ನೀವು ಹುವಾವೇ ಅಥವಾ ಹಾನರ್ ಕಂಪೆನಿಯ ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆಯಲ್ಲಿದ್ದರೆ ಬಿಟ್ಟುಬಿಡಿ. ಏಕೆಂದರೆ, ಅಮೆರಿಕಾ ಮತ್ತು ಚೀನಾದ ನಡುವೆ ನಡೆಯುತ್ತಿರುವ ವಾಣಿಜ್ಯ ಯುಧ್ದದಿಂದಾಗಿ ಹುವಾವೇ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಭಾರೀ ಸಮಸ್ಯೆಯೊಂದು ಎದುರಾಗಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಹುವಾವೇ ಮೊಬೈಲ್ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಿದ ನಂತರ ಗೂಗಲ್ ಸಂಸ್ಥೆ ಹುವಾವೇ ಸಂಸ್ಥೆ ಜೊತೆ ಸಂಬಂಧ ಕಡಿದುಕೊಂಡಿದೆ.
ಹೌದು, ಚೀನೀ ಕಂಪನಿ ಹುವಾವೇಗೆ ಪ್ರಮುಖ ಸಾಫ್ಟ್ವೇರ್ ಮತ್ತು ತಾಂತ್ರಿಕ ಸೇವೆಗಳ ವಿತರಣೆಯನ್ನು ಅಮಾನತುಗೊಳಿಸುವುದರ ಮೂಲಕ ಗೂಗಲ್ ಕಂಪೆನಿ ಶಾಕಿಂಗ್ ನ್ಯೂಸ್ ನೀಡಿದೆ.
ಇನ್ಮುಂದೆ ಹುವಾವೇ ಕಂಪೆನಿಯ ಯಾವುದೇ ಸ್ಮಾರ್ಟ್‌ಫೋನಿನಲ್ಲಿ ಗೂಗಲ್ ಪ್ಲೇ, ಗೂಗಲ್ ಪ್ಲೇ ಸ್ಟೋರ್, ಜಿ-ಮೇಲ್, ಗೂಗಲ್ ಮ್ಯಾಪ್ ಹಾಗೂ ಯೂಟ್ಯೂಬ್ ಆಪ್ಗಳು ಲಭ್ಯವಿರುವುದಿಲ್ಲ ಎಂದು ಗೂಗಲ್ ಕಂಪೆನಿ ತಿಳಿಸಿದ್ದು, ಪ್ರಸ್ತುತ ಹುವಾವೆ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮಾತ್ರ ಸ್ವಲ್ಪ ರಿಲೀಫ್ ನೀಡಿದೆ.
ಆದರೆ, ನೀವು ಈಗಾಗಲೇ ಹುವಾವೇ ಸಂಸ್ಥೆಯ ಮೊಬೈಲ್ ಬಳಕೆ ಮಾಡುತ್ತಿದ್ದರೂ ಸಹ ನೀವು ಮೊಬೈಲ್ ಬದಲಾವಣೆ ಮಾಡಲು ಸಿದ್ಧರಾಗಿ. ಏಕೆಂದರೆ ಇನ್ನು ಕೆಲ ದಿನಗಳು ಮಾತ್ರ ನಿಮಗೆ ಈ ಸೇವೆ ದೊರೆಯುವ ಸಾಧ್ಯತೆಗಳು ದಟ್ಟವಾಗಿದೆ.
ಹಾಗಾದರೆ, ಏನಿದು ಶಾಕಿಂಗ್ ವರದಿ?, ಹುವಾವೆಗೆ ಅಮಾನತುಗೊಳಿಸಲಾಗಿರುವ ಸಾಫ್ಟ್ವೇರ್ ಮತ್ತು ತಾಂತ್ರಿಕ ಸೇವೆಗಳ ವಿತರಣೆ ಯಾವುದು?, ಇದರಿಂದ ಹುವಾವೆ ಹಾಗೂ ಇತರೆ ಸ್ಮಾರ್ಟ್‌ಫೋನ್ ಬಳಕೆದಾರರು ಎದುರಿಸಬೇಕಾದ ಸಮಸ್ಯೆಗಳೇನು ಎಂಬುದನ್ನು ಮುಂದೆ ಓದಿ ತಿಳಿಯಿರಿ.
ಅಮೆರಿಕಾದ ರಾಷ್ಟ್ರೀಯ ಭದ್ರತೆಗೆ ಮಹತ್ವದ ಅಪಾಯ ಉಂಟುಮಾಡುವ ಕಾರಣ ಯುಎಸ್ ರಫ್ತು ನಿಯಂತ್ರಣಗಳಿಗೆ ಒಳಪಟ್ಟಿರುವ 44 ಚೀನೀ ಘಟಕಗಳ ಪಟ್ಟಿಯಲ್ಲಿ ಹುವಾವೇ ಸೇರಿದೆ. ಹಾಗಾಗಿ, ಮೊದಲೇ ಹೇಳಿದಂತೆ ಗೂಗಲ್ ಸಂಸ್ಥೆ ಚೀನೀ ಕಂಪನಿ ಹುವಾವೆಗೆ ಪ್ರಮುಖ ಸಾಫ್ಟ್ವೇರ್ ಮತ್ತು ತಾಂತ್ರಿಕ ಸೇವೆಗಳ ವಿತರಣೆಯನ್ನು ಅಮಾನತುಗೊಳಿಸಿದೆ.
ಇದರಿಂದ ಹುವಾವೇ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದರೆ, ಹುವಾವೇ ಕಂಪೆನಿಗೆ ದೊಡ್ಡ ಹೊಡೆತ ಇದಾಗಿದೆ.