HomeNewsದಕ್ಷಿಣ ಭಾರತದ ಪ್ರಖ್ಯಾತ ನಟರಾದ ನಾಸರ್ ಅವರು ಶುವಾಜಿ ಸುರತ್ಕಲ್ – 2 (SS2) ಚಿತ್ರದಲ್ಲಿ

ದಕ್ಷಿಣ ಭಾರತದ ಪ್ರಖ್ಯಾತ ನಟರಾದ ನಾಸರ್ ಅವರು ಶುವಾಜಿ ಸುರತ್ಕಲ್ – 2 (SS2) ಚಿತ್ರದಲ್ಲಿ

ದಕ್ಷಿಣ ಭಾರತದ ಪ್ರಖ್ಯಾತ ನಟರಾದ ನಾಸರ್ ಅವರು ಶುವಾಜಿ ಸುರತ್ಕಲ್ – 2 (SS2) ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಶಿವಾಜಿ ಸುರತ್ಕಲ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಇವರ ಪಾತ್ರದ ಹೆಸರು ವಿಜೇಂದ್ರ ಸುರತ್ಕಲ್. ತಂದೆ ಮಗನ ಬಾಂಧವ್ಯವದ ಬಗ್ಗೆ ಹೇಳುವ ಪಾತ್ರ ಇದಾಗಿದೆ. ಬಹಳ ವರ್ಷಗಳ ಕಾಲದಿಂದ ರಮೇಶ್ ಅರವಿಂದ್ ಮತ್ತು ನಾಸರ್ ಒಬ್ಬರಿಗೊಬ್ಬರು ಪರಿಚಯ ಇದ್ದರೂ ಇದೇ ಮೊದಲ ಬಾರಿಗೆ ಇಬ್ಬರೂ ಜೊತೆಯಲ್ಲಿ ತೆರೆಯ ಮೇಲೆ ಕಾಣಿಸುತ್ತಿರುವುದು ಈ ಚಿತ್ರದ ವಿಶೇಷತೆಯಾಗಿದೆ.

ಇನ್ನು ಚಿತ್ರದ ಚಿತ್ರೀಕರಣ ಡಿಸೆಂಬರ್ 13ರಿಂದ ಬೆಂಗಳೂರಿನ ಸುತ್ತ ಮುತ್ತ ನಡೆಯುತ್ತಿದ್ದು, ಆಕಾಶ್ ಶ್ರೀವತ್ಸ ಕಥೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ರೆಖಾ ಕೆ ಎನ್ ಮತ್ತು ಅನುಪ್ ಗೌಡ ನಿರ್ಮಿಸುತ್ತಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಚಿತ್ರದ ಉಳಿದ ತಾರಾಗಣದಲ್ಲಿ ರಾಧಿಕ ನಾರಾಯಣ್, ರಾಘು ರಮಣಕೊಪ್ಪ, ವಿದ್ಯಾ ಮೂರ್ತಿ ಮತ್ತು ವಿನಾಯಕ್ ಜೋಷಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಛಾಯಾಗ್ರಹಣದ ಹೊಣೆಯನ್ನು ಗುರುಪ್ರಸಾದ್ ಎಮ್.ಜಿ ಅವರು ನಿರ್ವಹಿಸುತ್ತಿದ್ದು ನಕುಲ್ ಅಭಯಂಕರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಚಿತ್ರದ ಪ್ರಮುಖ ಭಾಗದ ಚಿತ್ರೀಕರಣ 2022ರ ಜನವರಿಯ ಕೊನೆಯಲ್ಲಿ ಮುಗಿಯುತ್ತದೆ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ತಿಳಿಸಿದ್ದಾರೆ.

Must Read

spot_img
Share via
Copy link
Powered by Social Snap