ಕಳೆದ ವಾರ ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ಪ್ರದೇಶದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಅಪಾರವಾದ ಕಾಡು ನಾಶವಾಯಿತು. ರಾಜ್ಯದಲ್ಲೇ ಪ್ರಸಿದ್ಧಿಯನ್ನು ಪಡೆದಿದ್ದ ಬಂಡೀಪುರ ಅರಣ್ಯ ಪ್ರದೇಶ ಹುಲಿ ಸಂರಕ್ಷಣಾ ಪ್ರದೇಶವೂ ಸಹ ಹೌದು. ಬಂಡೀಪುರದಲ್ಲಿ ಆದ ಈ ಬೆಂಕಿ ಅವಘಡದಿಂದ ಸಾವಿರಾರು ಎಕರೆ ಪ್ರದೇಶದ ಅರಣ್ಯ ಪ್ರದೇಶ ನಾಶವಾಗಿದ್ದು ದೊಡ್ಡ ನಷ್ಟವೇ ಸಂಭವಿಸಿದೆ.
ಇನ್ನು ಈ ಬೆಂಕಿ ಕಾಣಿಸಿಕೊಂಡಿದ್ದರ ಹಿಂದಿನ ಕೈ ಯಾರದ್ದು ಎಂಬ ಕುತೂಹಲ ಮತ್ತು ಪ್ರಶ್ನೆ ಎಲ್ಲರಲ್ಲಿಯೂ ಮೂಡಿತ್ತು. ಕಾಡ್ಗಿಚ್ಚು ಸಂಭವಿಸಿದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿ ಕೊಳ್ಳುವುದಿಲ್ಲ ಎಂಬ ಸಂಶಯದಲ್ಲಿ ತನಿಖೆ ಆರಂಭಿಸಿದ ಗೋಪಾಲಸ್ವಾಮಿ ಬೆಟ್ಟ ವಲಯದ ಆರ್ ಎಫ್ಒ ಪುಟ್ಟಸ್ವಾಮಿ ಅವರು ಇದೀಗ ಸಂಶಯಾಸ್ಪದ ಆರೋಪಿಯನ್ನು ಬಂಧಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕಳ್ಳಿಪುರ ನಿವಾಸಿಯಾದ ಅರುಣ್ ಕುಮಾರ್ ಎಂಬಾತ ಫೆ.22 ರಂದು ಬಂಡೀಪುರ ಅರಣ್ಯಕ್ಕೆ ಬೆಂಕಿ ಇಟ್ಟು ತಲೆಮರೆಸಿಕೊಂಡಿದ್ದನು. ಬೆಂಕಿ ಹತ್ತಿದ ತಕ್ಷಣ ಅರಣ್ಯ ವಾಚಕರು ಕಾಡಿಗೆ ನುಗ್ಗಿದ ಪರಿಣಾಮ ಅರುಣ್ ಕುಮಾರ್ ತಲೆಮರೆಸಿಕೊಂಡು ಪಕ್ಕದ ಗ್ರಾಮದ ಸಂಬಂಧಿಕರ ಮನೆಯಲ್ಲಿ ಅಡಗಿ ಕುಳಿತಿದ್ದನು. ಇದೀಗ ಈತನ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಬಂಧಿಸಿತ್ತು ವಿಚಾರಣೆಯನ್ನು ನಡೆಸುತ್ತಿದ್ದಾರೆ.