ಐಪಿಎಲ್ ನ 15ನೇ ಆವೃತ್ತಿಯು ಈಗಾಗಲೇ ಪ್ರಾರಂಭವಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈ ಬಾರಿಯ ಐಪಿಎಲ್ ವಿಶೇಷತೆ ತಮಗೆ ತಿಳಿದಿರಬಹುದು. ಏನೆಂದರೆ ರಾಯಲ್ ಚಾಲೆಂಜರ್ಸ್ ನ ಹೊಸ ತಂಡಕ್ಕೆ ಸ್ಪೂರ್ತಿ ನೀಡಲು ಹೊಸ ಗೀತೆಯನ್ನು ರಚಿಸಲಾಗಿದೆ.
ಮಹಿಳಾ ಸಾರಥ್ಯದಲ್ಲಿ ಮೂಡಿಬಂದಿರುವ ಈ ಗೀತೆಯಿಂದ ಮಾರ್ಚ್ ತಿಂಗಳಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಣೆಗೆ ಮೆರಗು ಬಂದಿದೆ.
ಈ ವಿಶೇಷ ಗೀತೆಯು ಈ ಹೊಸ ಆವೃತ್ತಿಯ ಹೊಸ ತಂಡದ ರಾಯಲ್ ಲಾಯಲ್ ಅಭಿಮಾನಿಗಳಿಗೆ ಸಮರ್ಪಿಸಲಾಗಿದೆ.
ಪ್ರತಿ ಬಾರಿಯ ಐಪಿಎಲ್ ಸೀಸನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇರುವಷ್ಟು ಅಭಿಮಾನಿಗಳು ಬೇರೆ ಯಾವ ತಂಡಕ್ಕೂ ಇರುವುದಿಲ್ಲ ಇದ್ದರೂ ಸಹ ಆರ್ಸಿಬಿ ತಂಡದ ಮ್ಯಾಚುಗಳನ್ನು ನೋಡಲು ಜಗತ್ತಿನ ಮೂಲೆ ಮೂಲೆಗಳಿಂದ ಅಭಿಮಾನಿಗಳು ಸೇರುತ್ತಾರೆ.
ಈ ಬಾರಿ ಈ ಸಲ ಕಪ್ ನಮ್ದೇ ಎಂದು ಗರ್ವದಿಂದ ತಮ್ಮ ನೆಚ್ಚಿನ ತಂಡಕ್ಕೆ ಸ್ಪೂರ್ತಿ ನೀಡಿ ಅಭಿಮಾನಿಗಳ nishtege ಗೌರವ ಸಲ್ಲಿಸಲು ಬೆಂಗಳೂರಿನ ಹೊಸ ಪ್ರತಿಭೆಗಳು ಗೀತೆಯನ್ನು ರಚಿಸಿದ್ದಾರೆ.
ಬೆಂಗಳೂರಿನ ಐಟಿ ಉದ್ಯೋಗಿ ಯಾಗಿರುವ ಶ್ರೀಮತಿ ಸುಭಾಷಿಣಿ ಶ್ರೀನಿವಾಸ್ ರವರ ನಿರ್ಮಾಣದಲ್ಲಿ ಹಾಗೂ ಶ್ರೀರಾಮ್ ಗಂಧರ್ವ ರವರ ಸಂಗೀತ ಸಂಯೋಜನೆ, ವಸಂತ ಮತ್ತು ವಿನುತ ರವರ ನಿರ್ದೇಶನದಲ್ಲಿ ಗೀತೆಯೂ ಹೊರಬಂದಿದ್ದು ವಿಶಾಲ ರವರು DoP ಮತ್ತು ಎಡಿಟಿಂಗ್ ಮಾಡಿದ್ದಾರೆ.
ಗೀತೆಯ ಬರಹಗಾರರು rapper ಗುಬ್ಬಿ ಹಾಗೂ ಧ್ವನಿಗೂಡಿಸಿರುವ ವರು ಅನಿರುದ್ಧ ಶಾಸ್ತ್ರಿ ಮತ್ತು ಅಭಿಷೇಕ್.
ಗೀತೆಯು ಪ್ರತಿಯೊಬ್ಬ ರಾಯಲ್ ಲಾಯಲ್ ಅಭಿಮಾನಿಗಳ ಹೃದಯಕ್ಕೆ ಹತ್ತಿರ ವಾಗಲಿದೆ ಎಂದು ನಿರ್ಮಾಪಕರು ವ್ಯಕ್ತಪಡಿಸಿದ್ದಾರೆ.
ವಿಡಿಯೋ ಸಾಂಗ್ ನಲ್ಲಿ ಟೀಮ್ ಇಂಡಿಯಾ ಹಾಗೂ ಆರ್ಸಿಬಿ ತಂಡದ ಸೂಪರ್ ಫ್ಯಾನ್ ಸುಕುಮಾರ್ ಹಾಗೂ ಕಲಾವಿದ ಅನಿಲ್ ಭೋಗ ಶೆಟ್ಟಿ ರವರು ಕಾಣಿಸಿಕೊಂಡಿರುವುದು ವಿಶೇಷವಾಗಿದೆ.
ವಿಡಿಯೋ ಸಾಂಗ್ ದಿನಾಂಕ 24 ಮಾರ್ಚ್ 2022 ರಂದು ಯೂಟ್ಯೂಬ್ನಲ್ಲಿ ಡಿ ಬಿಟ್ಸ್ ಲೇಬಲ್ ಅಡಿಯಲ್ಲಿ ಬಿಡುಗಡೆಗೊಳಿಸಲಾಗಿದೆ.
ವಿಡಿಯೋ ಸಾಂಗ್ ಬಗ್ಗೆ ಸ್ಯಾಂಡಲ್ವುಡ್ ನಟರಾದ ಡಾಲಿ ಧನಂಜಯ್, ಪ್ರವೀಣ್ ತೇಜ್, ಪಾಯಲ್ ಚಂಗಪ್ಪ ಮೆಚ್ಚುಗೆ ವ್ಯಕ್ತಪಡಿಸಿ ಶುಭಕೋರಿದ್ದಾರೆ.
ಗೀತೆಯು ಆರ್ಸಿಬಿ ತಂಡದಲ್ಲಿ ಹಾಗೂ ರಾಯಲ್ ಅಭಿಮಾನಿಗಳಲ್ಲಿ ಹೊಸ ಉತ್ಸಾಹವನ್ನು ತಂದು ಛಾಪು ಮೂಡಿಸುವ ನಿರೀಕ್ಷೆಯಲ್ಲಿದೆ.