HomeNews"ನಿಲ್ಲಬೇಡ" ಹಾಡಿನ ಮೂಲಕ ಬಂದರು ಉತ್ತರ ಕರ್ನಾಟಕದ ಪ್ರತಿಭೆ ಸುನಿಧಿ ನೀಲೊಪಂತ್ .

“ನಿಲ್ಲಬೇಡ” ಹಾಡಿನ ಮೂಲಕ ಬಂದರು ಉತ್ತರ ಕರ್ನಾಟಕದ ಪ್ರತಿಭೆ ಸುನಿಧಿ ನೀಲೊಪಂತ್ .

ಹಲವು ಗಣ್ಯರಿಂದ ಬಿಡುಗಡೆಯಾಯಿತು ಅಭಿಷೇಕ್ ಮಠದ್ ನಿರ್ದೇಶಿಸಿ, ಚಂದನ್ ಶೆಟ್ಟಿ ಸಂಗೀತ ನೀಡಿರುವ ಈ ಮ್ಯೂಸಿಕ್ ಆಲ್ಬಂ .

ಉತ್ತರ ಕರ್ನಾಟಕದ ಯುವ ಪ್ರತಿಭೆ ಸುನಿಧಿ ನಿಲೋಪಂತ್ ನಟಿಸಿರುವ, ಅಭಿಷೇಕ್ ಮಠದ್ ನಿರ್ದೇಶಿಸಿರುವ ಹಾಗೂ ಚಂದನ್ ಶೆಟ್ಟಿ ಹಾಡಿ, ಸಂಗೀತ ಸಂಯೋಜಿಸಿರುವ “ನಿಲ್ಲಬೇಡ” ಡ್ಯಾನ್ಸ್ ಮ್ಯೂಸಿಕ್ ಆಲ್ಬಂ ಇತ್ತೀಚಿಗೆ ಹಲವು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಯಾಯಿತು. ‘ಕಪ್ ಗೆಲ್ಲೋದು ಮುಖ್ಯ ಅಲ್ಲ. ಮನಸ್ಸುಗಳನ್ನು ಗೆಲ್ಲೋದು ಮುಖ್ಯ’ ಎನ್ನುವ ಅಡಿ ಬರಬರಹ ಈ ಹಾಡಿಗಿದೆ. ನಿರ್ದೇಶಕ ಅಭಿಷೇಕ್ ಮಠದ್ ಅವರೆ ನೃತ್ಯ ನಿರ್ದೇಶನ ಮಾಡಿರುವ ಈ ಹಾಡಿಗೆ ಸುನಿಧಿ ಅವರ ಅಜ್ಜಿ ಪ್ರತಿಭಾ ನಿಲೋಪಂತ್ ಬಂಡವಾಳ ಹಾಕಿದ್ದಾರೆ.

ಹರಿಣಿ ಶ್ರೀಕಾಂತ್, ಅನುಪ್ರಭಾಕರ್ ಆಸ್ಗರ್ , ಶಶಿ ಮಾಸ್ಟರ್ ,ಅಭಿಷೇಕ್ ಮಠದ್ ಸೇರಿದಂತೆ ಮತ್ತಿತರರು ಸುನಿಧಿ ಜೊತೆಗೆ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಹಾಡು ಬಿಡುಗಡೆ ನಂತರ ಗಣ್ಯರು ಹಾಗೂ ಮ್ಯೂಸಿಕ್ ಸಾಂಗ್ ನ ಸದಸ್ಯರು ಮಾತನಾಡಿದರು.

ನಿರ್ಮಾಪಕರ ಸಂಘದ ಆಧ್ಯಕ್ಷ ಉಮೇಶ್ ಬಣಕಾರ್ ಮಾತನಾಡಿ, ಯುವ ಪ್ರತಿಭೆ ಸುನಿಧಿ ಮೈನಲ್ಲಿ ಮೂಳೆ ಇಲ್ಲದವರಂತೆ ನಟಿಸಿದ್ದಾರೆ. ಚಂದನ್ ಶೆಟ್ಟಿ ಅವರ ಗಾಯನ ವಯಸ್ಸಾದವರೂ ಹೆಜ್ಜೆ ಹಾಕುವ ಹಾಗಿದೆ. “ಬಳೆ ಪೇಟೆ” ಚಿತ್ರೀಕರಣದ ವೇಳೆ ಅಭಿಷೇಕ್ ಮಠದ್ ಅವರ ಕೆಲಸ ನೋಡಿದ್ದೆ. ಒಳ್ಳೆಯ ಕೆಲಸಗಾರ. ಇನ್ನು “ನಿಲ್ಲಬೇಡ ” ಆಲ್ಬಂ ಯುವ ಪ್ರತಿಭೆಗಳಿಗೆ ಮತ್ತಷ್ಟು ಪ್ರೋತ್ಸಾಹ ಸಿಗಲಿ, ರಾಜ್ಯದಲ್ಲಿ ಅಮದು ಮಾಡಿಕೊಂಡವರಿಗೆ ರೆಡ್ ಕಾರ್ಪೆಟ್ ಹಾಕ್ತಾರೆ‌. ಆದರೆ ಇಲ್ಲಿನ ಪ್ರತಿಭೆಗಳಿಗೆ ಅವಕಾಶ ಕಡಿಮೆ. ದೇಶದ ಯಾವುದೇ ಭಾಷೆಯಲ್ಲಿ ಅವಕಾಶ ಸಿಕ್ಕರೂ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಹಾಡು ಚೆನ್ನಾಗಿ ಮೂಡಿ ಬಂದಿದೆ. ಕಲಾವಿದರು, ತಂತ್ರಜ್ಞರನ್ನು ಅಮದು‌ ಮಾಡಿಕೊಳ್ಳುವ ಸಮಯದಲ್ಲಿ ಇಲ್ಲಿನ ಪ್ರತಿಭೆಗಳು ಬೇರೆ ಭಾಷೆಗೆ ಹೋಗುವಂತಾಗಲಿ ಎಂದರು ಅತಿಥಿಯಾಗಿ ಆಗಮಿಸಿದ್ದ ನಟ ನವೀನ್ ಶಂಕರ್.

ಈ ಹಾಡು ಮೂಡಿ ಬರಲು ಸುನಿಧಿ ಅವರ ಪ್ರತಿಭೆಯೇ ಕಾರಣ. ಹಾಡು‌ ಚೆನ್ನಾಗಿ ಬಂದಿದೆ. ಯುವ ಪ್ರತಿಭೆಗೆ ಮತ್ತಷ್ಟು ಅವಕಾಶ ಸಿಗಲಿ. “ನಿಲ್ಲಬೇಡ” ಹಾಡಿಗೆ ಡಾಲಿ ಧನಂಜಯ, ನೃತ್ಯ ನಿರ್ದೇಶಕ ಹರ್ಷ ಮತ್ತಿತತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು ನಿರ್ದೇಶಕ ಅಭಿಷೇಕ್ ಮಠದ್.

ಹಾಡಿನಲ್ಲಿ ಕಾಣಿಸಿಕೊಂಡಿರುವ ಸುನಿಧಿ ನಿಲೋಪಂತ್ ಮಾತನಾಡಿ, ಮೊದಲು ಚಿತ್ರೀಕರಣಕ್ಕೆ ಹೋದಾಗ ಭಯವಾಗಿತ್ತು. ಈ ಹಾಡನ್ನು ಎಲ್ಲಾ ನೃತ್ಯಪಟುಗಳಿಗೆ ಅರ್ಪಣೆ ಮಾಡುತ್ತೇನೆ. ನಿಮ್ಮ ಕನಸನ್ನು ನನಸು ಮಾಡಲು ಮುನ್ನುಗ್ಗಿ ಎಂದರು

ಹಾಡಿಗೆ ದ್ವನಿಯಾಗಿರುವ ಚಂದನ್ ಶೆಟ್ಟಿ ಮಾತನಾಡಿ , ಆಗಿನ್ನು ವಿಚ್ಚೇಧನ ಆಗಿ ಮೂರು ನಾಲ್ಕು ವಾರವಾಗಿತ್ತು. ಆ ಸಮಯದಲ್ಲಿ ಅಭಿಷೇಕ್ ಈ ಹಾಡಿನ ಬಗ್ಗೆ ಮಾತನಾಡಿದರು. ಹಾಡಿ, ಸಂಗೀತ ನೀಡುವಂತೆ ಮನವಿ ಮಾಡಿದರು. ಖಿನ್ನತೆಗೆ ಒಳಗಾದ ಸಮಯದಲ್ಲಿ “ನಿಲ್ಲಬೇಡ” ಹಾಡು ಹಾಡಿದ್ದೇನೆ. ಜೀವನದಲ್ಲಿ ಏನೇ ಕಷ್ಟ ಬಂದರೂ ‘ನಿಲ್ಲಬೇಡ’ ಮುಂದುವರಿಯಬೇಕು ಎಂದು ಹೇಳಿದರು

ಹಾಡು ಚೆನ್ನಾಗಿ ಬಂದಿದೆ. ಚಿತ್ರೀಕರಣದ ಸಮಯದಲ್ಲಿ ಸುನಿಧಿ ಅವರ ಪ್ರತಿಭೆ ನೋಡಿದ್ದೆ. ಸುನಿಧಿಗೆ ಒಳ್ಳೆಯದಾಗಲಿ ಎಂದರು ಹಾಡಿನಲ್ಲಿ ಅಭಿನಯಿಸಿರುವ ನಟಿ ಹರಿಣಿ.

ನಿರ್ಮಾಪಕಿ ಪ್ರತಿಭಾ ನೀಲೋಪಂತ್ ಮಾತನಾಡಿ ಹಾಡಿನ ಚಿತ್ರೀಕರಣ ಚೆನ್ನಾಗಿ ಮೂಡಿಬಂದಿದೆ. ಮೊಮ್ಮೊಗಳು ಚಿಕ್ಕ ವಯಸ್ಸಿನಿಂದಲೇ ಕಲೆ ಮೈಗೂಡಿಸಿಕೊಂಡಿದ್ದಳು, ಹೀಗಾಗಿ ಆಲ್ಬಂ ಹಾಡು ಚೆನ್ನಾಗಿ ಮೂಡಿ ಬಂದಿದೆ ಸಹಕಾರ ಇರಲಿ ಎಂದು ಕೇಳಿಕೊಂಡರು

ಸುನಿಧಿ ತಾಯಿ ಶೀತಲ್, ತಂದೆ ಶ್ರೀಹರ್ಷ ನಿಲೋಪಂತ್ ಮಗಳ ಸಾಧನೆಗೆ ಸಂಸತಸಪಟ್ಟರು.

ಹಾಡು ಬರೆದಿರುವ ವಿಜಯ್ ಈಶ್ವರ್, ಛಾಯಾಗ್ರಾಹಕ ಸಂಕೇತ್, ಸಂಕಲನಕಾರ ರಂಜೀತ್ ರಾಸ ಸೇರಿದಂತೆ ಮತ್ತಿತರು ಹಾಡಿನ ಬಗ್ಗೆ ಮಾಹಿತಿ ಹಂಚಿಕೊಂಡರು. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಈ ಹಾಡು ನೋಡಲು ಲಭ್ಯವಿದೆ.

Must Read

spot_img

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805
Share via
Copy link
Powered by Social Snap