ರೆಬಲ್ ಹುಡುಗರು ತಂಡ ತೆರೆಯ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದೆ. ಅಗಸ್ಟ್ 12ನೇ ತಾರೀಕು ಎಲ್ಲೆಡೆ ಅದ್ದೂರಿಯಾಗಿ ರಿಲೀಸ್ ಆಗ್ತಾ ಇದೆ ರೆಬಲ್ ಹುಡುಗರು ಸಿನಿಮಾ. ಈ ಸಿನಿಮಾದ ಹಾಡನ್ನು ಈಗಾಗಲೇ ಯೂಟ್ಯೂಬ್ ನಲ್ಲಿ ಬಿಟ್ಟಿದ್ದು. ಪ್ರೀತಿಯ ವಿರಹವನ್ನು ಹೇಳುವ ಈ ಗೀತೆ ಅದ್ಭುತವಾಗಿ ಕೇಳಿ ಬರ್ತಾ ಇದೆ. ಎಲ್ಲೆಡೆ “ಕಣ್ಣೀರ ಹನಿಯೊಂದು” ಗೀತೆ ಸಕ್ಕತ್ ಸೌಂಡ್ ಮಾಡ್ತಾ ಇದೆ. ಹಾಡು ಕೇಳುತ್ತಿದ್ದರೆ ಪ್ರೀತಿಯಲ್ಲಿ ವಿರಹ ವೇದನೆಯನ್ನು ಅನುಭವಿಸುವ ಪ್ರತಿ ಮನುಷ್ಯನ ಮನಸ್ಸು ಕರಗುತ್ತದೆ. ಹಾಡನ್ನು ಇಷ್ಟು ಅದ್ಭುತವಾಗಿ ಮಾಡಿರುವ ತಂಡ ಸಿನಿಮಾ ಬಿಡುಗಡೆಗೆ ತಯಾರಿಯಾಗಿದೆ.
ಇದೇ ಆಗಸ್ಟ್ 12ರಂದು ಸಿನಿಮಾ ತೆರೆ ಕಾಣಲಿದೆ. ಸಿನಿಮಾ ಮುಂಚೆ ಬಿಡುಗಡೆಯಾಗಿರುವ ಹಾಡು ಎಲ್ಲರ ಮನಸ್ಸು ಕದಿಯುತ್ತಿದೆ. ಎಲ್ಲರನ್ನೂ ಮನ ಗೆದ್ದಿರುವ ಈ ಹಾಡು ಸಮೀರ ಮುಡಿಪು ಅವರ ಧ್ವನಿಯಲ್ಲಿ ಮೂಡಿ ಬಂದಿದೆ. ಗ್ರಾಮೀಣ ಭಾಗದಲ್ಲಿ ಶೂಟಿಂಗ್ ಮಾಡಲಾಗಿದ್ದು, ಹಾಡಿನ ವಿಶುವಲ್ ಕಣ್ಣಿಗೆ ಆನಂದವನ್ನು ನೀಡುತ್ತದೆ. ಈ ಸಂಪೂರ್ಣ ಹಾಡನ್ನು ಧನುಷ್ ಗೌಡ ಅವರು ನಿರ್ದೇಶಸಿದ್ದಾರೆ. ಜೊತೆಗೆ ಶ್ರೀನಿವಾಸ್ ಗೌಡ ಬಿಪಿ ಅವರ ನಿರ್ಮಾಣದಲ್ಲಿ ಹಂತವು ಪ್ರತಿ ಕ್ಷಣವು ಅದ್ಭುತವಾಗಿ ಮೂಡಿಬಂದಿದೆ. ಯೂಟ್ಯೂಬ್ ನಲ್ಲಿ ಈಗ ಸೌಂಡ್ ಮಾಡುತ್ತಿರುವ ರೆಬಲ್ ಹುಡುಗರು ಸಿನಿಮಾದ ಹಾಡಿನಲ್ಲಿ ವೇಣು ಗೌಡ, ಶೃತಿ ಗೌಡ, ಹೊನ್ನವಳ್ಳಿ ಕೃಷ್ಣ, ಟಿಕ್ ಟಾಕ್ ವಿನೋದ್ ಆನಂದ್, ಆಟೋ ನಾಗರಾಜ್ ಕಾಣಿಸಿಕೊಂಡಿದ್ದಾರೆ.
ಅದ್ಭುತವಾಗಿ ಮೂಡಿ ಬಂದಿರುವ ಈ ಹಾಡಿಗೆ ಎಲ್ಲೆಡೆ ಇಂದ ಪ್ರಶಂಸೆ ಕೇಳಿಬರುತ್ತಿದೆ. ಕನ್ನಡ ಚಿತ್ರರಂಗದದಲ್ಲಿ ಇಂತಹ ಮನಮೋಹಕ ಹಾಡುಗಳನ್ನು ಕೇಳುವುದೇ ಆಹ್ಲಾದಕರ. ಈ ಹಾಡನ್ನು ಅದ್ಭುತವಾಗಿ ಸಮೀರ್ ಮುಡಿಪು ರಚಿಸಿದ್ದಾರೆ. ಅವರ ಧ್ವನಿಯಲ್ಲಿ ಹಾಡು ಮೂಡಿ ಬಂದಿದ್ದು ಕೇಳಲು ತುಂಬಾ ಹಿತವಾಗಿದೆ. ಹೊಸ ಕಲಾವಿದರಿಗೆ ಅವಕಾಶ ಕೊಟ್ಟು ಇಷ್ಟು ಒಳ್ಳೆಯ ಹಾಡನ್ನು ನಿರ್ಮಿಸಿದ ತಂಡ ಶ್ಲಾಘನೀಯ.