ಒಟಿಟಿ ಪ್ಲಾಟ್ಫಾರ್ಮ್ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಹೊಸ ಸಿನಿಮಾಗಳನ್ನು ಖರೀದಿಸಿ ಪ್ರಸಾರ ಮಾಡುವಲ್ಲಿ ಅನೇಕ ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಇದೆ. ಅದರಲ್ಲೂ ‘ಜೀ5’ ಸದಾಭಿರುಚಿ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡುವಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸುತ್ತದೆ. ಇದೇ ಸೆಪ್ಟಂಬರ್ 13ರಂದು Zee5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಕಂಡ ‘ನುನಕುಳಿ’ ಚಿತ್ರ ದಾಖಲೆ ಬರೆದಿದೆ. 100 ಮಿಲಿಯನ್ಸ್ ಸ್ಟ್ರೀಮಿಂಗ್ ಮಿನಿಟ್ ಕಾಣುವ ಮೂಲಕ ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಇತ್ತೀಚೆಗಷ್ಟೇ ಕೇರಳದ ನಡೆದ ಕ್ರೀಡಾ ಸಮಾರಂಭವೊಂದರಲ್ಲಿ ಅಲ್ಲಿ ಶಿಕ್ಷಣ ಮತ್ತು ಕಾರ್ಮಿಕ ಸಚಿವ ವಿ ಶಿವನ್‌ಕುಟ್ಟಿ ಅವರ ಸಮ್ಮುಖದಲ್ಲಿ ‘ನುನಕುಳಿ’ ಚಿತ್ರದ 10,000 ಸ್ಕ್ವೇರ್ ಫೀಟ್ ಪೋಸ್ಟರ್ ನ್ನು ಜೀ5 ಅನಾವರಣ ಮಾಡಿದೆ.
ಕ್ರೈಮ್ ಕಾಮಿಡಿ ಥ್ರಿಲ್ಲರ್ ಚಿತ್ರ ‘ನುನಕುಳಿ’ ಮಲಯಾಳಂ ಮಾತ್ರವಲ್ಲ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿಯೂ ವೀಕ್ಷಣೆ ಮಾಡಬಹುದು. ನುನಕುಳಿಯಲ್ಲಿ ಬೇಸಿಲ್ ಜೋಸೆಫ್, ಗ್ರೇಸ್ ಆಂಟೋನಿ, ಸಿದ್ದಿಕಿ, ಬೈಜು ಸಂತೋಷ್, ನಿಖಿಲಾ ವಿಮಲ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ದೃಶ್ಯಂ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ಜಿತು ಜೋಸೆಫ್ ನುನಕುಳಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಕಥೆಯು ಐಟಿ ಅಧಿಕಾರಿಯ ಲ್ಯಾಪ್‌ಟಾಪ್ ವಶಕ್ಕೆ ಪಡೆದಾಗ, ಆತ ಅದರಲ್ಲಿನ ಅಶ್ಲೀಲ ವಿಡಿಯೋಗಳನ್ನು ಹೇಗೆ ಯಾರಿಗೂ ಗೊತ್ತಾಗದ ಹಾಗೆ ತೆಗೆದುಹಾಕುತ್ತಾನೆ ಎಂಬುದೇ ತಿರುಳು.