HomeNewsವಿಕ್ರಾಂತ್‌ರೋಣನ ಅದ್ಭುತ ಲೋಕವನ್ನುತಮ್ಮ ಭಾಷೆಯಲ್ಲೇ ನೋಡೋ ಅವಕಾಶ

ವಿಕ್ರಾಂತ್‌ರೋಣನ ಅದ್ಭುತ ಲೋಕವನ್ನು
ತಮ್ಮ ಭಾಷೆಯಲ್ಲೇ ನೋಡೋ ಅವಕಾಶ

ಪಾಕೀಸ್ತಾನ ನೇಪಾಳದಲ್ಲೂ ಬಿಡುಗಡೆ !

೨೭ರಂದು ೨೭ ದೇಶಗಳಲ್ಲಿ ಚಿತ್ರದ ಪ್ರೀವ್ಯೂ ವಿಕ್ರಾಂತ್‌ರೋಣ ಪ್ರತಿದಿನ ತನ್ನ ವಿಶೇಷತೆಗಳಿಂದ ಸುದ್ದಿಯಾಗುತ್ತಿರೋ ಚಿತ್ರ. ಮೊನ್ನೆಯಷ್ಟೇ

ದುಬೈನಲ್ಲಿ ಚಿತ್ರದ ವರ್ಡ್ಲ್ ಪ್ರೀಮಿಯರ್ ಆಗುತ್ತಿರುವ ಬಗ್ಗೆ ಸುದ್ದಿಯಾಗಿತ್ತು, ಅದಾದ ನಂತರ
ಈಗ ‘ಸಿನೆಬಡ್ಸ್’ ಎಂಬ ಆಪ್‌ ಮೂಲಕ ಪ್ರೇಕ್ಷಕರು ವಿಕ್ರಾಂತ್‌ರೋಣ ಚಿತ್ರವನ್ನು ತನ್ನಿಷ್ಟದ ಭಾಷೆಗಳಲ್ಲಿ ನೋಡುವಂಥ ಅವಕಾಶವನ್ನು ಕಲ್ಪಿಸುತ್ತಿದೆ.
ನಿನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ನಿರ್ಮಾಪಕ ಜಾಕ್‌ಮಂಜು, ಈ ಆಪನ್ನು ಹೊರತಂದಿರುವ ಆದಿತ್ಯಕಶ್ಯಪ್ ಅವರು ಈಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಆದಿತ್ಯ ಕಶ್ಯಪ್ ಮಾತನಾಡುತ್ತ ನಮ್ಮ ಸಹೋದರ
ವಿನೀತ್ ಕಶ್ಯಪ್ ಅವರು ಡೆವಲಪ್ ಮಾಡಿದ ಆಪ್ ಇದಾಗಿದ್ದು, ಪ್ಲೇಸ್ಟೋರ್‌ನಲ್ಲಿ ಇದನ್ನು ಡೌನ್‌ಲೋಡ್
ಮಾಡಿಕೊಂಡು ತೆರೆಮೇಲೆ ಯಾವುದೇ ಭಾಷೆ ಪ್ರದರ್ಶನವಾಗುತ್ತಿರಲಿ, ನಾವು ಮೊಬೈಲ್ ನಲ್ಲಿ ನಮ್ಮಿಷ್ಟದ ಭಾಷೆ ಆಯ್ಕೆ ಮಾಡಿಕೊಂಡು ಹೆಡ್ ಫೋನ್ ಮೂಲಕ ಕೇಳುತ್ತ ಚಿತ್ರವನ್ನು ಎಂಜಾಯ್
ಮಾಡಬಹುದು. ಕಳೆದವಾರ ರಿಲೀಸಾದ ತಮಿಳಿನ ರಾಕೆಟ್ರಿ ಚಿತ್ರದ ಜೊತೆ ನಾವು ಟೈಅಪ್ ಆಗಿದ್ದು,
ಅದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಇದಲ್ಲದೆ ಓಟಿಟಿಯಲ್ಲಿ ಬರುವ ಚಿತ್ರಗಳನ್ನೂ ನಮ್ಮ ಭಾಷೆಯಲ್ಲೇ ವೀಕ್ಷಿಸಬಹುದಾಗಿದೆ. ಚಿತ್ರದ ನಿರ್ಮಾಪಕರು ಆಪ್‌ನೊಂದಿಗೆ ಮೊದಲೇ ಟೈಅಪ್ ಮಾಡಿಕೊಂಡಿದ್ದರೆ ಮಾತ್ರವೇ ಅದು ಸಾಧ್ಯವಾಗಲಿದೆ ಎಂದು ವಿವರಿಸಿದರು,
ನಂತರ ನಿರ್ಮಾಪಕ ಜಾಕ್ ಮಂಜು ಮಾತನಾಡುತ್ತ ಇವರು ಒಂದೆರಡು ತಿಂಗಳ ಹಿಂದೆಯೇ ನನ್ನಬಳಿ ಬಂದಿದ್ದರೆ ಬೆಂಗಾಳಿ, ಮರಾಠಿ, ಗುಜರಾತಿ ಭಾಷೆಯಲ್ಲೂ ನಮ್ಮ ಚಿತ್ರವನ್ನು ಡಬ್ ಮಾಡಬಹುದಿತ್ತು. ನಾವು ಡಬ್ ಮಾಡಿದ ಅಷ್ಟೂ ಭಾಷೆಯ ಸೌಂಡ್‌ಟ್ರ‍್ಯಾಕನ್ನು ಇವರಿಗೆ ಕೊಟ್ಟಾಗ ಅವರು ಅದನ್ನು ತಮ್ಮ ಆಪ್‌ಗೆ ಅಳವಡಿಸುತ್ತಾರೆ. ಕೆಲ ಕೇಂದ್ರಗಳಲ್ಲಿ ಎಲ್ಲಾ ಭಾಷೆಯಲ್ಲಿ ರಿಲೀಸ್ ‌ಮಾಡಲು ಸಾಧ್ಯವಾಗದಿದ್ದಾಗ ಆ ಭಾಷೆಯ ಜನರಿಗೆ ಇದರಿಂದ ಅನುಕೂಲವಾಗುತ್ತದೆ. ಇದು
ಚಿತ್ರದ ಯಾವುದೇ ಕಂಟೆಂಟನ್ನು ಕಾಪಿ ಮಾಡಲ್ಲ, ಇದೆಲ್ಲ ತಿಳಿದುಕೊಂಡೇ ನಾವು ಮುಂದುವರೆಯುತ್ತಿದ್ದೇವೆ ಎಂದರು. ನಂತರ ಚಿತ್ರದ ರಿಲೀಸ್ ಕುರಿತು ಮಾತನಾಡುತ್ತ, ೨೭ರಂದು ಪ್ರಪಂಚದ ೨೭ದೇಶಗಳಲ್ಲಿ ಪ್ರೀವ್ಯೂ ಆಗುತ್ತಿದೆ. ಜೊತೆಗೆ ದುಬೈನಲ್ಲಿ ೫ ಭಾಷೆಯಲ್ಲೂ ಪ್ರದರ್ಶನವಾಗಲಿದೆ. ನಿನ್ನೆಯಷ್ಟೇ ನೇಪಾಳ ಕನ್‌ಫರ್ಮ್ ಆಯ್ತು, ಅಲ್ಲದೆ ಪಾಕಿಸ್ತಾನದಲ್ಲೂ ವಿಕ್ರಾಂತ್‌ರೋಣ ರಿಲೀಸಾಗುವ ಸಾಧ್ಯತೆಯಿದೆ. ಪ್ರಪಂಚದಾದ್ಯಂತ 3200ರಿಂದ 3500 ಚಿತ್ರಮಂದಿಗಳಲ್ಲಿ ವಿಕ್ರಾಂತ್ ರೋಣ ರಿಲೀಸಾಗುತ್ತಿದೆ, ಕರ್ನಾಟಕದಲ್ಲೇ 400ರಿಂದ 420 ಥೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದ್ದು, ಕರ್ನಾಟಕಕ್ಕಿಂತ ತೆಲುಗು ರಾಜ್ಯಗಳಲ್ಲಿ ಸಂಖ್ಯೆ ಹೆಚ್ಚಾಗುವ
ಸಾಧ್ಯತೆಯಿದೆ. ಈಗಾಗಲೇ ಬಹುತೇಕ ಕಡೆಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ಉತ್ತಮ ಪ್ರತಿಕ್ರಿಯೆ
ಸಿಗುತ್ತಿದೆ. ಬಾಲಿವುಡ್‌ನಲ್ಲಿ 900 ಚಿತ್ರಮಂದಿರ, ಟಾಲಿವುಡ್‌ನಲ್ಲಿ 350ಕ್ಕೂ ಹೆಚ್ಚು ಥಿಯೇಟರ್ ಅಲ್ಲದೆ
ವಿದೇಶಗಳಲ್ಲಿ 800ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ವಿಕ್ರಾಂತ್‌ರೋಣ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ನಾಳೆ, ನಾಡಿದ್ದು ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಈಗಾಗಲೇ ರಿಲೀಸಾಗಿರುವ ಟ್ರೈಲರ್ ಜೊತೆಗೆ ಹಾಡುಗಳಂತೂ ಒಂದಕ್ಕಿಂತ ಒಂದು ಹೆಚ್ಚಾಗಿ
ವೈರಲ್ ಆಗಿವೆ. ಅದರಲ್ಲೂ ಯಾರ ಮೊಬೈಲ್‌ನಲ್ಲಿ ನೋಡಿದರೂ ರಾರಾ.. ರಕ್ಕಮ್ಮ ಹಾಡಿನ
ರೀಲ್ಸ್ ನದ್ದೇ ಅಬ್ಬರ. ಈ ಹಾಡು ಅಷ್ಟೂ ಭಾಷೆಗಳಲ್ಲೂ ದೊಡ್ಡ ಕ್ರೇಜನ್ನೇ ಸೃಷ್ಟಿಸಿದೆ.ಶೇಂಗಾ.೯೦ರಷ್ಟು ೩ಡಿ ವರ್ಷನ್ ಚಿತ್ರ ರಿಲೀಸಾಗುತ್ತಿದ್ದು, ೩ಡಿ ಇಲ್ಲದ ಕಡೆ ಮಾತ್ರವೇ ೨ಡಿ
ವರ್ಷನ್ ಪ್ರದರ್ಶನವಾಗಲಿದೆ.

Must Read

spot_img

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1745

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1745
Share via
Copy link
Powered by Social Snap