ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ ಕೆಜಿಎಫ್. ಕೆಜಿಎಫ್ ಕೇವಲ ಒಂದು ಚಿತ್ರವಲ್ಲ ಇದು ಕನ್ನಡ ಚಿತ್ರರಂಗದ ಒಂದು ಮ್ಯಾಗ್ನಮ್ ಓಪಸ್. ಹೌದು ಕೆಜಿಎಫ್ ಚಿತ್ರ ಕನ್ನಡ ಚಿತ್ರರಂಗದ ಬಹು ದೊಡ್ಡ ಪ್ರಾಜೆಕ್ಟ್. ಕೋಟಿ ಕೋಟಿ ರು ದುಡ್ಡನ್ನು ಸುರಿದು ನಿರ್ಮಾಪಕ ವಿಜಯ್ ಕಿರಗಂದೂರು ಅವರು ತಮ್ಮ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದರು.
ಕನ್ನಡ ಚಿತ್ರರಂಗದಲ್ಲಿ ಇಷ್ಟು ದೊಡ್ಡ ಮಟ್ಟದ ಮೊತ್ತವನ್ನು ಹಾಕಿ ಚಿತ್ರವನ್ನು ತೆಗೆಯುತ್ತಿದ್ದಾರೆ ಈ ಚಿತ್ರ ಅಷ್ಟು ಕಲೆಕ್ಷನ್ ಮಾಡುತ್ತಾ ಕನ್ನಡ ಚಿತ್ರರಂಗಕ್ಕೆ ಅಷ್ಟು ದೊಡ್ಡ ಮಟ್ಟದ ಮಾರ್ಕೆಟ್ ಇದೆಯಾ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು.
ಇಷ್ಟೆಲ್ಲ ಮಾತುಗಳು ಕೇಳಿ ಬಂದರೂ ಸಹ ಕೆಜಿಎಫ್ ತಂಡ ತಾವು ಅಂದುಕೊಂಡಂತೆ ಬಹು ದೊಡ್ಡ ಮಟ್ಟದಲ್ಲಿ ಕೆಜಿಎಫ್ ಚಿತ್ರದ ಚಿತ್ರೀಕರಣವನ್ನು ಮುಗಿಸಿ ಕಳೆದ ತಿಂಗಳಷ್ಟೇ ವಿಶ್ವದಾದ್ಯಂತ ಕೆಜಿಎಫ್ ಚಿತ್ರವನ್ನು ಬಹುಭಾಷೆಯಲ್ಲಿ ಬಿಡುಗಡೆ ಮಾಡಿತು. ಬಿಡುಗಡೆಯಾಗುವ ಮೊದಲು ಕೆಜಿಎಫ್ ಸೃಷ್ಟಿಸಿದ್ದ ದೊಡ್ಡ ಮಟ್ಟದ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಕೆಜಿಎಫ್ ತಂಡ ಅಷ್ಟೇ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಯಿತು. ಹೌದು ಕೆಜಿಎಫ್ ಚಿತ್ರವನ್ನು ವೀಕ್ಷಿಸಿದ ಪ್ರೇಕ್ಷಕರು ಫುಲ್ ಖುಷ್ ಆಗಿ ಪದೇ ಪದೇ ಚಿತ್ರವನ್ನು ನೋಡುವ ರೇಂಜಿಗೆ ಚಿತ್ರವನ್ನು ನಿರ್ಮಿಸಿತ್ತು ಚಿತ್ರತಂಡ.
ಇನ್ನು ಕೆಜಿಎಫ್ ಬಿಡುಗಡೆಯಾದ ನಂತರ ಕೋಟಿ ಕೋಟಿ ದುಡ್ಡನ್ನು ಬಾಚಿ ಈ ಹಿಂದೆ ಇದ್ದ ಎಲ್ಲ ರೆಕಾರ್ಡ್ ಗಳನ್ನು ಉಡೀಸ್ ಮಾಡುವ ಮೂಲಕ ಕನ್ನಡದ ಲೇಟೆಸ್ಟ್ ಇಂಡಸ್ಟ್ರಿ ಹಿಟ್ ಸಿನಿಮಾ ಎನಿಸಿಕೊಂಡಿತು. ಹೌದು ಕೆಜಿಎಫ್ ಚಿತ್ರ ತಂಡಕ್ಕೆ ಅಭಿಮಾನಿಗಳು ತುಂಬಾ ಕಾತುರರಾಗಿ ಕಾಯುತ್ತಿದ್ದರು ಬಿಡುಗಡೆಯಾದ ನಂತರ ಕೆಜಿಎಫ್ ಚಿತ್ರವನ್ನು ಟಿಕೆಟ್ ಎಷ್ಟೇ ದುಡ್ಡಾದರೂ ಸಹ ಕೊಂಡು ವೀಕ್ಷಿಸಿದರು. ಮೇಕಿಂಗ್ ಅನ್ನು ನೆಕ್ಸ್ಟ್ ಲೆವೆಲ್ ನಲ್ಲಿ ಮಾಡಿದ್ದರಿಂದ ಚಿತ್ರ ಜನರ ಮನಸ್ಸನ್ನು ಇನ್ನೂ ಹೆಚ್ಚಿಗೆ ಚಿತ್ರದ ಕಡೆ ಸೆಳೆಯಿತು. ಸ್ಕ್ರೀನ್ ಪ್ಲೇ ಮತ್ತು ಡೈರೆಕ್ಷನ್ನಲ್ಲಿ ಪ್ರಶಾಂತ್ ನೀಲ್ ಅವರು ದಿಗ್ವಿಜಯವನ್ನು ಸಾಧಿಸಿದರು.
ಇನ್ನು ಇದೀಗ ಕೆಜಿಎಫ್ ಚಿತ್ರ ಹೊಸದೊಂದು ಮೈಲಿಗಳನ್ನು ಸೃಷ್ಟಿಸಿದ್ದು ಕನ್ನಡ ಚಿತ್ರರಂಗದಲ್ಲಿ ಹಿಂದೆಂದೂ ಕಂಡಿರದ ಹೊಸ ದಾಖಲೆಯನ್ನು ನಿರ್ಮಿಸಿದೆ. ಹೌದು ಕೆಜಿಎಫ್ ಚಿತ್ರ ಇಂದು ವಿಶ್ವದಾದ್ಯಂತ ಬರೋಬ್ಬರಿ 200 ಕೋಟಿ ರೂಪಾಯಿ ಕಲೆಕ್ಷನ್ ಗಡಿಯನ್ನು ದಾಟಿದೆ. ಈ ಮೂಲಕ 200 ಕೋಟಿ ರೂಪಾಯಿ ಕ್ಲಬ್ ಸೇರಿದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೂ ಸಹ ಪಾತ್ರವಾಗಿದೆ. ಅಷ್ಟೇ ಅಲ್ಲದೇ ಇಂದು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬವೂ ಕೂಡ ಇದೆ . ಅದೇ ದಿನದಂದು ಈ ಕಲೆಕ್ಷನ್ ಆಗಿರುವುದು ಅವರ ಅಭಿಮಾನಿಗಳಿಗೆ ದೊಡ್ಡ ಗಿಫ್ಟ್ ಎಂದೇ ಹೇಳಬಹುದು.