ಬೆಂಗಳೂರು ನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಆವರಣದಲ್ಲಿರುವ ಶ್ರೀ ಕಾಲಭೈರೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಯುವ ಪ್ರತಿಭೆಗಳು ಆರಂಭಿಸಿರುವಂತಹ “ಸಂಪಿಗೆ”. ಈ ಚಿತ್ರದ ಮಹೂರ್ತ ಸಮಾರಂಭಕ್ಕೆ
ಬಿಗ್ ಬಾಸ್ ಖ್ಯಾತಿಯ ಸಾನಿಯಾ ಅಯ್ಯರ್ , ಹಾಗೂ ಅವರ ತಾಯಿ ದೀಪಾ ಅಯ್ಯರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಪ್ರತಿಭೆ ಇಶಾನಿ ಹಾಗೂ ಸಾಮಾಜಿಕ ಕಾರ್ಯಕರ್ತ ಆಂಜನಪ್ಪ ಸೇರಿದಂತೆ ಹಲವು ಗಣ್ಯರು , ಸ್ನೇಹಿತರು ದರ್ಶನ್ ಫ್ಯಾನ್ಸ್ ಕಾರ್ಯಕ್ರಮದಲ್ಲಿ ಹಾಜರಿದ್ದು ಚಿತ್ರತಂಡಕ್ಕೆ ಶುಭವನ್ನು ಹಾರೈಸಿದರು. ಚಿತ್ರೋದ್ಯಮದಲ್ಲಿ ಬಹಳಷ್ಟು ವರ್ಷಗಳ ಅನುಭವವನ್ನು ಪಡೆದುಕೊಂಡಂತಹ ಗೆಳೆಯರ ಬಳಗ ಸೇರಿಕೊಂಡು ಆರಂಭಿಸುತ್ತಿರುವಂತಹ ಈ ನೂತನ ಚಿತ್ರದ ಮಾಹಿತಿಯನ್ನು ನೀಡಲು ಚಿತ್ರತಂಡ ಹಾಜರಿತ್ತು.

ಮೊದಲಿಗೆ ಚಿತ್ರದ ನಿರ್ದೇಶಕ ಗಿರಿ ಗೌಡ ಮಾತನಾಡುತ್ತಾ ಇದು ನನ್ನ ಮೊದಲ ಚಿತ್ರ. ಈ ಹಿಂದೆ ನಾನು ಹಲವಾರು ವಿಡಿಯೋ ಆಲ್ಬಮ್ ಸಾಂಗ್ ಗಳನ್ನು ನಿರ್ದೇಶನ ಮಾಡಿದ್ದೆ. ಮದ್ದೂರು ವಡೆ ಹಾಗೂ ಮಹಾ ಕಾಳಿ ಎಂಬ ಚಿತ್ರವನ್ನ ಕೂಡ ಆರಂಭಿಸಿದೆ. ಈ ನನ್ನ ಸಂಪಿಗೆ ಚಿತ್ರ ಒಂದು ಮರ್ಡರ್ ಮಿಸ್ಟ್ರಿ ಕಥಾನಕವನ್ನು ಒಳಗೊಂಡಿದ್ದು , ಹೆಣ್ಣಿನ ಮೇಲಿನ ಅತ್ಯಾಚಾರ ದೌರ್ಜನ್ಯದ ಸುತ್ತ ಕಥೆ ಬೆಸೆದುಕೊಂಡಿದ್ದು, ಒಂದು ಉತ್ತಮ ಸಂದೇಶವಿದೆ. ಈ ಚಿತ್ರವು ಆಗಸ್ಟ್ ನಲ್ಲಿ ಚಿತ್ರೀಕರಣ ನಡೆಯಲಿದೆ. ಮೇಲುಕೋಟೆ, ಕಣ್ಣೂರು ಸೇರಿದಂತೆ ಹಲವು ಸ್ಥಳಗಳಲ್ಲಿ ಇಪ್ಪತ್ತು ದಿನಗಳಲ್ಲಿ ಚಿತ್ರೀಕರಣ ಮಾಡಲು ಸಿದ್ಧರಾಗಿದ್ದೇವೆ.
ಇಡೀ ಚಿತ್ರದಲ್ಲಿ ಒಂದು ಹಾಡು ಇದ್ದು , ಯುವ ಪ್ರತಿಭೆಗಳು ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಮುಂದಿನ ದಿನಗಳಲ್ಲಿ ನಾಯಕಿ ಯಾರೆಂದು ಪರಿಚಯ ಮಾಡುತ್ತೇವೆ ಎಂದರು.

ಚಿತ್ರದ ನಿರ್ಮಾಪಕ ರುದ್ರ ಕುಮಾರ್ ಮಾತನಾಡತ್ತ ನನ್ನದು ಬ್ರೆಡ್ ಫ್ಯಾಕ್ಟರಿ ಬ್ಯುಸಿನೆಸ್ ಇದೆ. ನನ್ನ 10 ವರ್ಷದ ಕನಸು ಈ ಚಿತ್ರ ಮಾಡುತ್ತಿದ್ದೇನೆ. ಉತ್ತಮ ಕಥೆ ಸಿಕ್ಕಿದೆ. ಕಾಲಭೈರವೇಶ್ವರ ಪ್ರೊಡಕ್ಷನ್ ಮೂಲಕ ಈ ಚಿತ್ರ ಆರಂಭಿಸಿದ್ದು , ನಿರ್ದೇಶಕ ನನ್ನ ಸಹೋದರ ಇದ್ದ ಹಾಗೆ , ಅವನಿಗಾಗಿ ಈ ಚಿತ್ರ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ , ಸಹಕಾರ ಇರಲಿ ಎಂದರು.

ಯುವ ನಟ ವರ್ಧನ್ ಮಾತನಾಡುತ್ತ ನಾನು ಮೂಲತಃ ಹಾಸನದವನು , ಸುಮಾರು ಎಂಟು ವರ್ಷಗಳ ಹಿಂದೆ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ ನಿರ್ದೇಶನ ವಿಭಾಗದಲ್ಲೂ ಕೆಲಸ ಮಾಡಿದ್ದೇನೆ. ನಾನು ಪಕ್ಕ ದರ್ಶನ್ ಅಭಿಮಾನಿ , ಅವರ ಆಶೀರ್ವಾದ ಸಾದ
ನನ್ನ ಹಾಗೂ ನಮ್ಮ ತಂಡದ ಮೇಲೆ ಇರಲಿದೆ. ಇದೊಂದು ಹೆಣ್ಣಿನ ಮೇಲೆ ನಡೆಯುವ ಕ್ರೌರ್ಯದ ಸುತ್ತ ನಡೆಯುವ ಚಿತ್ರವಾಗಿದ್ದು , ಆಕೆಯನ್ನು ನಾವು ಹೇಗೆ ಕಾಪಾಡಿಕೊಳ್ಳುತ್ತೇವೆ ಎಂಬುವ ಅಂಶ ಒಳಗೊಂಡಿದೆ. ನನ್ನ ಪಾತ್ರವೂ ಬಹಳ ವಿಭಿನ್ನವಾಗಿದ್ದು , ಈ ಚಿತ್ರಕ್ಕಾಗಿ ರಿಯರ್ಸಲ್ ಮಾಡಿಕೊಂಡು ಚಿತ್ರೀಕರಣಕ್ಕೆ ಹೋಗಲು ಸಿದ್ಧರಾಗಿದ್ದೇವೆ. ನಮ್ಮಂತ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು. ಇನ್ನು ಈ ಚಿತ್ರದಲ್ಲಿ ಅಭಿನಯಿಸಿರುವಂತಹ ಯುವ ಪ್ರತಿಭೆಗಳಾದ
ಪ್ರವೀಣ್ ದಾವಣಗೆರೆ ,
ದರ್ಶನ್ ತಮ್ಮ ತಮ್ಮ ಪಾತ್ರಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಈ ಚಿತ್ರಕ್ಕೆ ಕೀರ್ತನ್ ಪೂಜಾರಿ ಛಾಯಾಗ್ರಣವಿದೆ.

