಷಿತ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.
ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಮೂಲಕ ತಿಲಕ್ ರಾಜ್ ಬಲ್ಲಾಳ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಕೆ.ಎಂ.ಪ್ರಕಾಶ್ ಈ ಚಿತ್ರದ ಸಂಕಲನಕಾರರು.