ಮಾಧ್ಯಮ ಮಿತ್ರರಿಗೆಲ್ಲ ಯುಗಾದಿ ಹಬ್ಬದ ಶುಭಾಷಯಗಳನ್ನು ಕೋರುತ್ತಾ, ಶಿವಾಜಿ ಸುರತ್ಕಲ್-2 ಚಿತ್ರದ ಒಂದಷ್ಟು ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಕರ್ನಾಟಕದ ಹಲವು ಭಾಗಗಳಲ್ಲಿ ಚಿತ್ರೀಕರಣವನ್ನು ಈಗಾಗಲೇ ಮುಗಿಸಿದ್ದು, ಶೇಖಡ 75ರಷ್ಟು ಚಿತ್ರೀಕರಣ ಮುಗಿದಿದೆ. ಇನ್ನು ಕೆಲವು ದಿನಗಳಲ್ಲಿ ಚಿತ್ರೀಕರಣ ಮುಗಿಯಲಿದ್ದು, ಈಗ ಬೆಂಗಳೂರಿನಲ್ಲಿ ಹಾಡಿನ ಒಂದಷ್ಟು ಚಿತ್ರೀಕರಣ ನಡೆಯುತ್ತಿದ್ದು ಅದರ ತುಣುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಇನ್ನು ಚಿತ್ರದಲ್ಲಿ ರಮೇಶ್ ಅರವಿಂದ್ ಅವರ ಮುದ್ದಿನ ಮಗಳ ಆರಾಧ್ಯ ಎಂಬ ಹುಡುಗಿ ಕಾಣಿಸಿಕೊಳ್ಳುತ್ತಿದ್ದು ಅಪ್ಪ ಮಗಳ ಪಾತ್ರದಲ್ಲಿ ಭಾಂದವ್ಯವನ್ನು ಪ್ರೇಕ್ಷಕರು ತೆರೆಯ ಮೇಲೆ ಸವಿಯಬಹುದು. ಇನ್ನು ಪಾತ್ರವರ್ಗದಲ್ಲಿ ರಾಧಿಕ ನಾರಾಯಣ್, ತಮಿಳು ತೆಲುಗು ಖ್ಯಾತಿಯ ನಾಸರ್, ರಾಘು ರಮಣಕೊಪ್ಪ ಕಾಣಿಸಿಕೊಳ್ಳುತ್ತಿದ್ದು ವೀಣಾ ಸುಂದರ್, ಸುಮಂತ್ ಭಟ್ ಇವರೂ ಕೂಡ ತಾರಾಗಣಕ್ಕೆ ಸೇರಿದ್ದಾರೆ ಹಾಗು ಮತ್ತಷ್ಟು ಹೊಸ ಪ್ರತಿಭೆಗಳು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ನ ಅಡಿಯಲ್ಲಿ ಶಿವಾಜಿ ಸುರತ್ಕಲ್-2 ಚಿತ್ರವು ನಿರ್ಮಾಣವಾಗುತ್ತಿದ್ದು ಆಕಾಶ್ ಶ್ರೀವತ್ಸ ಅವರು ನಿರ್ದೇಶನ ಮಾಡಿ ರೇಖಾ ಕೆ. ಎನ್ ಮತ್ತು ಅನುಪ್ ಗೌಡ ಇವರು ಬಂಡವಾಳ ಹೂಡುತ್ತಿದ್ದಾರೆ. ಮತ್ತೊಮ್ಮೆ ಕರ್ನಾಟಕದ ಸಕಲ ಕುಲ ಕೋಟಿಗೂ ಶಿವಾಜಿ ಸುರತ್ಕಲ್-2 ಚಿತ್ರತಂಡದಿಂದ ಯುಗಾದಿ ಹಬ್ಬದ ಹಾರ್ದಿಕ ಶುಭಾಷಯಗಳು..