HomeNewsಸೋತ್ರೆ ಮುಂದಿನ ಹೆಜ್ಜೆಗೆ ದಾರಿ ಆಗುತ್ತೆ , ಗೆದ್ರೆ ಮುಂದೆ ಮಾಡೋದೆಲ್ಲ ಇತಿಹಾಸ ಆಗುತ್ತೆ :...

ಸೋತ್ರೆ ಮುಂದಿನ ಹೆಜ್ಜೆಗೆ ದಾರಿ ಆಗುತ್ತೆ , ಗೆದ್ರೆ ಮುಂದೆ ಮಾಡೋದೆಲ್ಲ ಇತಿಹಾಸ ಆಗುತ್ತೆ : ಹಿಂಬಾಲಕ

ನಮ್ಮನ್ನ ಹಿಂಬಾಲಸೋ ಪ್ರತಿಯೊಬ್ಬರು ಅಭಿಮಾನಿಯೇ ಆಗ್ಬೇಕಿಲ್ಲ , ಅದ್ರಲ್ಲಿ ಸಂಚು ಹಾಕೋರು ಸಾವಿರ ಜನ ಇರ್ತಾರೆ , ಯಾವಾಗ್ಲೂ ನಾವು ಅಲರ್ಟ್ ಆಗಿ ಇರ್ಬೇಕು : ಹಿಂಬಾಲಕ

ತುಂಬಾ ಕನಸುಗಳೊಂದಿಗೆ ಚಿತ್ರ ಮಾಡಬೇಕೆಂಬ ಆಶಯ ಹೊತ್ತು ಹತ್ತಾರು ವರುಷ ಚಿತ್ರರಂಗದಲ್ಲಿ ಕೆಲಸ ಮಾಡಿ ತರಬೇತಿ ಪಡೆದು, ಹಲವು ಏಳುಬೀಳುಗಳ ನಂತರ ತಾವೇ ತಮ್ಮ ಸ್ನೇಹಿತರೊಡನೆ ಒಡಗೂಡಿ ನಿರ್ಮಿಸಿದ ಚಿತ್ರ “ಹಿಂಬಾಲಕ”, ಈ ಚಿತ್ರದ ನಿರ್ದೇಶಕರಾದ ಅನೀಶ್ ಪರಮೇಶ್ವರನ್ ಅವರೇ ತಮ್ಮ ಸಂಸ್ಥೆಯಡಿ ನಿರ್ಮಿಸಿರುವ ಚಿತ್ರ. ಇದರ ಜೊತೆ ಸಂತೋಷ್ ಆರ್ , ದರ್ಶನ ಪಿರಿಯಾಪಟ್ಟಣ , ಪ್ರದೀಪ್ ಎ ಸಿ , ವಿನುತಾ ಎಚ್ ಆರ್, ನಾಗರಾಜು ಪಡುಕೋಣೆ , ಸಿದ್ದೇಶ್ ಭಾಗೋಡಿ, ಅಶ್ವಿನಿ ಯೋಗೀಶ್ ಮತ್ತು ದಿವಾಕರ್ ಎಂ ಅವರು ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಚಿತ್ರ ಪೂರ್ಣ ಗೊಳಿಸಲು ಸಹಾಯ ಮಾಡಿರುತ್ತಾರೆ.

ನಿರ್ದೇಶಕರಾದ ಅನೀಶ್ ರವರು ,ಚಿಕ್ಕ ವಯಸ್ಸಿನಿಂದ ಸಿನಿಮಾದ ಆಸೆಯೊತ್ತು ಖಾಸಗಿ ಕಂಪೆನಿಗಳಲ್ಲಿ ಕೆಲಸಮಾಡುತ್ತ , ಬಿಡುವಿನ ಸಮಯದಲ್ಲಿ ಕಥೆ ಚಿತ್ರ ಕಥೆಗಳನ್ನು ಬರೆದು , ನಂತರ ನ್ಯಾಷನಲ್ ಅಕಾಡೆಮಿ ಆಫ್ ಸಿನಿಮಾ ಅಂಡ್ ಟೆಲಿವಿಷನ್ ಸಂಸ್ಥೆಯಲ್ಲಿ ನಿರ್ದೇಶನನ ತರಬೇತಿ ಪಡೆದು ಹಲವು ಕಿರು ಚಿತ್ರಗಳನ್ನು ಮಾಡಿ ನಂತರ ಖಾಸಗಿ ಕೆಲಸದಿಂದ ಸಂಪೂರ್ಣ ಹೊರಬಂದು , ಚಿತ್ರದ ನಿರ್ಮಾಣದ ಜೊತೆಗೆ ಹಲವು ವರ್ಷಗಳ ತರಬೇತಿ ಮತ್ತು ಪ್ರಯತ್ನಗಳೊಂದಿಗೆ ಚಿತ್ರಕಥೆ, ಸಾಹಿತ್ಯ ,ಸಂಕಲನ , ವಿಶುಯಲ್ ಎಫೆಕ್ಟ್ಸ್ , ಚಿತ್ರದ ಡಿ ಐ, ಕೆಲಸವನ್ನು ಸಹ ತಾವೇ ಮಾಡಿದ್ದಾರೆ.
ಹಲವು ಕಿರು ಚಿತ್ರಗಳನ್ನು ಮಾಡಿ,ತಾವು ಪೂರ್ಣಚಿತ್ರ ಮಾಡುವ ಮುನ್ನ ತಾವು ಪೂರ್ಣ ಚಿತ್ರ ಮಾಡಲು ಸಿದ್ಧರಿದ್ದೇವೆಯೇ ಇಲ್ಲವೇ ಎಂದು ತಿಳಿಯಲು ಈ ಚಿತ್ರಕ್ಕೂ ಮುನ್ನ “ಏಪ್ರಿಲ್” ಎನ್ನುವ ಪ್ರಾಯೋಗಿಕ ಚಿತ್ರ ಮಾಡಿ, ಎಲ್ಲ ಕೆಲಸಗಳನ್ನು ಅರಿತ ನಂತರ ಮಾಡಿದ ಚಿತ್ರವಿದು.

ಅನೀಶ್ ಸಂಗಡದೊಂದಿಗೆ ಅದೇ ಸಂಸ್ಥೆಯಲ್ಲಿ ನಟನೆ ತರಬೇತಿ ಪಡೆಯುತ್ತಿದ್ದ ಈ ಚಿತ್ರದ ನಾಯಕ ನಟ “ರಿಹಾನ್ ಆರ್ಯ”, ಅನೀಶ್ ರವರ ಹಲವು ಪ್ರಾಜೆಕ್ಟ್ಸ್ ಗಳಲ್ಲಿ ಕೆಲಸ ಮಾಡಿರುತ್ತಾರೆ. ಈ ಚಿತ್ರದಲ್ಲಿ ನಟನೆಯೊಂದಿಗೆ ಚಿತ್ರದ ಕಥೆ ಚಿತ್ರಕಥೆ ಯಲ್ಲಿ ಅನೀಶ್ ರೊಂದಿಗೆ ಭಾಗಿಯಾಗಿ ಮಾಡಿರುತ್ತಾರೆ. ಈ ಚಿತ್ರದಲ್ಲಿ ಅನೀಶರವರಿಗೆ ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡಿರುತ್ತಾರೆ.

ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಹೃಷಿ ಪಾಂಡನ ಅವರು ನಟಿಸಿದ್ದಾರೆ, ಈ ಚಿತ್ರದ ಮೊದಲು ಬಹಳ ಚಿತ್ರದಲ್ಲಿ ಪ್ರಮುಖ ನಟರಾಗಿ ನಟಿಸಿ ಕನ್ನಡಕ್ಕೆ ಭರವಸೆಯ ನಾಯಕ ನಟನಾಗುವ ಎಲ್ಲ ಲಕ್ಷಣಗಳನ್ನು ಹೊಂದಿರುವ ಯುವಕ. ತಮ್ಮದೇ ಸ್ವತಃ ಉದ್ಯೋಗ ಇದ್ದರು , ಸಿನಿಮಾ ಮಾಡಲೇ ಬೇಕೆಂದು ಹಲವಾರು ಆಡಿಷನ್ ಗಳಲ್ಲಿ ಭಾಗಿಯಾಗಿ , ಬಹಳ ಶ್ರಮದಿಂದ ನಟನೆ ಆಶಯಹೊತ್ತು ಬಂದ ಯುವಕ, ಈ ಚಿತ್ರದ ನಿರ್ಮಾಣದಲ್ಲಿ ತುಂಬಾ ಸಹಾಯ ಮಾಡಿ , ಈ ಚಿತ್ರ ಪೂರ್ಣಗೊಳ್ಳಲು ಪ್ರಮುಖ ಪಾತ್ರಿಗಳಾಗಿರುತ್ತಾರೆ. ಈ ಚಿತ್ರದ ನಂತರ ಅನೀಶ್ ರವರ ನಿರ್ದೇಶನನ ನೇತೃತ್ವದಲ್ಲಿ , ಹೃಷಿಯವರು ನಾಯಕ ನಟನಾಗಿ ನಟಿಸುತ್ತಿದ್ದಾರೆ.

ಈ ಚಿತ್ರದ ನಾಯಕಿ ನಟಿ “ವಿಜಶ್ರೀ ಕಲ್ಬುರ್ಗಿ” ಯವರ ಮೊದಲು ಚಿತ್ರೀಕರಣಗೊಂಡ ಸಿನಿಮಾ ಇದು, ಆದರೆ ಹಿಂಬಾಲಕ ಚಿತ್ರವೂ ಹೆಚ್ಚು ವಿಶುಯಲ್ ಎಫೆಕ್ಟ್ಸ್ ಹೊಂದಿರುವ ಕಾರಣ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುವ ಸಮಯದಲ್ಲಿ ವಿಜಯಶ್ರೀ ನಟಿಸಿದ “ಸಾಲ್ಟ್” ಸಿನಿಮಾ ಇದಾಗಲೇ ಬಿಡುಗಡೆಗೊಂಡು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹಾಗು ಹಲವು ಚಿತ್ರಗಳು ಚಿತ್ರೀಕರಣದ ಹಂತದಲ್ಲಿ ಇವೆ.

ಈ ಚಿತ್ರಕ್ಕೆ ಭರವಸೆಯ ಛಾಯಾಗ್ರಾಹಕ ಮನೋಜ್ ಮಾರಿ , ನವ ಸಂಗೀತ ನಿರ್ದೇಶಕ ರೋಹಿತ್ ಸೊವೆರ್ ರವರು ಕೆಲಸ ಮಾಡಿದ್ದಾರೆ. ಅರ್ಫಾಜ್ ಉಲ್ಲಾಳ,ನಿಹಾಲ್ ತೊವ್ರೋ, ಅನುರಾಧ ಭಟ್ ರವರ ಹಿನ್ನೆಲೆ ಗಾಯನದಲ್ಲಿ ಉತ್ತಮ ಹಾಡುಗಳು ಮೂಡಿಬಂದಿವೆ.

ಪ್ರಮುಖ ಪಾತ್ರಗಳಲ್ಲಿ ರಾಜು, ಮಧು, ರಾಜೇಶ್, ವಿಶ್ವನಾಥ್ , ರಕ್ಷಿತ್ , ಅಮೃತ , ಪವನ್ ಅವರು ನಟಿಸಿದ್ದಾರೆ.

ಚಿತ್ರದ ಶೀರ್ಷಿಕೆಯಂತೆ ಚಿತ್ರವೂ ತುಂಬಾ ಕುತೂಹಲಕಾರಿ ಯೊಂದಿಗೆ , ಹಲವು ತಿರುವುಗಳೊಂದಿಗೆ ಪ್ರೇಕ್ಷಕರನ್ನು ಕಡೆ ಕ್ಷಣದವರೆಗೂ ಮನರಂಜಿಸುವ ಚಿತ್ರ ಎಂಬ ಬರವಸೆಯಲ್ಲಿದೆ ಚಿತ್ರ ತಂಡ.

ಚಿತ್ರ ಎಲ್ಲ ಕಾರ್ಯಗಳು ಮುಗಿದಿದ್ದು ಸೆನ್ಸಾರ್ ಮಂಡಳಿಯ ಪ್ರಶಂಸೆಯೊಂದಿಗೆ ಯಾವುದೇ ಕಟ್ ಇಲ್ಲದೆ “U/A” ಪ್ರಮಾಣದೊಂದಿಗೆ ಬಿಡುಗಡೆಗೆ ಸಿದ್ಧವಾಗಿದೆ.

ಚಿತ್ರದ ಪ್ರಚಾರ ಕಾರ್ಯಗಳು ಭರದಿಂದ ಸಾಗಿವೆ. ಶೀಘ್ರದಲ್ಲೇ ಚಿತ್ರದ ಟ್ರೈಲರ್ , ಹಾಡುಗಳು ಬಿಡುಗಡೆಯಾಗಲಿವೆ.

Must Read

spot_img

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1745

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1745
Share via
Copy link
Powered by Social Snap