HomeNews"ಬೆಲ್ ಬಟನ್" ಗೆ ಚಾಲನೆ ನೀಡಿದ ಸುನೀಲ್ ಕುಮಾರ್ ದೇಸಾಯಿ.

“ಬೆಲ್ ಬಟನ್” ಗೆ ಚಾಲನೆ ನೀಡಿದ ಸುನೀಲ್ ಕುಮಾರ್ ದೇಸಾಯಿ.

ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ನಿರ್ದೇಶಕರಲ್ಲಿ
ಸುನೀಲ್ ಕುಮಾರ್ ದೇಸಾಯಿ ಸಹ ಒಬ್ಬರು.

ಅಂತಹ ಉತ್ತಮ ನಿರ್ದೇಶಕರಿಂದ ಇತ್ತೀಚೆಗೆ “ಬೆಲ್ ಬಟನ್” ಚಿತ್ರದ ಪೋಸ್ಟರ್ ಅನಾವರಣವಾಗಿದೆ.

ಕನ್ನಡದ ಖ್ಯಾತ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ, ಹಾಗು ರಂಗಭೂಮಿ ನಟರಾಗಿ ಅನುಭವವಿರುವ ಲ‌ಕ್ಷ್ಮಿನರಸಿಂಹ. ಎಂ “ಬೆಲ್ ಬಟನ್” ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಲವ್ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಫ್ರೆಶ್ ಫಿಲಂಸ್ ಮೂಲಕ ಗಂಗರಾಜ್ ಗೌಡ ಆರ್, ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಎ.ಆರ್ ರೆಹಮಾನ್ ಬಳಿ ಕೆಲಸ ಮಾಡಿರುವ ಎಸ್ ಎಂ ರಾಹಿತ್ಯ ಸಂಗೀತ ನೀಡುತ್ತಿದ್ದಾರೆ. ಗೌತಮ್ ನಾಯಕ್ ಛಾಯಾಗ್ರಹಣ ಹಾಗೂ ಎಸ್ ಆಕಾಶ್ ಮಹೇಂದ್ರಕರ್
ಸಂಕಲನ ಈ ಚಿತ್ರಕ್ಕಿದೆ.

ಕಲಾವಿದರ ಆಯ್ಕೆಯಲ್ಲಿ ‌ತೊಡಗಿರುವ ನಿರ್ದೇಶಕ ಲಕ್ಷ್ಮಿನರಸಿಂಹ ಅವರು, ಮೇನಲ್ಲಿ ಚಿತ್ರೀಕರಣ ಆರಂಭಿಸುವುದಾಗಿ ತಿಳಿಸಿದ್ದಾರೆ.

Must Read

spot_img
Share via
Copy link
Powered by Social Snap